ಚೆನ್ನೈ:ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ನಡೆದ ಮಂಕಡ್ ರನೌಟ್ ಭಾರೀ ವೈರಲ್ ಆಗುತ್ತಿದೆ. ರನೌಟ್ ಆದ ಎನ್​. ಜಗದೀಶನ್ ವರ್ತನೆ ನೋಡಿದ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಚೆಪಾಕ್ ಸೂಪರ್ ಗಿಲ್ಲಿಸ್ ಹಾಗೂ ನೆಲೈ ರಾಯಲ್ ಕಿಂಗ್ಸ್​ ನಡುವಣ ಟಿಎನ್​ಪಿಎಲ್​ನ ಮೊದಲ ಪಂದ್ಯದಲ್ಲಿ, ಚೆಪಾಕ್ ತಂಡದ ಬ್ಯಾಟ್ಸ್​​ಮನ್ ಎನ್. ಜಗದೀಶನ್ ಅವರನ್ನು ಬೌಲರ್ ಬಾಬ ಅಪರಂಜಿತ್ ಮಂಕಡ್ ರನೌಟ್ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ಘಟನೆಯಿಂದ ಸಿಟ್ಟಾದ ಜಗದೀಶನ್ ಮಧ್ಯ ಬೆರಳನ್ನು ತೋರಿಸುತ್ತಾ ಪೆವಿಲಿಯನ್ ಕಡೆ ನಡೆದರು. 2-3 ಬಾರಿ ಈ ರೀತಿ ಸನ್ನೆ ಮಾಡಿದ್ದು, ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಇದಕ್ಕೆ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಬ್ಬ ಹಿರಿಯ ಆಟಗಾರ ಕ್ರೀಡಾಂಗಣದಲ್ಲಿ ಈ ರೀತಿ ವರ್ತಿಸಿದ್ದು ಸರಿಯಲ್ಲ. ಈ ರೀತಿ ಕೆಟ್ಟದಾಗಿ ಸನ್ನೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಇನ್ನು ಕೆಲವರು ತಿಳಿಸಿದ್ದಾರೆ.
ತಮಿಳುನಾಡು ತಂಡದ ಹಿರಿಯ ಆಟಗಾರ ಜಗದೀಶನ್ ಐಪಿಎಲ್​ನಲ್ಲಿ ಕಳೆದ ಮೂರು ವರ್ಷದಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪರ ಆಡುತ್ತಿದ್ದಾರೆ. 26 ಪ್ರಥಮ ದರ್ಜೆ ಕ್ರಿಕೆಟ್, 36 ಲಿಸ್ಟ್ ಎ ಪಂದ್ಯ ಮತ್ತು 45 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
🤐🤐🤐🤐@Jagadeesan_200@aparajithbabasenior players of tn🤐🤐🤐pic.twitter.com/C9orMqRPL3
— Jayaselvaa ᅠ (@jayaselvaa1)June 23, 2022

VIDEO: ಹಳಿ ಮೇಲೆ ಬಿದ್ದ ವ್ಯಕ್ತಿ… ರೈಲು ಬರುತ್ತಿರುವುದನ್ನು ಲೆಕ್ಕಿಸದೆ ಜೀವ ಉಳಿಸಿದ್ದೆ ರೋಚಕ!

ಡೇಟಿಂಗ್ ಆ್ಯಪ್ ಬೆಡಗಿಗಾಗಿ ಕೋಟಿ ಕೊಟ್ಟು ಕೈ ಸುಟ್ಟುಕೊಂಡ ಬ್ಯಾಂಕ್ ಮ್ಯಾನೇಜರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + three =
Remember me
