ಬೆಂಗಳೂರು:‘ಮುಗ್ಧ ಮೊಸಳೆ’- ‘ಬುದ್ಧಿವಂತ ಕತ್ತೆ’…. ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಬಿಜೆಪಿ ನಡುವೆ ನಡೆದಿರುವ ಇಂಥದ್ದೊಂದು ವಿಚಿತ್ರ ರಾಜಕೀಯ ಟೀಕೆ-ಪ್ರತಿಟೀಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.
ವಿಚಿತ್ರವೆಂದರೆ ‘ಮೊಸಳೆ ಮುಗ್ಧ’ ಎಂದು ಕೇವಲ ಎರಡು ಪದದ ಟೀಕೆಯನ್ನು ರಾಹುಲ್ ಗಾಂಧಿ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಮಾಡಿದ್ದಾರೆ. ಮೊಸಳೆ ಮುಗ್ಧವಲ್ಲ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಪದ ಬಳಕೆಯಿಂದ ಅವರು ತನ್ನ ಎದುರಾಳಿಯನ್ನು ಕೆಣಕಿದ್ದಾರೆಂಬುದು ದಿಟ. ತಾನು ಹೇಳಬೇಕಾದ್ದನ್ನು ಅತಿ ಬುದ್ಧಿವಂತಿಕೆಯಿಂದ ಇಲ್ಲಿ ಮಾಡಿದ್ದಾರೆ. ಸಾಮಾನ್ಯವಾಗಿ ಅವರು ಪ್ರತಿ ದಿನ ಹೆಚ್ಚಿನದಾಗಿ ಪ್ರಧಾನಿ ಮೋದಿ ವಿರುದ್ಧವೇ ಟೀಕೆ ಮಾಡುತ್ತಿರುತ್ತಾರೆ. ಪ್ರತಿ ಎರಡು ಟ್ವೀಟ್ ಮೂಲಕ ರಾಜಕಾರಣ ಮಾಡುತ್ತಿದ್ದಾರೆಂಬ ವ್ಯಂಗ್ಯಭರಿತ ಟಿಪ್ಪಣಿಯೂ ಅವರ ಕುರಿತಾಗಿದೆ.
ಇದನ್ನೂ ಓದಿ:ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಅಂದ ಹಾಗೆ, ರಾಹುಲ್ ಗಾಂಧಿ ಟ್ವೀಟ್‌ಗೆ ಕೌಂಟರ್ ನೀಡಿರುವ ಕರ್ನಾಟಕ ಬಿಜೆಪಿ ಇನ್ನಷ್ಟು ಬುದ್ಧಿವಂತಿಕೆ ಪ್ರದರ್ಶಿಸಿದೆ. ‘ಬುದ್ಧಿವಂತ ಕತ್ತೆ’ ಎಂದು ತಾನೂ ಎರಡೇ ಪದಗಳಲ್ಲಿ ಟಾಂಗ್ ನೀಡಿದೆ. ನೇರವಾಗಿ ಯಾರನ್ನೂ ಎಳೆದು ತರದೇ ಪರೋಕ್ಷ ಪದಗಳಲ್ಲೇ ಬಿಸಿ ಮುಟ್ಟಿಸಿದೆ. ದಡ್ಡತನವನ್ನು ಸಾಮಾನ್ಯವಾಗಿ ಕತ್ತೆಗೆ ಹೋಲಿಸುವುದು ವಾಡಿಕೆ. ಇಲ್ಲಿ ಯಾರನ್ನು ಉದ್ದೇಶಿಸಿ ರಾಹುಲ್ ಕೆಣಕಿದ್ದರೋ, ಬಿಜೆಪಿ ಅದೇ ಧಾಟಿಯಲ್ಲಿ ತಿರುಗೇಟು ನೀಡಿರುವುದು ಗಮನಾರ್ಹವಾಗಿದೆ.
ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

ಕಾಮಗಾರಿ ಹಂತದಲ್ಲಿದ್ದ ಕಟ್ಟಡ ಕುಸಿತ, ಒಬ್ಬ ಸ್ಥಳದಲ್ಲೇ ಸಾವು; ಇನ್ನೊಬ್ಬ ಆಸ್ಪತ್ರೆಗೆ ಕೊಂಡೊಯ್ಯುವಾಗ ನಿಧನ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five − four =
Remember me
