ಹೈದರಾಬಾದ್​:ಕಮ್ಯುನಿಸ್ಟ್​ ಪಾರ್ಟಿ ಆಫ್​ ಇಂಡಿಯಾ (ಮಾವೊಯಿಸ್ಟ್​) ಹಾಗೂ ಅದರ ಏಳು ಅಂಗಸಂಸ್ಥೆಗಳನ್ನು ಒಂದು ವರ್ಷ ಕಾಲ ನಿಷೇಧಕ್ಕೊಳಪಡಿಸಲಾಗಿದೆ. ಇಂಥದ್ದೊಂದು ನಿಷೇಧ ಇದೇ ವರ್ಷದ ಆಗಸ್ಟ್​ 17ರಿಂದಲೇ ಅನ್ವಯಿಸಲಿದೆ.
ಸಿಪಿಐ(ಎಂ) ಜತೆಗೆ ಅದರ ಅಂಗಸಂಸ್ಥೆಗಳಾದ ರೆವೊಲ್ಯುಷನರಿ ಡೆಮಾಕ್ರಟಿಕ್​ ಫ್ರಂಟ್​(ಆರ್​ಡಿಎಫ್​), ರ‍್ಯಾಡಿಕಲ್​ ಯೂಥ್ ಲೀಗ್, ರಿಥು ಕೂಲಿ ಸಂಘಂ, ರ‍್ಯಾಡಿಕಲ್ ಸ್ಟುಡೆಂಟ್ಸ್ ಯೂನಿಯನ್​, ಸಿಂಗರೇನಿ ಕಾರ್ಮಿಕ ಸಮಖ್ಯ, ವಿಪ್ಲವ ಕಾರ್ಮಿಕ ಸಮಖ್ಯ ಮತ್ತು ಆಲ್​ ಇಂಡಿಯಾ ರೆವೊಲ್ಯುಷನರಿ ಸ್ಟುಡೆಂಟ್ಸ್​ ಫೆಡರೇಷನ್​ ಕೂಡ ನಿಷೇಧಕ್ಕೆ ಒಳಗಾಗಿವೆ.
ತೆಲಂಗಾಣ ರಾಜ್ಯದಲ್ಲಿ ಈ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಪಬ್ಲಿಕ್ ರಿಲೇಷನ್ಸ್ ಕಮಿಷನರ್ ಅರವಿಂದ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಾನೂನುಬಾಹಿರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದ್ದು, 2020ರ ಆಗಸ್ಟ್​ 17ರಿಂದ ಒಂದು ವರ್ಷ ಈ ನಿಷೇಧ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
