ಅಹಮದಾಬಾದ್​:ಕೇಂದ್ರ ಸರ್ಕಾರ ಸೇರಿದಂತೆ ಹಲವಾರು ಕೆಲವು ರಾಜ್ಯ ಸರ್ಕಾರಗಳು ಕರೊನಾ ಬಿಕ್ಕಟ್ಟಿನ ನಿವಾರಣೆಗೆ ಇದಾಗಲೇ ಹಲವಾರು ಸಮರ್ಥ ಕ್ರಮಗಳನ್ನು ತೆಗೆದುಕೊಂಡಿದೆ. ಜನಸಂಖ್ಯೆಯ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡರೆ ಭಾರತದಲ್ಲಿ ಸೋಂಕಿತರ ಪ್ರಮಾಣ ಇತರ ಕೆಲವು ದೇಶಗಳಿಗಿಂತಲೂ ಕಡಿಮೆ ಎಂದೇ ಶ್ಲಾಘನೆ ವ್ಯಕ್ತವಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಸೇರಿದಂತೆ ಕೆಲವರು ಸದಾ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳನ್ನು ದೂಷಿಸುತ್ತಲೇ ಇದ್ದಾರೆ.
ಅಂಥವರಿಗೆ ಗುಜರಾತ್​ ಹೈಕೋರ್ಟ್​ ಸರಿಯಾದ ಬುದ್ಧಿಮಾತು ಹೇಳಿದೆ. ಜತೆಗೆ, ಕರೊನಾ ಬಿಕ್ಕಟ್ಟಿನ ಕುರಿತಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಇದೇ ಹೈಕೋರ್ಟ್​ ವಿರುದ್ಧವೂ ಮುಖ್ಯನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರೊನಾ ಬಿಕ್ಕಟ್ಟಿನ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ವಿಕ್ರಮ್​ ನಾಥ್​ ಅವರಿಂದ ಇಂಥ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ:ಕರೊನಾ ಬಿಕ್ಕಟ್ಟು ನಿವಾರಣೆ: ಕರ್ನಾಟಕಕ್ಕೆ ಪ್ರಧಾನಿ ಮೋದಿ ಶಹಭಾಸ್​ಗಿರಿ
ಮುಖ್ಯ ನ್ಯಾಯಮೂರ್ತಿಗಳು ರಜೆಯಲ್ಲಿದ್ದ ಹಿನ್ನೆಲೆಯಲ್ಲಿ, ಈ ಪ್ರಕರಣದ ವಿಚಾರಣೆಯು ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ನೇತೃತ್ವದ ಪೀಠ ನಡೆಸಿತ್ತು. ಆ ಸಂದರ್ಭದಲ್ಲಿ ಗುಜರಾತ್​ ಸರ್ಕಾರ ಕರೊನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಿಕ್ಕಟ್ಟಿನ ನಿವಾರಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪೀಠ ಹೇಳಿತ್ತು.
ಮುಖ್ಯ ನ್ಯಾಯಮೂರ್ತಿಗಳು ರಜೆಯಿಂದ ವಾಪಸಾದ ಹಿನ್ನೆಲೆಯಲ್ಲಿ ನಿನ್ನೆ ಈ ಪ್ರಕರಣದ ವಿಚಾರಣೆ ಅವರ ಮುಂದೆ ಬಂದಿತ್ತು. ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗಮನಿಸಿದ ಮುಖ್ಯ ನ್ಯಾಯಮೂರ್ತಿ, ಈ ಹಿಂದೆ ಪೀಠ ಹೊರಡಿಸಿದ್ದ ಆದೇಶವನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿತು. ಜತೆಗೆ, ಕರೊನಾ ವೈರಸ್​ ನಿವಾರಣೆಗೆ ಆಡಳಿತ ಪಕ್ಷವನ್ನು ದೂಷಿಸುತ್ತಿರುವವರ ವಿರುದ್ಧವೂ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕುರ್ಚಿಗೆ ಕರ್ನಾಟಕ ಬರೆಯಲಿದೆಯೇ ಇತಿಹಾಸ?
‘ಕರೊನಾ ಬಿಕ್ಕಟ್ಟನ್ನು ಬಗೆಹರಿಸಲು ಎಲ್ಲರೂ ಒಟ್ಟಾಗಿ ದುಡಿಯುವ ಅಗತ್ಯವಿದೆ. ಇದನ್ನು ಏಕಾಏಕಿ ಹೋಗಲಾಡಿಸಲು ಸರ್ಕಾರವೇನು ಮ್ಯಾಜಿಕ್​ ಮಾಡಲು ಆಗುತ್ತದೆಯೆ? ಟೀಕಿಸುವುದನ್ನು ಬಿಟ್ಟು ಆಡಳಿತ ಪಕ್ಷವನ್ನು ದೂರುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಸರ್ಕಾರ ಏನೂ ಮಾಡದೇ ಸುಮ್ಮನೆ ಕುಳಿತಿದ್ದರೆ ಇಷ್ಟೊತ್ತಿಗಾಗಲೇ ನಾವೆಲ್ಲಾ ಪ್ರಾಣ ಕಳೆದುಕೊಳ್ಳುತ್ತಿದ್ದೆವು ಎಂಬುದು ನೆನಪಿರಲಿ. ಈ ಬಿಕ್ಕಟ್ಟಿನಲ್ಲಿ ರಾಜಕೀಯ ತೂರಿಸುವ ಬದಲು ಆಡಳಿತ ಪಕ್ಷಗಳ ಜತೆ ಕೈಜೋಡಿಸಿ ಕೆಲಸ ಮಾಡಿ ಎಂದು ಅವರು ಹೇಳಿದರು. ಅದೇ ರೀತಿ ಹಿಂದಿನ ಪೀಠ ಹೊರಡಿಸಿರುವ ಆದೇಶದಿಂದ ವಿನಾಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ ಅವರು ವಿಷಾದಿಸಿದರು.
ಇದೇ ವೇಳೆ ಹಿಂದಿನ ಪೀಠ ಹೊರಡಿಸಿರುವ ಆದೇಶವನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ, ಈ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಣೆ ಮಾಡಬೇಕು, ಯಾವುದೇ ಲೋಪ ಆಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಹಿಂದಿನ ಪೀಠ ಇಂಥದ್ದೊಂದು ಆದೇಶ ಹೊರಡಿಸಿದ್ದು, ಅದರ ಪಾಲನೆ ಆಗಬೇಕು ಎಂದೂ ನ್ಯಾ,ವಿಕ್ರಮ್​ನಾಥ್​ ಹೇಳಿದರು.
ಭಾರತದ ಆ್ಯಪ್​ಗೆ ಹೆದರಿ​ ಚೀನಾದ ಟಿಕ್​ಟಾಕ್​ ರೇಟಿಂಗ್​ ಹೆಚ್ಚಿಸೇಬಿಟ್ಟಿತಲ್ಲ ಗೂಗಲ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
