ಮುಂಬೈ:ಸಾವಿನ ಕರೆ ಬಾರದಿದ್ದರೆ, ಏನು ಮಾಡಿದರೂ ಸಾಯುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಯೊಂದು ಮುಂಬೈನ ಉಲ್ವೆ ಪ್ರದೇಶದಲ್ಲಿ ನಡೆದಿದೆ.
ಜೀವನದಲ್ಲಿ ಜುಗುಪ್ಸೆ ಹೊಂದಿದ ಮಹಿಳೆಯೊಬ್ಬಳು ಮೂರು ವರ್ಷದ ತನ್ನ ಮಗುವಿನ ಬಗ್ಗೆ ಯೋಚನೆಯನ್ನೂ ಮಾಡದೇ ಆತ್ಮಹತ್ಯೆ ಮಾಡಿಕೊಳ್ಳಲು ಹೋದರೂ ಆ ಮಗುವಿನಿಂದಲೇ ಬದುಕಿ ಬಂದಿರುವ ಕುತೂಹಲ ಘಟನೆ ಇದು.
ಮಗುವಿನ ಅಮ್ಮ ಒಂದು ಕೋಣೆಯಲ್ಲಿ ಮಗುವನ್ನು ಬಿಟ್ಟು, ಇನ್ನೊಂದು ಕೋಣೆಯ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಹಾಕಿಕೊಳ್ಳಲು ತಯಾರಿ ನಡೆಸಿದ್ದಳು. ಆದರೆ ಈ ಮಗುವಿಗೆ ಅಮ್ಮನ ಕೃತ್ಯ ಅದ್ಹೇಗೆ ಅರಿವಿಗೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ತನ್ನ ಅಮ್ಮ ಏನೋ ಒಂದು ಅನಾಹುತ ಮಾಡಿಕೊಳ್ಳಲು ಹೋಗುತ್ತಿದ್ದಾಳೆ ಎನ್ನುವುದು ಅರಿವಾಗಿದೆ. ಮಗು ಜೋರಾಗಿ ಅತ್ತಿದೆ.
ಮಗುವಿನ ಅಳು ಕೇಳಿದರೂ ಅದನ್ನು ಕಡೆಗಣಿಸಿದ ಅಮ್ಮ, ಸಾಯುವುದೊಂದೇ ತನಗಿರುವ ಮಾರ್ಗ ಎಂದು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಮಗುವು ತೀರಾ ವಿಚಿತ್ರವಾಗಿ ಅಳಲು ಶುರು ಮಾಡಿದೆ. ಅಕ್ಕ ಪಕ್ಕದ ಮನೆಯವರಿಗೂ ಕೇಳುವಂತೆ ಮಗು ಜೋರಾಗಿ ಕಿರುಚಿಕೊಂಡಿದೆ.
ಇದನ್ನೂ ಓದಿ:‘ಸುಂದರ ತ್ವಚೆಗಾಗಿ ಇದನ್ನು ಬಳಸಿ’ ಎಂದು ಇನ್ಮುಂದೆ ಹೇಳಲ್ಲ ಎಂದ ಜಾನ್ಸ್​ನ್​ ಆ್ಯಂಡ್ ಜಾನ್ಸನ್​
ಹಿಂದೆಂದೂ ಮಗು ಈ ರೀತಿ ಅಳುವುದನ್ನು ಕೇಳಿಸಿರದ ನೆರೆಹೊರೆಯವರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿದಾಗ ಮಗು ಒಂದೇ ಕಂಡಿದೆ. ಮಗುವನ್ನು ಬಿಟ್ಟು ಎಲ್ಲರೂ ಹೊರಗೆ ಹೋಗಿರಬೇಕು, ಅದಕ್ಕಾಗಿ ಮಗು ಅಳುತ್ತಿದೆ ಎಂದುಕೊಂಡು ಅದನ್ನು ಎತ್ತಿಕೊಂಡಿದ್ದಾರೆ.
ಆದರೆ ಆ ಕಂದ ಮಾತ್ರ ಅವರ ಬಳಿ ಹೋಗದೇ ಅಮ್ಮ ಹೋಗಿರುವ ಕೋಣೆಯತ್ತ ಕೈತೋರಿಸಿದೆ. ಇದರಿಂದ ಸಂಶಯಗೊಂಡ ಸಿಬ್ಬಂದಿ ಬಾಗಿಲು ಬಡಿದರೆ ಅದು ಒಳಗಡೆಯಿಂದ ಲಾಕ್​ ಆಗಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬಾಗಿಲು ಒಡೆದಾಗ ಆಗ ತಾನೇ ಮಹಿಳೆ ನೇಣು ಹಾಕಿಕೊಂಡಾಗಿತ್ತು. ಕೂಡಲೇ ಸಿಬ್ಬಂದಿ ಮಹಿಳೆಯನ್ನು ಕೆಳಗೆ ಇಳಿಸಿದರು. ಇನ್ನೂ ಆಕೆ ಉಸಿರಾಡುತ್ತಲೇ ಇದ್ದರು. ತಡ ಮಾಡದೇ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯಕ್ಕೆ ಆ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ. ಒಟ್ಟಿನಲ್ಲಿ ಮಗು ತನ್ನ ಅಮ್ಮನ ಜೀವ ಉಳಿಸಿದೆ.
‘ಪತಿಯ ಕೊಂದ ಅಪ್ಪ-ಅಮ್ಮನಿಗೆ ಘೋರ ಶಿಕ್ಷೆಯಾಗುವವರೆಗೂ ವಿರಮಿಸಲಾರೆ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
