ಅಮೃತಸರ:ಹಬ್ಬದ ಪ್ರಯುಕ್ತ ಪಂಜಾಬ್​ನಿಂದ ಬಿಹಾರಕ್ಕೆ ಹೊರಡಬೇಕಿದ್ದ ವಿಶೇಷ ರೈಲೊಂದು ರದ್ದಾದ ಹಿನ್ನಲೆಯಲ್ಲಿ ಉದ್ರಿಕ್ತಗೊಂಡ ಪ್ರಯಾಣಿಕರು ರೈಲು ನಿಲ್ದಾಣವನ್ನು ಧ್ವಂಸಗೊಳಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸಿರ್ಹಿಂದ್​ನಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಪಂಜಾಬ್​ನ ಫತೇಘರ್​ ಸಾಹಿಬ್​ ಜಿಲ್ಲೆಯ ಸಿರ್ಹಿಂದ್​ನಿಂದ ಬಿಹಾರದ ಸಹರ್ಸಾಗೆ ವಿಶೇಷ ರೈಲೊಂದು ಹೊರಡಬೇಕಿತ್ತು. ಆದರೆ, ರೈಲು ರದ್ದಾಗಿದೆ ಎಂಬ ವಿಚಾರ ಹೊರಬಂದ ಬಳಿಕ ಗದ್ದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
VIDEO | Irate passengers reportedly pelted stones at Sirhind Railway Station after a special train from Punjab to Bihar's Katihar was cancelled earlier today.pic.twitter.com/0nfVq07nWi
ಇದನ್ನೂ ಓದಿ:ವಿಜಯೇಂದ್ರ ಅಧಿಕಾರ ಸ್ವೀಕರಿಸುವಾಗಲೇ ಕಾಂಗ್ರೆಸ್ ಕಚೇರಿಯಲ್ಲೂ ಪಕ್ಷ ಸೇರ್ಪಡೆ! ಕೈ ಹಿಡಿಯೋರ್ಯಾರು?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನುರಾರು ಮಂದಿ ರೈಲ್ವೆ ಹಳಿ ಮೇಲೆ ಜಮಾಯಿಸಿ ಇಲಾಖೆ ವಿರುದ್ಧ ಘೋಷನೆಗಳನ್ನು ಕೂಗಿ ಅಲ್ಲಿ ನಿಂತಿದ್ದ ಪ್ಯಾಸೆಂಜರ್​ ರೈಲುಗಳ ಮೇಲೆ ಕಲ್ಲು ತೂರಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ ಪೊಲೀಸರ ಮೇಲೂ ಉದ್ರಿಕ್ತರ ಗುಂಪು ಕಲ್ಲು ತೂರಿದ್ದು, ಅಧಿಕಾರಿಗಳು ಗಂಭಿರವಾಗಿ ಗಾಯಗೊಂಡಿದ್ದಾರೆ.
ಶನಿವಾರ ಗುಜರಾತ್​ನಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹೊರಟಿದ್ದ ವಿಶೇಷ ರೈಲೊಂದನ್ನು ಹತ್ತುವ ವೇಳೆ ಕಾಲ್ತುಳಿತ ಉಂಟಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾನುವಾರ ರೈಲು ಹತ್ತುವ ವೇಳೆ ಕಾಲ್ತುಳಿತ ಉಂಟಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 13 =
Remember me
