ಬೆಂಗಳೂರು:ದೊಡ್ಡ ದೊಡ್ಡ ಕಂಪನಿಗಳ ಮಾಲೀಕರ, ಸಿಇಒಗಳ ಸಂಬಳ ಎಷ್ಟಿರಬಹುದು ಎಂಬ ಕುತೂಹಲ ಜನಸಾಮಾನ್ಯರಿಗೆ ಇರುವಂಥದ್ದೇ. ಅಂಥದ್ದೇ ಒಂದು ಕುತೂಹಲಕ್ಕೆ ಸಿಇಒ ಒಬ್ಬರಿಂದ ಸಿಕ್ಕ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ.
ಇದನ್ನೂ ಓದಿ:ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಸುಮಾರು 800 ಉದ್ಯೋಗಿಗಳಿರುವ ಈ ದೊಡ್ಡ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸಂಬಳ ಬರೀ 15 ಸಾವಿರ ರೂಪಾಯಿ ಎಂಬುದೇ ಈ ಸಂಚಲನಕ್ಕೆ ಕಾರಣವಾಗಿದೆ. ಇನ್​ಸ್ಟಾಗ್ರಾಮ್​ ಕ್ವಶ್ಚನ್​ ಆ್ಯಂಡ್ ಆನ್ಸರ್​ ಸೆಷನ್ ವೇಳೆ ಖುದ್ದು ಆ ಸಿಇಒ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ
ಅಂದಹಾಗೆ ಈ ಸಂಬಳ ಪಡೆಯುತ್ತಿರುವ ಸಿಎಒ ಹೆಸರು ಕುನಾಲ್ ಶಾ. ಭಾರತೀಯ ಫಿನ್​ಟೆಕ್ ಕಂಪನಿ ಕ್ರೆಡ್​ನ ಸಂಸ್ಥಾಪಕರೂ ಆಗಿರುವ ಇವರು ಸಿಇಒ ಆಗಿ ತಮ್ಮ ಸಂಬಳ 15 ಸಾವಿರ ಎಂದು ಬಹಿರಂಗಪಡಿಸಿದ್ದಾರೆ. ಏನನ್ನಾದರೂ ಕೇಳಿ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಕೇಳಿದ್ದಕ್ಕೆ ಒಬ್ಬರು, ಅವರ ವೇತನ ಎಷ್ಟೆಂದು ಹೇಳಿದ್ದು, ಅದಕ್ಕೆ ಅಷ್ಟೊಂದು ಕಡಿಮೆಯಾ ಎಂಬ ಪ್ರಶ್ನೆಯೂ ಎದುರಾಗಿತ್ತು.

‘ಕಂಪನಿಯು ಲಾಭದಾಯಕವಾಗುವವರೆಗೂ ನಾನು ಉತ್ತಮ ಸಂಬಳವನ್ನು ಪಡೆಯಬೇಕೆಂದು ನನಗೆ ಅನಿಸುತ್ತಿಲ್ಲ. ಕ್ರೆಡ್​​ನಲ್ಲಿ ನನ್ನ ಸಂಬಳ ತಿಂಗಳಿಗೆ 15,000 ಆಗಿದೆ ಮತ್ತು ನಾನು ಈ ಹಿಂದೆ ನನ್ನ ಫ್ರೀಚಾರ್ಜ್ ಕಂಪನಿಯನ್ನು ಮಾರಾಟ ಮಾಡಿದ್ದರಿಂದ ಬದುಕಲಿಕ್ಕೆ ಸಮಸ್ಯೆ ಇಲ್ಲ’ ಎಂಬುದಾಗಿ ಅವರು ಉತ್ತರಿಸಿದ್ದಾರೆ. ಬೆಂಗಳೂರು ಮೂಲದ ಕ್ರೆಡ್ ಕಂಪನಿಯಲ್ಲಿ ಸುಮಾರು 800 ಉದ್ಯೋಗಿಗಳಿದ್ದು, ಕೋಟ್ಯಂತರ ವಹಿವಾಟು ಹೊಂದಿದೆ.
ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 13 =
Remember me
