ಲಖನೌ:ದೆಹಲಿ-ಮೀರತ್​ ಎಕ್ಸ್​ಪ್ರೆಸ್​​ ವೇನಲ್ಲಿ ಲಾರಿ ಹಾಗೂ ಹಾಲಿನ ಟ್ಯಾಂಕರತ್​ ನಡುವೆ ಸಂಭವಿಸಿದ ಭಿಕರ ರಸ್ತೆ ಅಪಘಾತದಲ್ಲಿ ಚಾಲಕ ಮೃತಪಟ್ಟಿದ್ದು, ಜನರು ಆತನ ಬಗ್ಗೆ ಗಮನಿಸದೆ ಹಾಲನ್ನು ಹಾಲಿಗಾಗಿ ಮುಗಿಬಿದ್ದಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.
ಮೃತ ಚಾಲಕನನ್ನು ಪ್ರೇಮ್​ ಸಾಗರ್​ (45) ಹಾಲಿನ ಟ್ಯಾಂಕರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪಾತ್ರೆ ಮತ್ತು ಬಾಟಲಿಯೊಂದಿಗೆ ಧಾವಿಸಿದ ಜನ ಹಾಲನ್ನು ಪಡೆಯಲು ಮುಗಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ವಿಡಿಯೋ ವ್ಯಾಪಕ ಖಂಡನೆಗೆ ಗುರಿಯಾಗಿದೆ.
🚨Uttar Pradesh: People loot milk from milk tanker while ignoring dead body of driver and the seriously injured conductor after an accident..Source =https://t.co/mo75x6pPOK@myogiadityanathpic.twitter.com/y0Ap5y4Hk7
ಇದನ್ನೂ ಓದಿ:ನಿಜವಾಯಿತು ಶೇಖ್​ ಹಸೀನಾರ ಬಗ್ಗೆ ಭಾರತದ ಜ್ಯೋತಿಷಿ ಆಡಿದ ಮಾತು; ಮುಂದಿನ ದಿನಗಳ ಬಗ್ಗೆ ಆತನ ಭವಿಷ್ಯವಾಣಿ ಏನು?
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ದೆಹಲಿ-ಮೀರತ್​ ಎಕ್ಸ್​ಪ್ರೆಸ್​ ವೇನಲ್ಲಿರುವ ಎಬಿಇಎಸ್ ಕಾಲೇಜು ಬಳಿ ಈ ಅಪಘಾತ ಸಂಭವಿಸಿದ್ದು, ಮೀರತ್​ ಕಡೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಪ್ರೇಮ್​ ಸಾಗರ್​ ಸ್ಥಳದಲ್ಲೇ ಮೃತಪಟ್ಟಿದ್ದು, ಕ್ಲೀನರ್​ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಸಂಬಂಧ ಚಾಲಕನ ಕುಟುಂಬಸ್ಥರು ಅಧಿಕೃತವಾಗಿ ದೂರು ನೀಡಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ನಂತರ ಟ್ಯಾಂಕರ್​ನಿಂದ ಹಾಲು ಸೋರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಚಾಲಕ ಸತ್ತು ಬಿದ್ದಿದ್ದರೂ ಅದನ್ನು ನೋಡದೆ ಹಾಲನ್ನು ತೆಗೆದುಕೊಳ್ಳುತ್ತಿರುವುದನ್ನು ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಪೊಲೀಸರು ಮೊದಲು ಜನರ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 + sixteen =
Remember me
