ಲಂಡನ್/ನವದೆಹಲಿ:ರಕ್ತ ಹೆಪು್ಪಗಟ್ಟುವಿಕೆ ಮತ್ತು ಪ್ಲೇಟ್​ಲೆಟ್ ಸಂಖ್ಯೆ ಇಳಿಕೆಯಂಥ ಅಡ್ಡ ಪರಿಣಾಮವಾಗುತ್ತದೆ ಎಂದು ಕೋವಿಡ್-19 ವ್ಯಾಕ್ಸಿನ್ ಕೋವಿಶೀಲ್ಡ್ ಬಗ್ಗೆ ಒಪ್ಪಿಕೊಂಡಿದ್ದ ಬ್ರಿಟನ್​ನ ಪ್ರಮುಖ ಔಷಧ ತಯಾರಿಕೆ ಕಂಪನಿ ಆಸ್ಟ್ರಾಜೆನೆಕಾ, ಇದೀಗ ಜಗತ್ತಿನಾದ್ಯಂತದಿಂದ ಲಸಿಕೆ ವಾಪಸ್ ಪಡೆಯಲು ಆಂಭಿಸಿದೆ. ಸಾಂಕ್ರಾಮಿಕತೆ ಆರಂಭ ಆದಾಗಿನಿಂದ ಅಪ್​ಡೇಟ್ ಮಾಡಲಾದ ಲಸಿಕೆ ಅಧಿಕ ಪ್ರಮಾಣದಲ್ಲಿ ಲಭ್ಯ ಇರುವುದರಿಂದ ಕೋವಿಶೀಲ್ಡ್ ವಾಪಸ್ ಪಡೆಯುತ್ತಿರುವುದಾಗಿ ಆಸ್ಟ್ರಾಜೆನೆಕಾ ಹೇಳಿಕೊಂಡಿದೆ. ಕೋವಿಶೀಲ್ಡ್ ಅಡ್ಡ ಪರಿಣಾಮದ ಬಗ್ಗೆ ಅದರ ತಯಾರಿಕಾ ಕಂಪನಿಯೇ ಒಪ್ಪಿಕೊಂಡಿದ್ದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು, ಭಾರತ ಸಹಿತ ಹಲವು ದೇಶಗಳಲ್ಲಿ ಆಸ್ಟ್ರಾಜೆನೆಕಾ ವಿರುದ್ಧ ಕಾನೂನು ಸಮರಕ್ಕೂ ಮುಂದಾಗಿದ್ದಾರೆ.
ಆಸ್ಟ್ರಾಜೆನೆಕಾದ ಲಸಿಕೆಯನ್ನು ಭಾರತದಲ್ಲಿ ಭಾರತ ಸೀರಂ ಸಂಸ್ಥೆ (ಸೀರಂ) ಪಾಲುದಾರಿಕೆಯಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಪೂರೈಸಲಾಗಿತ್ತು. ಈ ಕೋವಿಡ್-19 ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿತ್ತು. ಅದನ್ನು ಯುರೋಪ್​ನಲ್ಲಿ ವ್ಯಾಕ್ಸ್​ಜೆವ್ರಿಯಾ ಎಂಬ ಹೆಸರಿನಲ್ಲಿ ಜನರಿಗೆ ನೀಡಲಾಗಿತ್ತು.
ಐರೋಪ್ಯ ಸಂಸ್ಥೆ ಸ್ಪಷ್ಟನೆ:27 ದೇಶಗಳ ಐರೋಪ್ಯ ಒಕ್ಕೂಟದಲ್ಲಿ (ಇಯು) ವ್ಯಾಕ್ಸ್​ಜೆವ್ರಿಯಾ ಇನ್ನು ಮುಂದೆ ಬಳಕೆಯಾಗದು ಎಂದು ಒಕ್ಕೂಟದ ಔಷಧ ನಿಯಂತ್ರಣ ಸಂಸ್ಥೆ ಯುರೋಪಿಯನ್ ಮೆಡಿಸಿನ್ ಏಜೆನ್ಸಿ ಮಂಗಳವಾರ ತಿಳಿಸಿದೆ. ಆಸ್ಟ್ರಾಜೆನೆಕಾ ಮಾರ್ಚ್​ನಲ್ಲೇ ಸ್ವಪ್ರೇರಿತವಾಗಿ ಲಸಿಕೆಯನ್ನು ವಾಪಸ್ ಪಡೆದಿರುವುದರಿಂದ ಅದರ ಬಳಕೆಯನ್ನು ನಿಲ್ಲಿಸಲಾಗುತ್ತದೆ ಎಂದಿದೆ.
ಅಪಾರ ಹೆಮ್ಮೆ:ಅಡ್ಡ ಪರಿಣಾಮವನ್ನು ಸ್ವತಃ ಒಪ್ಪಿಕೊಂಡಿದ್ದರೂ ಜಾಗತಿಕ ಸಾಂಕ್ರಾಮಿಕತೆ ಕೊನೆಗೊಳಿಸುವಲ್ಲಿ ವ್ಯಾಕ್ಸ್​ಜೆವ್ರಿಯಾ ವಹಿಸಿದ ಗಣನೀಯ ಪಾತ್ರದ ಬಗ್ಗೆ ತನಗೆ ಅಪಾರ ಹೆಮ್ಮೆ ಇದೆ ಆಸ್ಟ್ರಾಜೆನೆಕಾ ಕಂಪನಿ ಹೇಳಿಕೊಂಡಿದೆ.
65 ಲಕ್ಷ ಪ್ರಾಣ ರಕ್ಷಣೆ:ಆಸ್ಟ್ರಾಜೆನೆಕಾದ ಲಸಿಕೆ ಬಳಕೆಯ ಮೊದಲ ವರ್ಷದಲ್ಲೇ ಜಗತ್ತಿನಾದ್ಯಂತ 65 ಲಕ್ಷಕ್ಕೂ ಅಧಿಕ ಜನರ ಪ್ರಾಣ ರಕ್ಷಣೆಯಾಗಿದೆ. 300 ಕೋಟಿಗೂ ಹೆಚ್ಚು ಡೋಸ್ ಸರಬರಾಜು ಮಾಡಲಾಗಿತ್ತು ಎಂದು ಸ್ವತಂತ್ರ ಅಂದಾಜುಗಳೇ ಹೇಳಿವೆ ಎಂದು ಆಸ್ಟ್ರಾಜೆನೆಕಾ ತಿಳಿಸಿದೆ. ವಿಶ್ವದೆಲ್ಲೆಡೆಯ ಸರ್ಕಾರಗಳು ನಮ್ಮ ಪ್ರಯತ್ನಗಳನ್ನು ಗುರುತಿಸಿವೆ. ಜಾಗತಿಕ ಸಾಂಕ್ರಾಮಿಕತೆಯನ್ನು ಕೊನೆಗೊಳಿ ಸುವಲ್ಲಿ ನಮ್ಮ ಲಸಿಕೆ ಮಹತ್ವದ ಅಂಶವಾಗಿತ್ತೆಂದು ಮಾನ್ಯ ಮಾಡಿವೆ ಎಂದು ಕಂಪನಿ ಹೇಳಿಕೊಂಡಿದೆ.
220 ಕೋಟಿ ಡೋಸೇಜ್: ಭಾರತದಲ್ಲಿ ಒಟ್ಟು 220 ಕೋಟಿ ಡೋಸೇಜ್ ಕೋವಿಡ್-19 ಲಸಿಕೆ ನೀಡಲಾಗಿದ್ದು ಆ ಪೈಕಿ ಬಹುತೇಕ ಕೋವಿಶೀಲ್ಡ್ ವ್ಯಾಕ್ಸಿನ್ ಆಗಿವೆ. ವೈವಿಧ್ಯಮಯ ವೇರಿಯಂಟ್ ಆಗಿ ಕೋವಿಡ್-19 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಅಪ್​ಡೇಟೆಡ್ ಲಸಿಕೆ ಹೆಚ್ಚುವರಿ ಪ್ರಮಾಣದಲ್ಲಿ ಲಭ್ಯವಿದೆ. ಹೀಗಾಗಿ ವ್ಯಾಕ್ಸ್​ಜೆವ್ರಿಯಾ ಬೇಡಿಕೆ ಕುಸಿದಿದೆ. ಅದನ್ನು ಈಗ ಉತ್ಪಾದಿಸಲಾಗುತ್ತಿಲ್ಲ ಅಥವಾ ಸರಬರಾಜು ಮಾಡುತ್ತಿಲ್ಲ ಎಂದು ಆಸ್ಟ್ರಾಜೆನೆಕಾ ಹೇಳಿದೆ.
ನವದೆಹಲಿ:ಮಕ್ಕಳು ನಿಷ್ಕ್ರಿಯರಾಗಿದ್ದು, ಆಟಗಳಲ್ಲಿ ತೊಡಗಿ ಕೊಳ್ಳದಿದ್ದರೆ ಪಾಲಕರು ಈಗಲೇ ಎಚ್ಚರ ವಹಿಸುವುದು ಸೂಕ್ತ. ಏಕೆಂದರೆ, ಬಾಲ್ಯದಲ್ಲಿ ಯಾವುದೇ ತೆರನಾದ ಚಟುವಟಿಕೆಗಳಲ್ಲಿ ಭಾಗವಹಿಸದೆ ಸುಮ್ಮನೆ ಕುಳಿತುಕೊಳ್ಳುವುದರಿಂದಾಗಿ ಹೃದಯ ಹಿಗ್ಗುವಿಕೆ ಸಮಸ್ಯೆ ಉಂಟಾಗುತ್ತದೆ ಎಂದು ಹೊಸ ವೈದ್ಯಕೀಯ ಅಧ್ಯಯನ ತಿಳಿಸಿದೆ.

ಹೃದಯದ ದ್ರವ್ಯರಾಶಿ ಮತ್ತು ಗಾತ್ರದಲ್ಲಿ ಅತಿಯಾದ ಹೆಚ್ಚಳವು ಲೆಫ್ಟ್ ವೆಂಟ್ರಿಕ್ಯುಲರ್ ಹೈಪರ್​ಟ್ರೋಫಿ ಎಂದು ಕರೆಯಲ್ಪಡುವ ಹೃದಯ ಸಮಸ್ಯೆಗೆ ಕಾರಣವಾಗಲಿದ್ದು, ಇದರಿಂದಾಗಿ ವಯಸ್ಕರಲ್ಲಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣ ಉಂಟಾಗುವ ಸಂಭವ ಇರುತ್ತದೆ ಎಂದು ಅಧ್ಯಯನ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ.
ಹದಿಹರೆಯದ ಮಕ್ಕಳು, ಸಣ್ಣ ಮಗುವಿನ ಕುರಿತು ಅಧ್ಯಯನ ಮಾಡಿರುವ ಸಂಶೋಧಕರು, ಪ್ರತಿದಿನ ಮಗುವನ್ನು 3-4 ಗಂಟೆಗಳ ಕಾಲ ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಬೇಕು. ಓಡುವುದು ಮತ್ತು ಹೊರಾಂಗಣ ಆಟಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಹೃದಯದಲ್ಲಿ ಹೆಚ್ಚಾಗುವ ದ್ರವ್ಯರಾಶಿ ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ. ಬಾಲ್ಯದ ಜಡತ್ವವು ಆರೋಗ್ಯದ ಮೇಲೆ ಅಪಾಯ ಉಂಟು ಮಾಡುತ್ತದೆ ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ಆಘಾತಕಾರಿ ಘಟನೆಗಳು ಪುರಾವೆಯಾಗಿದ್ದು, ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಪೂರ್ವ ಫಿನ್​ಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಮಕ್ಕಳ ವೈದ್ಯ ಆಂಡ್ರ್ಯೂ ಅಗ್ಬಾಜೆ ಹೇಳಿದ್ದಾರೆ.
ಸ್ಥೂಲಕಾಯ ಅಥವಾ ಅಧಿಕ ರಕ್ತದೊತ್ತಡವನ್ನು ಪರಿಗಣಿಸದೆ ನಿಷ್ಕ್ರಿಯವಾಗಿರುವುದರಿಂದ ಹೃದಯದ ದ್ರವ್ಯರಾಶಿ ಹೆಚ್ಚಾಗುತ್ತದೆ. ಯುವಕರು ಚಟುವಟಿಕೆಯಲ್ಲಿ ತೊಡಗದಿರುವ ಸ್ಥಿತಿ ಹೃದಯದ ಹಿಗ್ಗುವಿಕೆಗೆ ಶೇ.40 ಕೊಡುಗೆ ನೀಡುತ್ತದೆ. ಅಲ್ಲದೆ, ಜೀವನಶೈಲಿ, ಸಾಮಾಜಿಕ, ಆರ್ಥಿಕ ಸ್ಥಿತಿಯಂಥ ಅಂಶಗಳೂ ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
1700 ಮಕ್ಕಳ ಮೇಲೆ ಸಂಶೋಧನೆ:ಅಮೆರಿಕದ ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿದ್ದ 90ರ ದಶಕದ 11ರಿಂದ 24ರ ವಯಸ್ಸಿನ ಸುಮಾರು 1,700 ಮಕ್ಕಳನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ದಿನಕ್ಕೆ 6 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಕ್ಕಳಿಗೆ ಸೂಚಿಸಲಾಗಿತ್ತು. ಯುವಕರಾದ ನಂತರ 9 ಗಂಟೆ ಯಾವುದೇ ಚಟುವಟಿಕೆಯಲ್ಲಿ ತೊಡಗದೆ ನಿಷ್ಕ್ರಿಯರಾಗಿರುವಂತೆ ನೋಡಿಕೊಳ್ಳಲಾಗಿತ್ತು. ಭಾಗಿಯಾದವರ ಸೊಂಟಕ್ಕೆ 4ರಿಂದ 7 ಗಂಟೆ ಅವಧಿಗೆ ವೇಗವರ್ಧಕ ಸಾಧನಗಳನ್ನು (ಚಲನೆ ಪತ್ತೆಹಚ್ಚಲು) ಕಟ್ಟಲಾಗಿತ್ತು. ಈ ಮೂಲಕ ಹೃದಯದ ರಚನೆ ಮತ್ತು ಕಾರ್ಯವಿಧಾನದ ಮಾಪನಗಳನ್ನು ಪತ್ತೆ ಹಚ್ಚಲಾಗಿದೆ.
ಹೀಗೆ ಮಾಡಿದರೆ ಉತ್ತಮ…:ಹೃದಯ ಸಂಬಂಧಿ ಸಮಸ್ಯೆ ಗಳಿಂದ ದೂರವಿರಲು ಮಕ್ಕಳು, ಯುವಕರು ಸಾಧ್ಯವಾದಷ್ಟೂ ಕ್ರಿಯಾಶೀಲರಾಗಿರಬೇಕು ಎಂದು ಅಧ್ಯಯನ ಸಲಹೆ ನೀಡಿದೆ. ಹೃದಯರಕ್ತನಾಳದ ಆರೋಗ್ಯಕ್ಕಾಗಿ ಮೈದಾನದಲ್ಲಿ ಆಟ ಆಡುವುದು, ಪಾಲಕರಿಗೆ ಕೆಲಸದಲ್ಲಿ ಸಹಾಯ ಮಾಡುವುದು, ನಾಯಿ ಜತೆಗೆ ವಾಕಿಂಗ್, ಶಾಪಿಂಗ್ ಮಾಲ್ ಅಥವಾ ಶಾಲೆಗೆ ಹೋಗುವಾಗ ನಡೆದುಕೊಂಡು ಹೋಗುವುದು, ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು ಸೇರಿ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಂಶೋಧಕರು ನಿರ್ದೇಶನ ನೀಡಿದ್ದಾರೆ.

ಭಾರತ ಪ್ರವಾಸ ಕೈಗೊಂಡ ಮಾಲ್ಡೀವ್ಸ್​ ವಿದೇಶಾಂಗ ಸಚಿವ ಮೂಸಾ ಜಮೀರ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 6 =
Remember me
