ಪುಣೆ :ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ತೆರೆಯಲ್ಪಡುವ ಕರೊನಾ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳು ಕರೊನಾ ಲಸಿಕೆಯ ವೆಚ್ಚವನ್ನು ತಾವೇ ಭರಿಸಿ ಜನರಿಗೆ ಉಚಿತ ಲಸಿಕೆ ಒದಗಿಸುವುದಾಗಿ ಘೋಷಿಸಿವೆ. ಈ ಸಂದರ್ಭದಲ್ಲಿ ಭಾರತದ ಎರಡು ಕರೊನಾ ಲಸಿಕೆಗಳಲ್ಲಿ ಹೆಚ್ಚಾಗಿ ನೀಡಲ್ಪಡುತ್ತಿರುವ ಕೋವಿಶೀಲ್ಡ್​ಲಸಿಕೆಯು ರಾಜ್ಯ ಸರ್ಕಾರಗಳಿಗೆ ಮುಂಚೆ ಘೋಷಿಸಿದ್ದಕ್ಕಿಂತ ಶೇ.25 ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ಕೋವಿಶೀಲ್ಡ್​​ಅನ್ನು ಉತ್ಪಾದಿಸುವ ದೇಶದ ಅತಿದೊಡ್ಡ ಲಸಿಕೆ ಉತ್ಪಾದಕ ಸೀರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಡಾರ್ ಪೂನವಾಲಾ, “ಲೋಕೋಪಕಾರಿ ಭಾವನೆಯಿಂದ ಪ್ರತಿ ಡೋಸ್​ಗೆ 400 ರೂ. ಗಳಿಂದ 300 ರೂ.ಗಳಿಗೆ ದರವನ್ನು ಇಳಿಸುತ್ತಿದ್ದೇನೆ. ಇದು ಸಾವಿರಾರು ಕೋಟಿ ರಾಜ್ಯದ ಹಣವನ್ನು ಉಳಿಸುತ್ತದೆ. ಇದರಿಂದ ಹೆಚ್ಚು ವ್ಯಾಕ್ಸಿನೇಷನ್‌ಗೆ ಅವಕಾಶ ಉಂಟಾಗಿ, ಅಸಂಖ್ಯಾತ ಜೀವಗಳನ್ನು ಉಳಿಸಲು ಸಹಾಯಕವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !
ಒಟ್ಟಿನಲ್ಲಿ ಕೋವಿಶೀಲ್ಡ್​ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್​ಗೆ 150 ರೂ. ದರದಲ್ಲಿ, ರಾಜ್ಯ ಸರ್ಕಾರಗಳಿಗೆ 300 ರೂ.ನಂತೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗಳ ದರದಲ್ಲಿ ಲಭ್ಯವಾಗಲಿದೆ. ಮತ್ತೊಂದು ಮೇಡ್​ ಇನ್​ ಇಂಡಿಯಾ ಲಸಿಕೆಯಾದ ಭಾರತ್ ಬಯೋಟೆಕ್​​ನ ಕೋವಾಕ್ಸಿನ್​ನ ದರ ಕೇಂದ್ರ ಸರ್ಕಾರಕ್ಕೆ 150 ರೂ.ಗಳಷ್ಟೇ ಇದ್ದರೂ, ರಾಜ್ಯ ಸರ್ಕಾರಗಳಿಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ನಂತೆ ನಿಗದಿಯಾಗಿದೆ.(ಏಜೆನ್ಸಿಸ್)
ಕರೊನಾ ಕರ್ಫ್ಯೂ ಉಲ್ಲಂಘಿಸಿ ಶೂಟಿಂಗ್ ! ನಟ ಜಿಮ್ಮಿ ಶೇರ್​​ಗಿಲ್ ಸೇರಿ 35 ಜನರ ಮೇಲೆ ಕೇಸ್

ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
