ತಿರುಪತಿ:ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲು ಕೋಟಿ…ಕೋಟಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ.  ಟೀಂ ಇಂಡಿಯಾ ಸೋಲನ್ನು ಸಹಿಸಲಾಗದೆ ಕ್ರಿಕೆಟ್ ಅಭಿಮಾನಿ ಯುವಕನೊಬ್ಬ ಹೃದಯಾಘಾತದಿಂದ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಜ್ಯೋತಿ ಕುಮಾರ್ ಮೃತ,ತಿರುಪತಿ ಜಿಲ್ಲೆ ಗ್ರಾಮಾಂತರ ಮಂಡಲ ದುರ್ಗಾ ಸಮುದ್ರದ ನಿವಾಸಿಯಾಗಿದ್ದಾನೆ. ಈತ ಕಂಪ್ಯೂಟರ್ ಸೆಂಟರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದನು. ವಿಶ್ವಕಪ್​ನಲ್ಲಿ ಭಾರತ ಸೋತಿರುವ ನೋವನ್ನು ತಾಳಲಾರದೆ ಯುವಕ ಸಾವನ್ನಪ್ಪಿದ್ದಾನೆ.
ಜ್ಯೋತಿ ಕುಮಾರ್ ಭಾನುವಾರ ತನ್ನ ಸ್ನೇಹಿತರೊಂದಿಗೆ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದನು.  ಪಂದ್ಯ ನಡೆಯುತ್ತಿದ್ದಂತೆ ಜ್ಯೋತಿ ಕುಮಾರ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆಸ್ಟ್ರೇಲಿಯದ ಗೆಲುವು ಮತ್ತು ಭಾರತದ ಸೋಲಿನ ನಂತರ ಆಟಗಾರರು ಕಣ್ಣೀರು ಸುರಿಸುವುದನ್ನು ಅವರು ಸಹಿಸಲಿಲ್ಲ. ಈ ಸಂದರ್ಭದಲ್ಲಿ ಜ್ಯೋತಿ ಕುಮಾರ್ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಆತನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮಗನ ಹಠಾತ್ ಸಾವಿನಿಂದ ಪಾಲಕರು ಕಂಬನಿ ಮಿಡಿದಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲು ಬಯಸಿದ್ದೆವು ಆದರೆ ತಮ್ಮ ಮಗು ತೀರುತ್ತದೆ ಎಂದು ಊಹಿಸಲು ಸಾಧ್ಯವಾಗಲಿಲ್ಲ.ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸೋಲು ಅವರ ಜೀವವನ್ನೇ ತೆಗೆದುಕೊಂಡಿತು. ಈ ಪಂದ್ಯ ನೋಡದೇ ಇದ್ದಿದ್ದರೆ ಬದುಕುತ್ತಿರಲಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು.
Gold, Silver Price; ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ… ಎಷ್ಟಿದೆ ನೋಡಿ ಇಂದಿನ ದರ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 17 =
Remember me
