ನವದೆಹಲಿ:ಕರೊನಾ ರೋಗಲಕ್ಷಣ ಕಾಣಿಸಿಕೊಂಡಲ್ಲಿ ಅಥವಾ ಕೋವಿಡ್-19 ಪಾಸಿಟಿವ್ ಇರಬಹುದೇ ಎಂಬ ಅನುಮಾನ ಕಾಡಿದಲ್ಲಿ ಇನ್ನುಮುಂದೆ ಟೆಸ್ಟ್​ ಮಾಡಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗಬೇಕಾಗಿಲ್ಲ. ಅದು ಕೂಡ ವರ್ಕ್​ ಫ್ರಂ ಹೋಮ್ ರೀತಿಯ ಮನೆಯಲ್ಲೇ ಸಾಧ್ಯ. ಅದರಲ್ಲೂ ಕರೊನಾ ಟೆಸ್ಟ್​ ನೀವೇ ಪರೀಕ್ಷೆ ಮಾಡಿಕೊಳ್ಳಬಹುದು.
ಸ್ವತಃ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಕೋವಿಸೆಲ್ಫ್​ ಎಂಬ ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​(ಆರ್​ಎಟಿ) ಕಿಟ್​ವೊಂದನ್ನು ಪುಣೆಯಲ್ಲಿರುವ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್​ ಎಂಬ ಕಂಪನಿ ಕಂಡುಹಿಡಿದಿದೆ. ಈ ಕಿಟ್ ಮೂಲಕ 2 ನಿಮಿಷದಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸಾಧ್ಯವಿದ್ದು, 15 ನಿಮಿಷಗಳಲ್ಲೇ ಫಲಿತಾಂಶ ಕೂಡ ಲಭಿಸುತ್ತದೆ. ಈ ಟೆಸ್ಟ್​ ಕಿಟ್​ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾನ್ಯತೆ ಕೂಡ ಸಿಕ್ಕಿದೆ.
ಇದನ್ನೂ ಓದಿ:ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!
ಹೀಗೆ ಸ್ವಯಂಪರೀಕ್ಷೆ ಮಾಡಿಸಿಕೊಳ್ಳಬಹುದಾದ ಕೋವಿಸೆಲ್ಫ್​ ಟೆಸ್ಟ್​ ಕಿಟ್​ ಇನ್ನೊಂದು ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ದೇಶದಲ್ಲಿರುವ 7 ಲಕ್ಷಕ್ಕೂ ಅಧಿಕ ಫಾರ್ಮಸಿಗಳಲ್ಲಿ ಹಾಗೂ ಆನ್​ಲೈನ್​ ಫಾರ್ಮಸಿಗಳಲ್ಲೂ ಈ ಕಿಟ್​​ಗಳು ಸಿಗಲಿವೆ. ಭಾರತದ ಶೇ. 90ರಷ್ಟು ಪಿನ್​ಕೋಡ್ ಪ್ರದೇಶಗಳಿಗೆ ಈ ಕಿಟ್ ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ ಕಂಪನಿಯ ನಿರ್ದೇಶಕ ಸುಜೀತ್ ಜೈನ್ ತಿಳಿಸಿದ್ದಾರೆ.
ಇದು ಸ್ವಯಂಬಳಕೆಗೆ ಮಾತ್ರ. ರೋಗಲಕ್ಷಣವಿದ್ದರೆ ಅಥವಾ ಸೋಂಕಿತರು ಎಂದು ಲ್ಯಾಬ್​ ಟೆಸ್ಟ್​ಗಳಿಂದ ದೃಢಪಟ್ಟವರ ಸಂಪರ್ಕಕ್ಕೆ ಬಂದಿದ್ದರೆ ಈ ಕಿಟ್​ ಮೂಲಕ ಪರೀಕ್ಷೆ ಮಾಡಿಕೊಳ್ಳಬಹುದು. ಈ ಟೆಸ್ಟ್​​ನಲ್ಲಿ ಪಾಸಿಟಿವ್ ಬಂದರೆ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕಾದ ಅಗತ್ಯವಿಲ್ಲ. ಆದರೆ ರೋಗಲಕ್ಷಣಗಳಿದ್ದೂ ಈ ಟೆಸ್ಟ್​ನಲ್ಲಿ ನೆಗೆಟಿವ್ ಬಂದವರು ಆರ್​ಟಿ-ಪಿಸಿಆರ್ ಮಾಡಿಸಿಕೊಳ್ಳುವುದು ಅಗತ್ಯ. ವಯಸ್ಕರೆಲ್ಲರೂ ಮ್ಯಾನುಯಲ್ ನೋಡಿ ಈ ಕಿಟ್​ ಬಳಸಬಹುದು ಎಂದು ಐಸಿಎಂಆರ್​ ತಿಳಿಸಿದೆ.
ಇದನ್ನೂ ಓದಿ:ಕರ್ತವ್ಯನಿರತ ಪೊಲೀಸ್ ನಿಧನ; ಡ್ಯೂಟಿಯಲ್ಲಿದ್ದಾಗಲೇ ತಲೆಸುತ್ತು ಬಂದು ಬಿದ್ದ ಹೆಡ್​ ಕಾನ್ಸ್​ಟೆಬಲ್​
ಕೋವಿಸೆಲ್ಫ್​ ಟೆಸ್ಟ್​ನಿಂದ ಬಂದ ಫಲಿತಾಂಶವನ್ನು ಗೂಗಲ್​ ಪ್ಲೇಸ್ಟೋರ್​ನಿಂದ ಡೌನ್​ಲೋಡ್ ಮಾಡಿಕೊಳ್ಳಲಾದ ಮೈ ಲ್ಯಾಬ್​ ಆ್ಯಪ್​ಗೆ ಅಪ್​ಲೋಡ್ ಮಾಡಬೇಕು. ಅಲ್ಲದೆ ಪರೀಕ್ಷೆ ಮಾಡಿಕೊಂಡವರು ಪರೀಕ್ಷೆ ಬಳಿಕ ಟೆಸ್ಟ್ ಸ್ಟ್ರಿಪ್​ ಫೋಟೋ ತೆಗೆದು ಅದನ್ನೂ ಅಪ್​ಲೋಡ್ ಮಾಡಬೇಕು. ಈ ಎಲ್ಲ ಮಾಹಿತಿ ಆ್ಯಪ್​ ಮುಖೇನ ಐಸಿಎಂಆರ್​ಗೆ ಕನೆಕ್ಟ್​ ಆಗಿರುವ ಸರ್ವರ್​ ಮೂಲಕ ಕೋವಿಡ್​ 19 ಟೆಸ್ಟಿಂಗ್ ಪೋರ್ಟಲ್​ನಲ್ಲಿ ದಾಖಲಾಗಲಿವೆ ಎಂದು ಐಸಿಎಂಆರ್​ ತಿಳಿಸಿದೆ.

ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
