ಮುಂಬೈ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಅದರಲ್ಲಿ ಮಹಾರಾಷ್ಟ್ರದ ಪಾಲು ಶೇ.35ಕ್ಕೂ ಅಧಿಕ ಅಂದರೆ 35,000ಕ್ಕೂ ಅಧಿಕ ರೋಗಿಗಳು ಮಹಾರಾಷ್ಟ್ರದಲ್ಲಿಯೇ ಇದ್ದಾರೆ. ಅದರಲ್ಲೂ ಮುಖ್ಯವಾಗಿ ಮುಂಬೈವೊಂದರಲ್ಲಿಯೇ ಕೋವಿಡ್​ ಪೀಡಿತರ ಸಂಖ್ಯೆ 21 ಸಾವಿರಕ್ಕೂ ಹೆಚ್ಚು.
ಇದಲ್ಲದೇ, ಮುಂಬೈನಿಂದ ತೆರಳುತ್ತಿರುವ ವಲಸೆ ಕಾರ್ಮಿಕರು ಆಯಾ ರಾಜ್ಯಗಳಲ್ಲಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ. ಕರ್ನಾಟಕದಲ್ಲೂ ಮುಂಬೈ ನಂಟಿನಿಂದ ಹಬ್ಬುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕರೊನಾ ಜನ್ಮಸ್ಥಳವಾದ ಚೀನಾದ ವುಹಾನ್​ಗೆ ಮುಂಬೈಯನ್ನು ಹೋಲಿಸಲಾಗುತ್ತಿದೆ.
ಇದನ್ನೂ ಓದಿ;ಬಾಂಗ್ಲಾದಲ್ಲಿ ಕರೊನಾ ರೋಗಿಗಳು ನಾಲ್ಕೇ ದಿನಕ್ಕೆ ಚೇತರಿಕೆ…! ಪವಾಡವನ್ನೇ ಮಾಡಿದೆ ಈ ಔಷಧ
ಇದೆಲ್ಲ ಒಂದು ಕಡೆಯಾದರೆ, ಕರೊನಾ ಸಮಯದಲ್ಲಿ ಮಹಾನಗರದ ರಕ್ಷಣೆಗೆ ನಿಯೋಜಿತರಾದ ಪೊಲೀಸರಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹಬ್ಬುತ್ತಿದೆ. ಅಂದಾಜು ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸರು ಸೋಂಕಿಗೆ ತುತ್ತಾಗಿದ್ದಾರೆ. ಮುಂಬೈವೊಂದರಲ್ಲಿಯೇ 8 ಪೊಲೀಸರು ಕರೊನಾಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ ಕೋವಿಡ್​ನಿಂದಾಗಿ ಮೃತಪಟ್ಟ ಪೊಲೀಸರು 11. ಮೂರು ದಿನಗಳ ಹಿಂದಷ್ಟೇ ಎಎಸ್​ಐವೊಬ್ಬರು ಮೃತಪಟ್ಟಿದ್ದಾರೆ. ಇಡೀ ಕರ್ನಾಟಕದಲ್ಲಿ ಕಂಡುಬಂದಿರುವ ಸೋಂಕಿತರ ಸಂಖ್ಯೆಗಿಂತಲೂ ಮುಂಬೈ ಪೊಲೀಸರಲ್ಲಿ ಕಂಡುಬಂದಿರುವ ಸಂಖ್ಯೆಯೇ ಹೆಚ್ಚು.
ಸದ್ಯ 50ಕ್ಕಿಂತ ಹೆಚ್ಚು ವಯಸ್ಸಾದ ಪೊಲೀಸರನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿಲ್ಲ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಜೆ ಮೇಲೆ ಕಳುಹಿಸಲಾಗುತ್ತಿದೆ.
ಇದನ್ನೂ ಓದಿ;ಲಾಕ್​ಡೌನ್​ ಸಮಯದಲ್ಲಿ ಸೂರ್ಯನೂ ಥಂಡಾ…! ಏನಿದು ಸೋಲಾರ್​ ಮಿನಿಮಂ?
ಈ ಎಲ್ಲ ಕಾರಣದಿಂದಾಗಿ ಮುಂಬೈನಲ್ಲಿ ಪೊಲೀಸ್​ ಸಿಬ್ಬಮದಿ ಕರತೆ ಉಂಟಾಗಿದೆ. ಆದ್ದರಿಂದ ಕೇದ್ರೀಯ ಪಡೆಗಳ ಪೊಲೀಸರನ್ನು ಸರ್ಕಾರ ಕರೆಯಿಸಿಕೊಂಡಿದೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್​ ಪಡೆಯ ಐದು ತುಕಡಿಗಳು ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನಷ್ಟು ಕೇಂದ್ರೀಯ ಪಡೆಗಳನ್ನು ಕರೆಯಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಕರೊನಾ ಲಸಿಕೆ ಮಾನವರ ಮೇಲೂ ಯಶಸ್ವಿ..! ವರ್ಷಾಂತ್ಯಕ್ಕೆ ಬಳಕೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
