ನವದೆಹಲಿ:ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಚಾರಗಳು ಸುದ್ದಿಯಲ್ಲಿರುತ್ತವೆ. ವಿಚಿತ್ರವಾದ ವಿಡಿಯೋಗಳು ಜನರನ್ನು ಆಶ್ಚರ್ಯಗೊಳಿಸುತ್ತದೆ. ಇಲ್ಲೊಂದು ಪಕ್ಷಿಯ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಪಕ್ಷಿಯೊಂದು(ನೋಡಲು ಕಾಗೆ ಅಂತೆ ಕಾಣುತ್ತಿದೆ) ಮನೆ ಒಳಗೆ ಹಾರಿ ಬಂದು ಮೇಜಿನ ಬಳಿ ಕುಳಿತಿರುವುದು ಕಂಡುಬರುತ್ತದೆ.   ನಂತರ ವೀಡಿಯೊ ಮಾಡುವ ವ್ಯಕ್ತಿಯು ಮೇಜಿನ ಕೆಳಗೆ ಡ್ರಾಯರ್ ಅನ್ನು ತೆರೆಯುತ್ತಾನೆ, ಅದರ ನಂತರ ಪಕ್ಷಿ  ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ಬಂದಿರುವ ಹಣವನ್ನು ಅಲ್ಲಿ ಹಾಕುತ್ತದೆ. ಅಚ್ಚರಿಯ ಸಂಗತಿ ಎಂದರೆ ಆ ಡ್ರಾಯರ್ ನಲ್ಲಿ ಈಗಾಗಲೇ ಸಾಕಷ್ಟು ಹಣ ಇಡಲಾಗಿದೆ. ಇಷ್ಟು ಹಣವನ್ನು ಕಾಗೆಯೇ ತಂದು ಒಟ್ಟುಗೆ ಹಾಕಿದೆ ಎನ್ನಲಾಗಿದೆ.
A post shared by Trollgramofficial ™ 1M (@trollgramofficial)

ಈ ವೀಡಿಯೊವನ್ನು  ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸುದ್ದಿ ಬರೆಯುವವರೆಗೂ 23 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ವಿಡಿಯೋವನ್ನು ಲೈಕ್ ಕೂಡ ಮಾಡಿದ್ದಾರೆ.
ಈ ಕಾಗೆ ನಮಗೂ ಬೇಕು? ಎಲ್ಲಿ ಸಿಗುತ್ತದೆ ಈ ಪಕ್ಷಿ? ಹಣ ಹೀಗೂ ಸಂಪಾದನೆ ಮಾಡಬಹುದಾ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
ಸ್ನೇಹಿತರಿಗಾಗಿ ಘಮ..ಘಮಿಸುವ ಬಿರಿಯಾನಿ ಸಿದ್ಧಪಡಿಸಿದ ಸ್ಟಾರ್ ಹೀರೋ; ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
