ಬೆಂಗಳೂರು:ಕರೊನಾ ಭೀತಿ ಹಿನ್ನೆಲೆಯಲ್ಲಿ ಸುಮಾರು 4 ತಿಂಗಳ ಕಾಲ ಸ್ಥಗಿತವಾಗಿದ್ದ ಕ್ರಿಕೆಟ್​ ಪಂದ್ಯಾವಳಿಗಳು ಇಂದಿನಿಂದ ಪುನರ್​ ಆರಂಭಗೊಂಡಿವೆ. ಇದರ ಜತೆಗೆ ಬೆಟ್ಟಿಂಗ್​ ಚಟುವಟಿಕೆಯೂ ಚುರುಕು ಪಡೆಯುವ ಸಾಧ್ಯತೆಯಿದ್ದು, ಬುಕ್ಕಿಗಳ ಮೇಲೆ ಸಿಸಿಬಿ ಕಣ್ಣಿಟ್ಟಿದೆ.
4 ತಿಂಗಳ ನಂತರ ಇಂಗ್ಲೆಂಡ್​ ಮತ್ತು ವೆಸ್ಟ್​ಇಂಡೀಸ್​ ತಂಡಗಳ ನಡುವಿನ ಮೂರು ಪಂದ್ಯದ ಟೆಸ್ಟ್​ ಸರಣಿ ಆರಂಭಗೊಂಡಿದೆ. ಈ ಪಂದ್ಯಾವಳಿ ಇಂಗ್ಲೆಂಡ್​​ನ ಸೌತಾಂಪ್ಟನ್​ನ ಎಜಿಸ್​ಬೋಲ್​ ಮೈದಾನದಲ್ಲಿ ನಡೆಯುತ್ತಿದ್ದು, ಬಹಳ ದಿನಗಳ ಬಳಿಕ ಟಿವಿಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ನೇರ ಪ್ರಸಾರವಾಗಲಿದೆ. ಕ್ರಿಕೆಟ್​ ಪಂದ್ಯಗಳಿಲ್ಲದೆ ಸ್ತಬ್ಧವಾಗಿದ್ದ ಬೆಟ್ಟಿಂಗ್​ ಜಾಲದ ಚಟುವಟಿಕೆಗಳು ಗರಿಗೆದರಲಿವೆ. ಹೀಗಾಗಿ ಹಳೇ ಬುಕ್ಕಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ.ಇದನ್ನೂ ಓದಿರಿಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್
ಕರೊನಾ ಆತಂಕದ ನಡುವೆಯೇ ಕ್ರಿಕೆಟ್​ ಪಂದ್ಯಾವಳಿ ಶುರುವಾಗುತ್ತಿದೆ. ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡು ಬೆಟ್ಟಿಂಗ್​ ಶುರು ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಬೆಂಗಳೂರು ನಗರ ಜಂಟಿ ಪೊಲೀಸ್​ ಆಯುಕ್ತ (ಅಪರಾಧ) ಸಂದೀಪ್​ ಪಾಟೀಲ್​ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್​ ಪುನಾರ್​ ಆರಂಭ ಆಗುತ್ತಿರುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಅತ್ಯುತ್ಸಾಹ ತಂದಿದೆ. ಮತ್ತೊಂದೆಡೆ ಬೆಟ್ಟಿಂಗ್​ ಶುರು ಮಾಡಲು ಬೆಂಗಳೂರು ಸೇರಿ ವಿಶ್ವದೆಲ್ಲೆಡೆ ಕೆಲವರು ಎದುರು ನೋಡುತ್ತಿದ್ದಾರೆ. ಕ್ರಿಕೆಟ್​ ಪಂದ್ಯಾವಳಿ ಮೇಲೆ ಸಿಸಿಬಿ ನಿಗಾವಹಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವೆ ಕಳೆದ ಮಾರ್ಚ್​ 13ರಂದು ಸಿಡ್ನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೇ ಕೊನೆಯದಾಗಿತ್ತು. 117 ದಿನದ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಾವಳಿ ಆರಂಭಗೊಂಡಿದೆ.
https://www.vijayavani.net/doctor-sentenced-for-one-and-a-half-years-jai-woman-deth-case/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
