ಮುಂಬೈ:ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ನನ್ನು ಮುಂಬೈನ ಒಶಿವರಾ ಪೊಲೀಸರು ಗುರುವಾರ (ಫೆ.16) ತಡರಾತ್ರಿ ಬಂಧಿಸಿದ್ದಾರೆ.
ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸೆಲ್ಫಿ ಕೊಡಲು ನಿರಾಕರಿಸಿದ್ದಕ್ಕೆ ಒಂದು ಗುಂಪು ಪೃಥ್ವಿ ಶಾ ಮೇಲೆ ದಾಳಿ ಮಾಡಿದೆ. ಈ ಪ್ರಕರಣದಲ್ಲಿ ಸಪ್ನಾ ಎಂಬ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಬಂಧನವಾಗಿದ್ದು, ಪೃಥ್ವಿ ಶಾ ಅವರೇ ಮೊದಲು ನನ್ನನ್ನು ನಿಂದಿಸಿದರು ಎಂದು ಆಕೆ ಆರೋಪ ಮಾಡಿದ್ದಾಳೆ.
ಅಂದಹಾಗೆ ಶಾ ಅವರು ತಮ್ಮ ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್​ ತೆರಳಿದ್ದರು. ಹೋಟೆಲ್​ ಒಳಗೆ ಕೇಳಿದ ಅನೇಕ ಸೆಲ್ಫಿಗಳಿಗೆ ಅವರು ಪೋಸ್​​ ನೀಡಿದರು. ಆದರೆ, ಕೆಲವರು ಹೋಟೆಲ್​ ಹೊರಗೆ ಶಾ ಅವರಿಗಾಗಿ ಕಾಯುತ್ತಿದ್ದರು. ಅವರಿಗೂ ಪೃಥ್ವಿ ಶಾ ಸಹಕರಿಸಿ, ಸೆಲ್ಫಿ ಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕರು ಮತ್ತೆ ಮತ್ತೆ ಸೆಲ್ಫಿಗೆ ಫೋಸ್ ಕೊಡುವಂತೆ ಕೇಳಿಕೊಂಡಿದ್ದಕ್ಕೆ ಪೃಥ್ವಿ ಶಾ ನಿರಾಕರಿಸಿದ್ದಾರೆ.
ಸೆಲ್ಫಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಗುಂಪು ಶಾ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ನಿಧಾನವಾಗಿ ದೈಹಿಕ ಹಲ್ಲೆಗೆ ತಿರುಗಿದೆ. ಈ ವೇಳೆ ಶಾ ಅವರು ತಮ್ಮ ಕಾರನ್ನೇರಿ ತಕ್ಷಣ ಅಲ್ಲಿಂದ ಹೊರಟರು. ಆದರೆ, ಅಷ್ಟಕ್ಕೆ ಸುಮ್ಮನಾಗದ ಆ ಗುಂಪು ಶಾ ಅವರ ಕಾರನ್ನು ಹಿಂಬಾಲಿಸಿ ಹೋಗಿ ಬೇಸ್​ಬಾಲ್​ ಬ್ಯಾಟ್​ಗಳಿಂದ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ವಿಂಡ್​ಶೀಲ್ಡ್​ಗೆ ಹಾನಿಯಾಗಿದೆ.
ಇದೀಗ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಓರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧನ ಮಾಡಿದ್ದಾರೆ.(ಏಜೆನ್ಸೀಸ್​)
ಸೆಲ್ಫಿ ನಿರಾಕರಿಸಿದ್ದಕ್ಕೆ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ದಾಳಿ

ಹದಿನೈದು-ಹದಿನೆಂಟು; ವಯಸ್ಸಿನ ಕಗ್ಗಂಟು

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ 12 ಚೀತಾಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 11 =
Remember me
