ನವದೆಹಲಿ:ನಿರ್ಗತಿಕ ತಾಯಿ ಮಗಳ ಮೇಲೆ ಒಂದೇ ಸಮಯದಲ್ಲಿ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇದನ್ನು ಸ್ಥಳೀಯರೊಬ್ಬರು ನೋಡಿದ್ದು, ರಕ್ಷಣೆಗೆ ಮುಂದಾಗುವ ಬದಲು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಇದನ್ನೂ ಓದಿ:ಮಗಳಿಗೆ ಹೆಮ್ಮೆಯಿಂದ ಸಲ್ಯೂಟ್ ಮಾಡಿದ ಸರ್ಕಲ್ ಇನ್ಸ್​ಪೆಕ್ಟರ್!
ವಾಯುವ್ಯ ದೆಹಲಿಯಲ್ಲಿ ಇಂತದ್ದೊಂದು ಘಟನೆ ವರದಿಯಾಗಿದೆ. ಆ ಕುಟುಂಬದ ಯಜಮಾನ ಲಾಕ್​ಡೌನ್​ ವೇಳೆಯಲ್ಲಿ ಊರಿಗೆ ತೆರಳಿ ಅಲ್ಲಿಯೇ ವಾಸವಾರಂಭಿಸಿದ್ದಾನೆ. ನಗರದಲ್ಲೇ ಉಳಿದ 35 ವರ್ಷದ ಮಹಿಳೆ ಮತ್ತು ಆಕೆಯ 18 ವರ್ಷದ ಮಗಳು ಇಲ್ಲಿ ಚಿಂದಿ ಹಾಯ್ದುಕೊಂಡು ಜೀವನ ನಡೆಸುತ್ತಿದ್ದರು. ಡಿಸೆಂಬರ್​ 29ರ ರಾತ್ರಿ ಈ ಅಮ್ಮ ಮಗಳು ರಸ್ತೆ ಬದಿಯಲ್ಲಿದ್ದಾಗ ಅವರ ಮೇಲೆ ಇಬ್ಬರು ಯುವಕರು ದಾಳಿ ನಡೆಸಿದ್ದಾರೆ.
ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಯುವಕರು ಅಮ್ಮ ಮತ್ತು ಮಗಳ ಮೇಲೆ ಏಕಕಾಲದಲ್ಲಿ ರೇಪ್​ ಮಾಡಿದ್ದಾರೆ. ಬಾಯಿ ಮುಚ್ಚಿಕೊಳ್ಳದಿದ್ದರೆ ಕಲ್ಲು ಎತ್ತಾಕಿ ಕೊಲೆ ಮಾಡುವುದಾಗಿಯೂ ಹೆದರಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ವಾಹನಗಳು ಓಡಾಡಿವೆಯಾದರೂ ಯಾರೊಬ್ಬರೂ ಅಮ್ಮ ಮಗಳ ಸಹಾಯಕ್ಕೆ ಮುಂದೆ ಬಂದಿಲ್ಲ. ಅಲ್ಲೇ ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬ ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್​ ಮಾಡಿದ್ದಾನೆ.
ಇದನ್ನೂ ಓದಿ:ಲಾಕ್​ಡೌನ್​ನಲ್ಲಿ ಊಟದ ಹೆಸರಲ್ಲೇ ವಂಚಿಸಿದ ಖತರ್ನಾಕ್​ ಮಹಿಳೆ! ಫುಡ್ಡೂ ಹೋಯ್ತು, ದುಡ್ಡೂ ಹೋಯ್ತು!
ಈ ವಿಚಾರವಾಗಿ ಅಮ್ಮ ಮಗಳು ಪೊಲೀಸ್​ ಠಾಣೆಯ ಮೆಟ್ಟಿಲನ್ನೇರಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ವಿಡಿಯೋವನ್ನು ನೋಡಿ ಪೊಲೀಸರೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿದ್ದ ಆರೋಪಿಗಳನ್ನು ಗುರುತಿಸಿ ಅವರನ್ನು ಭಾನುವಾರದಂದು ಬಂಧಿಸಲಾಗಿದೆ. ಆ ತಾಯಿ ಮಗಳನ್ನು ಪತ್ತೆ ಹಚ್ಚಿ ಅವರ ಹೇಳಿಕೆಯನ್ನೂ ತೆಗೆದುಕೊಳ್ಳಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋವನ್ನು ಹರಿಬಿಟ್ಟ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್)
‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

ಕೋವಿಡ್​ ರೋಗಿಯ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ನರ್ಸ್​: ಪ್ರಕರಣದಲ್ಲಿದೆ ಊಹೆಗೂ ಮೀರಿದ ಸ್ಫೋಟಕ ಟ್ವಿಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
