ಮುಂಬೈ:ದೆಹಲಿಯ ಜವಾಹರ್​ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ಮುಸುಕುಧಾರಿಗಳು ನಡೆಸಿದ ದಾಳಿ ದೇಶಾದ್ಯಂತ ಚರ್ಚೆಯಲ್ಲಿದೆ.
ಕಾಂಗ್ರೆಸ್​ ಸೇರಿ ಹಲವು ಪ್ರತಿಪಕ್ಷಗಳ ನಾಯಕರು, ಗಣ್ಯರು, ಬಾಲಿವುಡ್​ ಮಂದಿ ಇದನ್ನು ವಿರೋಧಿಸಿದ್ದಾರೆ.ಹಾಗೆ ನಟ ಅಕ್ಷಯ್​ ಕುಮಾರ್ ಪತ್ನಿ, ನಟಿ, ಲೇಖಕಿ ಟ್ವಿಂಕಲ್​ ಖನ್ನಾ ಕೂಡ ಜೆಎನ್​ಯು ಘಟನೆ ಬಗ್ಗೆ ಟ್ವೀಟ್​ ಮಾಡಿ ದೇಶದ ಆಡಳಿತದ ಜವಾಬ್ದಾರಿ ಹೊತ್ತಿರುವವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಹಸುಗಳೇ ಹೆಚ್ಚು ಸುರಕ್ಷಿತ. ಯಾಕೆಂದರೆ ಹಸುಗಳಿಗೆ ನೀಡುವಷ್ಟು ರಕ್ಷಣೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿಲ್ಲ. ಹಿಂಸೆಯಿಂದ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಲು ಯತ್ನಿಸಿದರೆ ಮತ್ತಷ್ಟು ಪ್ರತಿಭಟನೆ, ಹೋರಾಟವನ್ನು ಎದುರಿಸಬೇಕಾಗುತ್ತದೆ. ಇನ್ನೂ ಅನೇಕ ಜನರು ರಸ್ತೆಗಿಳಿಯುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಪತ್ರಿಕೆಯೊಂದು ಜೆಎನ್​ಯು ಹಿಂಸಾಚಾರದ ಬಗ್ಗೆ ಮಾಡಿರುವ ವರದಿಯ ಕ್ಲಿಪ್​ನ್ನು ಶೇರ್ ಮಾಡಿರುವ ಟ್ವಿಂಕಲ್​ ಖನ್ನಾ, ಪತ್ರಿಕೆಯಲ್ಲಿರುವ ಶೀರ್ಷಿಕೆಯೇ ಎಲ್ಲವನ್ನೂ ತಿಳಿಸುತ್ತಿದೆ ಎಂದಿದ್ದಾರೆ.ಟ್ವಿಂಕಲ್​ ಖನ್ನಾ ಸಿನಿಮಾಗಳಿಂದ ದೂರವೇ ಉಳಿದಿದ್ದರೂ ಸೋಷಿಯಲ್​ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯರಾಗಿಯೇ ಇರುತ್ತಾರೆ. ಈ ಹಿಂದೆ ಕೂಡ ಹಲವು ಬಾರಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಕೆಲವು ಟ್ವೀಟ್​ಗಳನ್ನು ಮಾಡಿ ತಮ್ಮದೇ ಧಾಟಿಯಲ್ಲಿ ಟೀಕಿಸಿದ್ದರು.
India,where cows seem to receive more protection than students, is also a country that now refuses to be cowed down. You can’t oppress people with violence-there will be more protests,more strikes,more people on the street. This headline says it all.pic.twitter.com/yIiTYUjxKR
— Twinkle Khanna (@mrsfunnybones)January 6, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 5 =
Remember me
