ನವದೆಹಲಿ:ಸ್ಮಶಾನದ ಗೋಡೆ ಕುಸಿದು ನಾಲ್ವರು ಮೃತಪಟ್ಟು, ಇಬ್ಬರೂ ಗಂಭೀರವಾಗ ಗಾಯಗೊಂಡಿರುವ ಘಟನೆ ನವದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ಮೃತರನ್ನು ದೇವಿ ದಯಾಳ್ (70), ಮನೋಜ್​ ಗಾಬಾ (54), ಕೃಷ್ಣ ಕುಮಾರ್​ (52), ತಾನ್ಯಾ (11) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಟೀ ಅಂಗಡಿ ಮಾಲೀಕ ದಿಲೀಪ್​ ಕುಮಾರ್​ ಹಾಗೂ ಮಗುವೊಂದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#Cemeterywall falls in#Gurugram4#dead2 injuredpic.twitter.com/Aanyz61oM3
ಇದನ್ನೂ ಓದಿ:ಫಯಾಜ್​ ಜತೆಗಿರುವ ಫೋಟೋಗಳು ವೈರಲ್​; ನೇಹಾ ತಾಯಿ ಹೇಳಿದ್ದೇನು?
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಸ್ಮಶಾನದ ಹಿಂಭಾಗ ಗೇಟ್​ನ ಹಿಂಬದಿ ಗೋಡೆ ಬಳಿ ದಿಲೀಪ್​ ಎಂಬುವವರು ಚಹಾ ಅಂಗಡಿ ಒಂದನ್ನು ನಡೆಸುತ್ತಿದ್ದರು. ಘಟನೆ ನಡೆದ ವೇಳೆ ದೇವಿ ದಯಾಳ್, ಮನೋಜ್​ ಎಂಬುವವರು ಚಹಾ ಅಂಗಡಿ ಮುಂದೆ ಕುಳಿತಿದ್ದರು. ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗೋಡೆ ಕುಸಿದಿದ್ದು ಅವಶೇಷಗಳಡಿ ಸಿಲುಕಿ ನಾಲ್ವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇಬ್ಬರ ಸ್ಥಿತ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರು ಹೇಳುವ ಪ್ರಕಾರ ಸ್ಮಶಾನದ ಗೋಡೆಗಳ ಅಕ್ಕ-ಪಕ್ಕ ಗಿಡಗಳನ್ನು ನೆಡಲಾಗಿತ್ತು. ಇದರಿಂದಾಗಿ ಗೋಡೆ ಬಾಗಿದ್ದು, ಏಕಾಏಕಿ ಕುಸಿದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
