ಪುದುಚೇರಿ:ಇಂದು ನಾಳೆ ಪಟಾಕಿ ಹೊಡೆಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಅದಕ್ಕಾಗಿ ನಿನ್ನೆಯಿಂದಲೇ ಪಟಾಕಿ ಖರೀದಿ ಜೋರಾಗಿದ್ದು, ಹಾಗೆ ಖರೀದಿಸಿದ ಪಟಾಕಿಯನ್ನು ಸಾಗಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇಲ್ಲೊಂದು ಕಡೆ ಅಂಥ ಪಟಾಕಿ ಮೂಟೆ ಅಪ್ಪ-ಮಗ ಇಬ್ಬರನ್ನೂ ಬಲಿ ಪಡೆದಿದೆ.
ಪುದುಚೇರಿಯ ಅರಿಯನ್​ಕುಪ್ಪಮ್​ ನಗರದ ನಿವಾಸಿ ಕಲೈನೇಶನ್​ (32) ಮತ್ತು ಅತನ ಪುತ್ರ ಪ್ರದೀಶ್​ (7) ಪಟಾಕಿ ಮೂಟೆಗೆ ಬಲಿಯಾದವರು. ಪಟಾಕಿ ಚೀಲದ ಮೇಲೆ ಮಗನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ಈ ದುರಂತ ಸಂಭವಿಸಿದೆ.
ಕೊಟ್ಟಕುಪ್ಪಂ ಬಳಿ ಪಟಾಕಿ ಚೀಲದಲ್ಲಿದ್ದ ಸುಡುಮದ್ದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಪ್ಪ-ಮಗ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಲ್ಲದೆ, ಹತ್ತಿರದಲ್ಲಿ ಮತ್ತೊಂದು ಬೈಕ್​ನಲ್ಲಿ ಸಾಗುತ್ತಿದ್ದ ಇನ್ನಿಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಲ್ಕು ವರ್ಷದ ಮಗಳನ್ನು ಕೊಂದು ನೇಣು ಹಾಕಿಕೊಂಡ 26 ವರ್ಷದ ಯುವಕ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − 7 =
Remember me
