ನವದೆಹಲಿ:ವೆಸ್ಟ್ ಇಂಡೀಸ್ ಆಲ್ರೌಂಡರ್ ಕ್ರಿಕೆಟಿಗ ಆಂಡ್ರೆ ರಸೆಲ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ. ಇದು ಮುಂಬರುವ ಐಪಿಎಲ್​ 2021 ಕ್ರಿಕೆಟ್ ಬಗ್ಗೆ ಅಲ್ಲ, ಬದಲಿಗೆ ‘ವಾಕ್ಸಿನ್​ಮೈತ್ರಿ’ಯ ಅಡಿಯಲ್ಲಿ ಭಾರತವು ಜಮಾಯ್ಕ ದೇಶಕ್ಕೆ ಕಳುಹಿಸಿರುವ ಕರೊನಾ ಲಸಿಕೆಗಳ ಬಗ್ಗೆ.
2021 ರ ಐಪಿಎಲ್​ಗೆ ಕೊಲ್ಕಟಾ ನೈಟ್​ ರೈಡರ್ಸ್​(ಕೆಕೆಆರ್) ತಂಡದ ಸ್ಟಾರ್ ಪ್ಲೇಯರ್​ ಆದ ಆಂಡ್ರೆ ರಸೆಲ್ ಅವರು ಭಾರತವು ಕರೊನಾ ಲಸಿಕೆಗಳನ್ನು ಕಳುಹಿಸಿರುವುದಕ್ಕೆ ಆತ್ಮೀಯವಾಗಿ “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” ಹೇಳಿದ್ದಾರೆ. ಈ ಬಗೆಗಿನ ರಸೆಲ್​ರ ವಿಡಿಯೋ ಸಂದೇಶವನ್ನು ಜಮಾಯ್ಕದ ಕಿಂಗ್​ಸ್ಟನ್​ನಲ್ಲಿರುವ ಭಾರತೀಯ ಹೈ ಕಮಿಷನ್ ಟ್ವಿಟರ್​ನಲ್ಲಿ ಶೇರ್ ಮಾಡಿದೆ.
'I want to say a big thank you to PM@narendramodi&@hcikingston. The#COVID19Vaccines are here & we are excited.'@PMOIndia'#India&#Jamaica– We are more than close, we are now brothers'.WI Cricketer Andre Russell praises#VaccineMaitri@Russell12A@DrSJaishankarpic.twitter.com/LhGi5OQeED— India in Jamaica (@hcikingston)March 16, 2021
'I want to say a big thank you to PM@narendramodi&@hcikingston. The#COVID19Vaccines are here & we are excited.'@PMOIndia'#India&#Jamaica– We are more than close, we are now brothers'.WI Cricketer Andre Russell praises#VaccineMaitri@Russell12A@DrSJaishankarpic.twitter.com/LhGi5OQeED
“ಕರೊನಾ ಆಕ್ರಮಣಕ್ಕೆ ತುತ್ತಾಗಿರುವ ಜಗತ್ತು ಸಾಮಾನ್ಯ ಪರಿಸ್ಥಿತಿಗೆ ಮರಳಬೇಕೆಂದರೆ ಲಸಿಕೆಗಳ ಪಾತ್ರ ಮಹತ್ವದ್ದು. ಈ ದೃಷ್ಟಿಯಿಂದ ಕರೊನಾ ಲಸಿಕೆ ಭಾರತದಿಂದ ಜಮಾಯ್ಕ ತಲುಪಿರುವ ಬಗ್ಗೆ ನಾವು ಪುಳಕಿತಗೊಂಡಿದ್ದೇವೆ. ಇದನ್ನು ಜಮಾಯ್ಕಾದ ಜನರು ತುಂಬ ಪ್ರಶಂಸಿಸುತ್ತಾರೆ. ಜಮಾಯ್ಕ ಮತ್ತು ಭಾರತ… ಈಗ ಸೋದರರಾಗಿದ್ದೇವೆ” ಎಂದು ಭಾವುಕರಾಗಿ ರಸೆಲ್​ ಮಾತನಾಡಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !
ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು
“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + three =
Remember me
