ಜೈಪುರ:ಪೊಲೀಸ್​ ಠಾಣೆಗೆ ತನ್ನ ಗಂಡನ ಬಗ್ಗೆ ದೂರು ನೀಡಲು ಹೋದ ಮಹಿಳೆಯೊಬ್ಬಳ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರವೆಸಗಿರುವ ಘಟನೆ ರಾಜಸ್ತಾನದಿಂದ ವರದಿಯಾಗಿದೆ. ಠಾಣೆಯ ಕಾಂಪೌಂಡ್​ನೊಳಗೇ, ಸಬ್​ಇನ್ಸ್​ಪೆಕ್ಟರ್ ವಾಸಿಸುತ್ತಿದ್ದ ಕೊಠಡಿಯಲ್ಲಿ, ಮೂರು ದಿನಗಳ ಕಾಲ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.
ಆಳ್ವಾರ್ ಜಿಲ್ಲೆಯ ಪೊಲೀಸ್​ ಠಾಣೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆರೋಪಿಯಾದ ಸುಮಾರು 50 ವರ್ಷ ವಯಸ್ಸಿನ ಸಬ್​ಇನ್ಸ್​ಪೆಕ್ಟರ್ ಸಿಂಗ್ ಎಂಬುವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ತಕ್ಷಣ ಭಾನುವಾರ ಅತ್ಯಾಚಾರದ ಕೇಸು ದಾಖಲಿಸಿದ್ದು, ಮ್ಯಾಜಿಸ್ಟ್ರೇಟರ ಮುಂದೆ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:‘ರಾಜ್ಯವನ್ನು ಅಭಿವೃದ್ಧಿಪಡಿಸಲು ನಿಮ್ಮನ್ನು ಯಾರೂ ತಡೆದಿರಲಿಲ್ಲ’ : ಪ್ರಧಾನಿಗೆ ಟಿಎಂಸಿ ತಿರುಗೇಟು
26 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಮಾರ್ಚ್​ 2 ರಂದು ತನ್ನ ಗಂಡ ತನ್ನ ವಿರೋಧವಿದ್ದರೂ ತನಗೆ ವಿಚ್ಛೇದನ ಕೊಡಬೇಕೆಂದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಳು. ಆ ಸಂದರ್ಭದಲ್ಲಿ ಠಾಣೆಯಲ್ಲಿ ಸೆಕೆಂಡ್​ ಇನ್ ಕಮಾಂಡ್​ ಆಗಿದ್ದ ಸಬ್​ಇನ್ಸ್​ಪೆಕ್ಟರ್ ಸಿಂಗ್ ಎಂಬುವನು ಆಕೆಯ ಮೇಲೆ ಅತ್ಯಾಚಾರ ಎಸಗಿದ. ಮಾರ್ಚ್ 5 ರವರೆಗೆ ಪೊಲೀಸ್ ಠಾಣೆಯ ಕಾಂಪೌಂಡಿನಲ್ಲಿ ತಾನು ವಾಸಿಸುತ್ತಿದ್ದ ಕೊಠಡಿಯಲ್ಲಿ ಕೂಡಿಹಾಕಿ ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ನಡೆಸಿದ ಎನ್ನಲಾಗಿದೆ.
ಅತ್ಯಾಚಾರದ ಆರೋಪವನ್ನು ಸಮರ್ಥಿಸುವ ಮೊಬೈಲ್ ರೆಕಾರ್ಡಿಂಗ್​ಅನ್ನು ಕೂಡ ಮಹಿಳೆ ಒದಗಿಸಿದ್ದಾಳೆ. ಆರೋಪಿಯನ್ನು ಶೀಘ್ರದಲ್ಲೇ ಅಮಾನತುಗೊಳಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಠಾಣಾಧಿಕಾರಿಯ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಳ್ವಾರ್​ ಎಸ್ಪಿ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

“ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + sixteen =
Remember me
