ಮುಂಬೈ:ಭಾರತದ ಕ್ರಿಕೆಟ್​ ದಂತಕಥೆ, ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಗೌರಿ, ಗಣೇಷ ಹಬ್ಬವನ್ನು ಸರಳ ಮತ್ತು ಸಡಗರದಿಂದ ಆಚರಿಸಿದ್ದು, ಮೂರು ದಿನ ಗಣೇಶ ಮೂರ್ತಿಯನ್ನು ಪೂಜಿಸಿದ ಬಳಿಕ ಸೋಮವಾರ(ಸೆ.9) ಶ್ರದ್ಧಾ, ಭಕ್ತಿಯಿಂದ ಡ್ರಂನಲ್ಲಿನ ನೀರಿನಲ್ಲಿ ವಿಸರ್ಜಿಸಿದರು.
ಇದನ್ನೂ ಓದಿ:ಆಸ್ಪತ್ರೆಯಿಂದ ಶಿಶು,ಪತ್ನಿಯನ್ನು ಡಿಸ್ಚಾರ್ಜ್​ ಮಾಡಿಸಲು ಮೊದಲ ಮಗು ಮಾರಿದ ತಂದೆ!
ತಮ್ಮ ಮನೆಯಲ್ಲಿ ಕೂರಿಸಿದ್ದ ಗಣೇಶ ಮೂರ್ತಿಗೆ ಸಚಿನ್​ ಮಂಗಳಾರತಿ ಮಾಡಿ ವಿದಾಯ ಹೇಳುವ ವಿಡಿಯೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ನೀರಿನ ಡ್ರಮ್ ಬಳಸಿ ಗಣಪತಿ ವಿಸರ್ಜನೆ ಮಾಡುವುದನ್ನು ಕಾಣಬಹುದು.
ಅವರು ಪೋಸ್ಟ್‌ಗೆ, “ಗಣಪತಿ ಬಾಪ್ಪಾ, ನೀನು ನನಗೆ ನೀಡಿದ ಸಂತೋಷ, ಶಾಂತಿ ಮತ್ತು ಪ್ರೀತಿ ಯಾವಾಗಲೂ ನೆನಪಿನಲ್ಲಿರುತ್ತದೆ. ಮುಂದಿನ ವರ್ಷ ಬೇಗ ಬನ್ನಿ..ಗಣಪತಿ ಬಪ್ಪಾ ಮೋರಯಾ, ಮಂಗಳಮೂರ್ತಿ ಮೋರಯಾ ಎಂದು ಸಚಿನ್​ ಶೀರ್ಷಿಕೆ ನೀಡಿದ್ದಾರೆ.
“ನಾವು ನಮ್ಮ ಮನೆಗೆ ಗಣಪತಿಯನ್ನು ಸ್ವಾಗತಿಸುತ್ತಿದ್ದಂತೆ, ಅವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನಮ್ಮ ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ಮುನ್ನಡೆಸುತ್ತಾರೆ” ಎಂದು ಸಚಿನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಅಪ್ರಾಪ್ತ ಪುತ್ರನ ಮೇಲೆ ಲೈಂಗಿಕ ದೌರ್ಜನ್ಯ: ಪತಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
