ನವದೆಹಲಿ:ದೇಶಾದ್ಯಂತ ಹಠಾತ್ ಹೃದಯಾಘಾತ, ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಿಗೇ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಕೋವಿಶೀಲ್ಡ್​ ಲಸಿಕೆಯನ್ನು ಕೊಡಬಾರದಿತ್ತು ಎಂಬುದಾಗಿ ಬ್ರಿಟಿಷ್​-ಇಂಡಿಯನ್ ಕಾರ್ಡಿಯಾಲಜಿಸ್ಟ್​​ ಅಭಿಪ್ರಾಯ ಪಟ್ಟಿದ್ದಾರೆ.
ಖ್ಯಾತ ಬ್ರಿಟಿಷ್​-ಇಂಡಿಯನ್ ಕಾರ್ಡಿಯಾಲಜಿಸ್ಟ್​ ಡಾ.ಅಸೀಮ್ ಮಲ್ಹೋತ್ರಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೃದಯಾಘಾತ ಹಾಗೂ ಸ್ಟ್ರೋಕ್​ಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸೀರಮ್​ ಇನ್​ಸ್ಟಿಟ್ಯೂಟ್​​ನಿಂದ ಭಾರತದಲ್ಲಿ ತಯಾರಿಸಲಾದ ಲಸಿಕೆ ಎಂಆರ್​​ಎನ್​ಎ ಕೋವಿಡ್-19 ಲಸಿಕೆಗಳಿಗಿಂತಲೂ ಕಳಪೆಯಾಗಿದೆ ಎಂದು ಹೇಳಿದ್ದಾರೆ.
ಆಕ್ಸ್​ಫರ್ಡ್​​-ಆಸ್ಟ್ರಜೆನೆಕಾದ ಲಸಿಕೆ ಭಾರತದಲ್ಲಿ ಪರಿಚಯಿಸಲಾದ ಮೊದಲ ಲಸಿಕೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ಎರಡು ಡೋಸ್ ಮತ್ತು ಬೂಸ್ಟರ್ ಡೋಸ್​​ಗೆ ಅದನ್ನು ಅನುಮೋದಿಸಲಾಗಿದೆ. ಮತ್ತೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ ಎರಡು ವರ್ಷಗಳ ಹಿಂದೆಯೇ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಕೋವಿಶೀಲ್ಡ್ ಬಳಸಲು ಹಸಿರು ನಿಶಾನೆ ತೋರಿತ್ತು ಎಂದ ಅವರು, ದೇಶದಲ್ಲಿ ಮೊದಲನೆಯದಾಗಿ ಎಂದಿಗೂ ಲಸಿಕೆ ಕೊಡಬಾರದು, ಹೆಚ್ಚು ಲಸಿಕೆ ಕೊಟ್ಟಷ್ಟೂ ಗಂಭೀರ ಅಡ್ಡಪರಿಣಾಮದ ಸಾಧ್ಯತೆ ಜಾಸ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
BREAKING:
What’s driving excess deaths?
‘Big Pharma often behave like psychopaths: deliberately deceiving others for profit with callous unconcern for the safety of others. This is essentially what we are seeing.‘https://t.co/0kRomtqNEd
Via@JulesSladdenin@SpectatorOz
— Dr Aseem Malhotra (@DrAseemMalhotra)February 13, 2023

ಎಂಆರ್​ಎನ್​ಎ ಕೋವಿಡ್​-19 ಲಸಿಕೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವವರಲ್ಲಿ ಒಬ್ಬರಾಗಿರುವ ಡಾ.ಅಸೀಮ್​ ಮಲ್ಹೋತ್ರ, ಕೋವಿಶೀಲ್ಡ್ ಬಳಕೆಯ ಬಗ್ಗೆ ಸಂಪೂರ್ಣ ಸುರಕ್ಷತಾ ಪರಿಶೀಲನೆಯನ್ನು ಒತ್ತಾಯಿಸಿದ್ದಾರೆ. ಮಾತ್ರವಲ್ಲ ಆಸ್ಟ್ರಾಜೆನೆಕಾದ ಕೋವಿಶೀಲ್ಡ್​ ಲಸಿಕೆಯನ್ನು ಯುಕೆ ಹಾಗೂ ಇತರ ಕೆಲವು ಯುರೋಪಿಯನ್ ದೇಶಗಳಲ್ಲಿ ಗಂಭೀರ ಅಡ್ಡಪರಿಣಾಮದ ಹಿನ್ನೆಲೆಯಲ್ಲಿ ತಡೆಹಿಡಿದಿದ್ದಾಗ ಭಾರತದಲ್ಲಿ ಏಕೆ ಕೊಡಲಾಯಿತು? ಎಂದೂ ಪ್ರಶ್ನಿಸಿದ್ದಾರೆ.
ಆಕ್ಸ್​​ಫರ್ಡ್​ ಆಸ್ಟ್ರಾಜೆನೆಕಾದ ಲಸಿಕೆ ಕುರಿತಂತೆ ಹಲವಾರು ಪ್ರತಿಕೂಲ ವರದಿಗಳು ಬಂದಿವೆ. 97 ಲಕ್ಷ ಡೋಸ್​ಗಳ ಪೈಕಿ ಗಂಭೀರ ಅಡ್ಡಪರಿಣಾಮಗಳ ಕುರಿತು 8 ಲಕ್ಷ ವರದಿಗಳು ಬಂದಿವೆ ಎಂದಿದ್ದಾರೆ. ದೇಶದಲ್ಲಿ ಈಗಾಗಲೇ ಶೇ.90ಕ್ಕೂ ಅಧಿಕ ಮಂದಿ ಕೋವಿಡ್​ಗೆ ತೆರೆದುಕೊಂಡಿದ್ದು, ಸಹಜ ರೋಗನಿರೋಧಕ ಶಕ್ತಿ ಬೆಳೆದಿದೆ. ಹೀಗಾಗಿ ಭಾರತದಲ್ಲಿ ಇನ್ನು ಲಸಿಕೆ ಅಗತ್ಯವಿಲ್ಲ, ಮಾತ್ರವಲ್ಲ ಬೂಸ್ಟರ್ ಡೋಸ್ ಕೊಡಬೇಕಾಗಿಯೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

ಟರ್ಕಿಯಲ್ಲೀಗ ಇದು ಹಿಂದೆಂದಿಗಿಂತಲೂ ಭಯಂಕರ ಭೂಕಂಪ; ಸತ್ತವರ ಸಂಖ್ಯೆ 33 ಸಾವಿರಕ್ಕೂ ಅಧಿಕ

ನಿನ್ನೆ ಮೊಮ್ಮಗ, ಇಂದು ಅಜ್ಜ ಹುಲಿದಾಳಿಗೆ ಬಲಿ; ಇಬ್ಬರನ್ನು ಕೊಂದ ಹುಲಿಯನ್ನು ಶೂಟ್ ಮಾಡಿ ಸಾಯಿಸಿ ಎಂದು ಪಟ್ಟುಹಿಡಿದ ಜನರು

ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:14 − thirteen =
Remember me
