ತ್ರಿಶ್ಶೂರ್​:ಬೆಳ್ಳಂಬೆಳಗ್ಗೆ ಮನೆ ಬಾಗಿಲಲ್ಲೇ ಮೊಸಳೆ ಪ್ರತ್ಯಕ್ಷವಾದರೆ ! ವಿದೇಶದಲ್ಲೆಲ್ಲೋ ನಡೆದ ಘಟನೆ ಅಲ್ಲ. ಇದು ಪಕ್ಕದ ಕೇರಳದಲ್ಲಿ ಇಂಥದ್ದೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮೊಸಳೆಯನ್ನು ಸೆರೆ ಹಿಡಿದು ಜಲಾಶಯಕ್ಕೆ ಬಿಡುವ ಕಾರ್ಯ ನಡೆಯಿತು.
ಕೇರಳದ ಪ್ರಸಿದ್ಧ ಆತಿರಾಪಳ್ಳಿ ಜಲಪಾತ ಸಮೀಪದ ಪ್ರದೇಶದಲ್ಲಿರುವ ಮನೆ ಅದು. ಷಹಜಹಾನ್ ತಚ್ಚೇತ್ ಆ ಮನೆಯೊಡೆಯ. ಬೆಳಗ್ಗೆ ಐದು ಗಂಟೆಗೆ ಎಂದಿನಂತೆ ನಿದ್ದೆಯಿಂದ ಎದ್ದ ಅವರ ಪತ್ನಿ ಬಾಗಿಲು ತೆರೆದಾಗ ವರಾಂಡದಲ್ಲಿ ಬೃಹತ್ ಗಾತ್ರದ ಮೊಸಳೆ ಮಲಗಿರುವುದು ಕಂಡಿತ್ತು. ಕೂಡಲೇ ಅವರು ಕಿರುಚಿಕೊಂಡಿದ್ದರು. ಕೂಡಲೇ ಮನೆಯವರಷ್ಟೇ ಅಲ್ಲ, ಅಕ್ಕ ಪಕ್ಕದ ಮನೆಯವರೆಲ್ಲರೂ ಎದ್ದು ಬಂದು ಮೊಸಳೆಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆ ಮೊಸಳೆ ವರಾಂಡದಲ್ಲಿದ್ದ ಸೋಫಾ ಕೆಳಗೆ ಬಚ್ಚಿಟ್ಟುಕೊಂಡಿತು. ಕೂಡಲೇ ಅರಣ್ಯ ಇಲಾಖೆಯವರಿಗೆ ಸುದ್ದಿ ತಲುಪಿಸಿದ್ದು, ಮೊಸಳೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿ ಅದನ್ನು ಸಮೀಪದ ಅತಿರಾಪಳ್ಳಿ ಜಲಾಶಯಕ್ಕೆ ಬಿಡಲಾಗಿದೆ.
ಇದನ್ನೂ ಓದಿ:ಮೊದಲ ಪತ್ನಿಯೂ ಬೇಡ… ನೀವ್ಯಾರೂ ಬೇಡ… ಎಂದು ಎಲ್ಲರನ್ನೂ ಹೊರಕ್ಕಿಟ್ಟ ಇಮ್ರಾನ್​ ಖಾನ್​!
ಈ ವಿಲಕ್ಷಣ ಘಟನೆ ಬಗ್ಗೆ ಷಹಜಹಾನ್ ಪ್ರತಿಕ್ರಿಯಿಸಿದ್ದು, ತಡರಾತ್ರಿ ಮನೆಯ ವರಾಂಡದಿಂದ ಅಪರಿಚಿತವಾದ ಧ್ವನಿ ಕೇಳಿಸಿತ್ತು. ಬಹುಶಃ ಬೀದಿ ನಾಯಿ ಏನಾದರೂ ಬಂದಿರಬೇಕು ಎಂದುಕೊಂಡಿದ್ದೆವು. ಮೊಸಳೆ ಅನ್ನೋದು ಗೊತ್ತಾಗಿದ್ದು ಬೆಳಗ್ಗೆ ನನ್ನ ಪತ್ನಿ ಬಾಗಿಲು ತೆರೆದು ನೋಡಿದಾಗಲೇ. ಯಾರಿಗೂ ಏನೂ ತೊಂದರೆ ಆಗಿಲ್ಲ. ಅರಣ್ಯಾಧಿಕಾರಿಗಳು ಮೊಸಳೆಯನ್ನು ಮತ್ತೆ ಜಲಾಶಯಕ್ಕೆ ಬಿಟ್ಟುಬಂದಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
WEB EXCLUSIVE | ಒಂದೇ ಹುದ್ದೆಗೆ ಇಬ್ಬರು ಇಂಜಿನಿಯರ್​ಗಳ ಕಿತ್ತಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
