ಚಿತ್ತೂರ್​:ಮನುಷ್ಯನ ಕ್ರೂರತ್ವಕ್ಕೆ ಕನ್ನಡಿಯಾಗಿ ಮತ್ತೊಂದು ಅಮಾನವೀಯ ಘಟನೆ ಸಾಕ್ಷಿಯಾಗಿದೆ. ಸ್ಫೋಟಕಗಳನ್ನು ತುಂಬಿಟ್ಟಿದ್ದ ಆಹಾರ ತಿನ್ನಲು ಹೋಗಿ ಬಾಯಲ್ಲೇ ಸಿಡಿದು ಗೋವೊಂದು ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟಿದೆ.
ಈ ಕರುಣಾಜನಕ ಘಟನೆ ಆಂಧ್ರ ಪ್ರದೇಶದ ಚಿತ್ತೂರ್​ ಜಿಲ್ಲೆಯ ತಿರುಪತಿ ಗ್ರಾಮಾಂತರ ಮಂಡಲದ ಚಂದಮಾಮ ಪಲ್ಲಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದರಾದೃಷ್ಟವಶಾತ್​ ಅದೇ ದಿನ ರಾತ್ರಿ ಗೋವು ನೋವಿನಿಂದಲೇ ನರಳಿ ಪ್ರಾಣ ಬಿಟ್ಟಿದೆ.
ಮೃತ ಗೋವಿಗೆ ಬುಧವಾರ ಬೆಳಗ್ಗೆ ಹಿಂದು ಸಂಪ್ರದಾಯದಂತೆ ಅಂತ್ಯಕ್ತಿಯೆ ನೆರವೇರಿಸಲಾಯಿತು. ಸಾವಿಗೂ ಮುನ್ನ ಸುಮಾರು 6 ಗಂಟೆಗಳ ಕಾಲ ಗೋವಿ ನೋವಿನಿಂದಲೇ ಒದ್ದಾಡಿದ ದೃಶ್ಯ ಮನಕಲಕುವಂತಿತ್ತು.
ಇದನ್ನೂ ಓದಿ:ಆಂಧ್ರ ಸಿಎಂ ಪರಿಹಾರ ನಿಧಿ ಖಾತೆಗೆ ಕನ್ನ: ಮಂಗಳೂರು ಸಿನಿಮಾ ನಿರ್ಮಾಪಕ ಸೇರಿ ಆರು ಮಂದಿಯ ಬಂಧನ!
ಈ ಬಗ್ಗೆ ಮಾತನಾಡಿರುವ ಗೋವಿನ ಮಾಲೀಕ ಪಿ. ರಾಂಬೋ, ಕಾಡು ಹಂದಿಗಳ ಹಾವಳಿಯನ್ನು ತಪ್ಪಿಸಲು ಕಾಡಂಚಿನ ಗ್ರಾಮದ ರೈತರು ಹಿಟ್ಟಿನಿಂದ ಮಾಡಲಾದ ಆಹಾರದಲ್ಲಿ ಸ್ಫೋಟಕಗಳನ್ನು ತುಂಬಿ ಹುಲ್ಲು ಹಾಸಿನ ಮೇಲೆ ಇಟ್ಟಿದ್ದರು. ಗೋವು ಮೇಯುವಾಗ ಆಕಸ್ಮಿಕವಾಗಿ ಅದನ್ನು ತಿಂದಿದೆ. ಪರಿಣಾಮ ಬಾಯಲ್ಲೇ ಸಿಡಿದಿದ್ದರಿಂದ ಛಿದ್ರಗೊಂಡಿತು. ತಕ್ಷಣ ಸರ್ಕಾರಿ ಪಶು ವೈದ್ಯಾಲಯಕ್ಕೆ ಸ್ಥಳಾಂತರಿಸಿದೆವು. ಆದರೂ ಬದುಕುಳಿಯಲಿಲ್ಲ. ಕಚ್ಛಾ ಬಾಂಬ್​ ಸ್ಫೋಟದಿಂದಾಗಿ ಗೋವಿನ ಕೆಳದವಡೆ ತುಂಡಾಗಿತ್ತು. ದವಡೆಯನ್ನು ಮರಳಿ ಜೋಡಿಸುವು ತುಂಬಾ ಕಷ್ಟ, ಆಪರೇಷನ್​ ಮಾಡಿದರು ಬದುಕುವುದು ಕಷ್ಟವೆಂದರು ಎಂದು ರಾಂಬೋ ಹೇಳಿದ್ದಾರೆ.
ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ. ಬೆಳೆಗಳ ರಕ್ಷಣೆಗಾಗಿ ಅಥವಾ ಬೇಟೆಗಾಗಿ ರೈತರು ಆಹಾರದಲ್ಲಿ ತುಂಬಿ ಇಡುವ ಸ್ಫೋಟಕಗಳನ್ನ ತಿಂದು ಪ್ರಾಣಿಗಳು ಮೃತಪಟ್ಟ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿವೆ. ಆದರೆ, ಆಹಾರ ಇಡುವ ಮುನ್ನ ಅಥವಾ ಪ್ರಾಣಿಗಳನ್ನು ಮೇಯಿಸುವವರು ಈ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಮಾನವರು ಮಾಡುವ ಎಡವಟ್ಟಿಗೆ ಮೂಕ ಪ್ರಾಣಿಗಳು ಬಲಿಯಾಗಲಿವೆ. ಇಂತಹ ಘಟನೆಗಳು ಮರುಕಳಿಸದಿರಲಿ ಎಂಬುದೇ ನಮ್ಮ ಆಶಯವಾಗಿದೆ.(ಏಜೆನ್ಸೀಸ್​)
ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಅಕ್ಕಿ ತುಂಬಿದ್ದ ಟ್ರಕ್​ ಕಂಟೈನರ್: ಕಾರಿನ ಜತೆಗೆ ಇಬ್ಬರ ದೇಹವೂ ನುಜ್ಜುಗುಜ್ಜು!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 12 =
Remember me
