ಜೈಪುರ:ದಲಿತ ಯುವತಿಯೊಬ್ಬಳ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೇದೆಗಳು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ರಾಜಸ್ಥಾನದ ಬಿಕಾನೇರ್‌ ಎಂಬಲ್ಲಿ ನಡೆದಿದೆ.
ಕಂಪ್ಯೂಟರ್ ತರಗತಿಗೆ ತೆರಳಿದ್ದ ಬಿಕಾನೇರ್‌ನ ಹಳ್ಳಿಯ 20 ವರ್ಷದ ಯುವತಿ ಖಜುವಾಲಾ ಪಟ್ಟಣದಲ್ಲಿ ನಿನ್ನೆ(ಜೂ.20) ಮಧ್ಯಾಹ್ನ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಳಿಕ ಸಂತ್ರಸ್ತೆಯ ತಂದೆ ಖಜುವಾಲಾ ಪೊಲೀಸ್ ಠಾಣೆಯ ಇಬ್ಬರು ಪೇದೆಗಳಾದ ಮನೋಜ್, ಭಾಗೀರಥ್ ಹಾಗೂ ದಿನೇಶ್ ಬಿಷ್ಣೋಯ್ ಎಂಬಾತನ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದರು.
ಇದನ್ನೂ ಓದಿ:VIDEO | ನೇತಾಡುತ್ತಿದೆ ಸ್ಕೂಟರ್! ಇದು ಹೇಗೆ ಸಾಧ್ಯ ಎಂದ ನೆಟ್ಟಿಗರು
ಖಾಜುವಾಲಾ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳ ಸಹಾಯದೊಂದಿಗೆ ದಿನೇಶ್ ಯುವತಿಯನ್ನು ಅಪಹರಿಸಿದ್ದಾನೆ. ಬಳಿಕ ಆಕೆಯನ್ನು ನಿವಾಸಕ್ಕೆ ಕರೆದೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಹತ್ಯೆಗೈದಿದ್ದಾರೆ.
ಆರೋಪಿ ದಿನೇಶ್ ವಿಷ್ಣೋಯ್ ಕಳೆದ 15 ದಿನಗಳಿಂದ ಯುವತಿಯನ್ನು ಹಿಂಬಾಲಿಸುತ್ತಿದ್ದ ಎಂದು ಸಂತ್ರಸ್ತೆ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಂಪ್ಯೂಟರ್‌ ಸೆಂಟರ್‌ಗೆ ತೆರಳಿದ್ದ ಮಗಳು ಮನೆಗೆ ಬಂದಿರಲಿಲ್ಲ. ಈ ವೇಳೆ ಖಜುವಾಲಾ ಆಸ್ಪತ್ರೆಯಿಂದ ಕರೆ ಬಂದಿದ್ದು, ಮಗಳು ಗಾಯಗೊಂಡ ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆ ತಲುಪಿದಾಗ ಸಾವಿನ ಸುದ್ದಿ ತಿಳಿಯಿತು ಎಂದು ಮೃತ ಯುವತಿ ತಂದೆ ಹೇಳಿದ್ದಾರೆ.
ಇದನ್ನೂ ಓದಿ:ರೈತನ ಮೇಲೆ ಕಲ್ಲು ಲಾರಿ ಹತ್ತಿಸಿ ಹತ್ಯೆ! ಚುರುಕುಗೊಂಡ ತನಿಖೆ
ಆರೋಪಿಗಳಾದ ದಿನೇಶ್ ಬಿಷ್ಣೋಯ್, ಮನೋಜ್, ಭಾಗೀರಥ್ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವನಿ ಗೌತಮ್ ಮಾತನಾಡಿ, ‘ಯುವತಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಖಾಸಗಿ ಅಂಗಗಳಲ್ಲಿ ಗಾಯದ ಗುರುತುಗಳಿದ್ದವು. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಪೊಲೀಸರ ಹೆಸರು ಬಹಿರಂಗವಾಗಿದ್ದು, ಎಫ್‌ಐಆರ್ ದಾಖಲಾದ ತಕ್ಷಣ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಕರಣ ವರದಿಯಾಗುತ್ತಿದ್ದಂತೆ ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಕೆಲ ರಾಜಕೀಯ ಮುಖಂಡರು ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದು, ಸೂಕ್ತ ತನಿಖೆ ನಡೆಸಬೇಕು. ಪರಿಹಾರವಾಗಿ 1 ಕೋಟಿ ರೂ. ಹಾಗೂ ಸಂತ್ರಸ್ತೆ ಮನೆಯವರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಆಗ್ರಹಿಸಿರುವುದು ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
