ಚೆನ್ನೈ:ಶಾಲೆಯಿಂದ ಮನೆಗೆ ತೆರಳುತ್ತಿದ್ದ ಒಂಬತ್ತು ವರ್ಷದ ಶಾಲಾ ಬಾಲಕಿಯ ಮೇಲೆ ಎರಡು ಹಸುಗಳು ಅಮಾನುಷವಾಗಿ ದಾಳಿ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಇದನ್ನೂ ಓದಿ:ಯುವತಿ ಮದುವೆಯಾಗಲು ಫಿಜಿ ದೇಶದಿಂದ ಬಂದು ಪೊಲೀಸರ ಅತಿಥಿಯಾದ ಮೂರು ಮಕ್ಕಳ ತಂದೆ..!ಮದ್ರಾಸ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ ಕಾಲೋನಿ ಪ್ರದೇಶದ ಇಳಂಗೋ ಸ್ಟ್ರೀಟ್‌ನಲ್ಲಿ ಬಾಲಕಿಯು ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಎರಡು ಹಸುಗಳ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಒಂದು ಹಸು ಹಿಂಸಾತ್ಮಕವಾಗಿ ತಿರುಗಿ ಕೊಂಬುಗಳಿಂದ ಪದೇ ಪದೇ ದಾಳಿ ಮಾಡಿದೆ. ತಾಯಿಯ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ದಾರಿಹೋಕರು ಜಮಾಯಿಸಿ ಕಲ್ಲು ಎಸೆದು ಶಬ್ಧ ಮಾಡಿ ಹಸುವನ್ನು ಓಡಿಸಲು ಯತ್ನಿಸಿದರು. ಕೊನೆಗೆ ಕೋಲಿನಿಂದ ವ್ಯಕ್ತಿಯೊಬ್ಬ ಹೊಡೆದ ನಂತರ, ಹಸು ಅಂತಿಮವಾಗಿ ಸ್ಥಳದಿಂದ ಹೊರಟುಹೋಗಿದೆ.
Cows attack harmless little girl in MMDA,#Chennai.@chennaicorpCows roaming on the streets are a big menace and a threat to motorists and walkers. Please take action against the cow owner!#Cow#CowAttack@CMOTamilnadu@UpdatesChennaipic.twitter.com/wdV5LD0iyw
— Ajay AJ (@AjayTweets07)August 10, 2023

ಹಸುವಿನ ದಾಳಿಯಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಚೆನ್ನೈ ಪಾಲಿಕೆ ಅಧಿಕಾರಿಗಳು ಹಸುಗಳನ್ನು ಹಿಡಿದಿದ್ದು, ಇವುಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು. ನಗರ ವ್ಯಾಪ್ತಿಯಲ್ಲಿ ಜಾನುವಾರು ಸಾಕಣೆಯ ಇತರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
