ರಾಯ್​ಪುರ್​:ಚತ್ತೀಸ್​ಗಢದಲ್ಲಿ ಮಾವೋವಾದಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಸಿಆರ್​​ಪಿಎಫ್​ ಕೋಬ್ರಾ ಪಡೆಯ ಯೋಧ ರಾಕೇಶ್ವರ್ ಸಿಂಗ್ ಮನಹಾಸ್​ನನ್ನು ಮಾವೋವಾದಿಗಳು ಗುರುವಾರ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಚತ್ತೀಸ್​ಗಢ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಯೋಧ ಸುರಕ್ಷಿತವಾಗಿ ಸಿಆರ್​ಪಿಎಫ್​ ಪಡೆಯ ಕಚೇರಿಯನ್ನು ತಲುಪಿದ್ದಾನೆ ಎಂದು ಹೇಳಿದೆ.
ಕಳೆದ ಭಾನುವಾರ ಚತ್ತೀಸ್​ಗಢದ ಬಿಜಾಪುರ-ಸುಕ್ಮಾ ಅರಣ್ಯ ವಲಯದಲ್ಲಿ ನಡೆದಿದ್ದ ಭೀಕರ ನಕ್ಸಲ್ ಹತ್ಯಾಕಾಂಡದಲ್ಲಿ ಸಿಆರ್​ಪಿಎಫ್ ಕೋಬ್ರಾ ಪಡೆಯ ಯೋಧ ಮನಹಾಸ್​ ಅವರನ್ನು ನಕ್ಸಲ್​ರು ಅಪಹರಿಸಿದ್ದರು. ಕಣ್ಮರೆಯಾಗಿದ್ದ ಯೋಧನ ಫೋಟೊವನ್ನು ನಕ್ಸಲ್​ರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
A psy ops by the Naxals.pic.twitter.com/6o76fBpoOZ
— kamaljit sandhu (@kamaljitsandhu)April 8, 2021

ಇದನ್ನೂ ಓದಿ:ರಾಜ್ಯದಲ್ಲಿ 5 ದಿನ ಗುಡುಗು ಮಿಂಚು ಸಹಿತ ಮಳೆ, ಹವಾಮಾನ ಇಲಾಖೆ ನೀಡಿದೆ ಮುನ್ಸೂಚನೆ
ನಿಷೇಧಿತ ನಕ್ಸಲ್ ಸಂಘಟನಯಾದ ದಂಡಕಾರಣ್ಯ ಸ್ಪೇಷಲ್ ಜೂನಲ್ ಕಮಿಟಿ ಈ ಚಿತ್ರವನ್ನು ಬಿಡುಗಡೆ ಮಾಡಿತ್ತು. ಚಿತ್ರದಲ್ಲಿ ರಾಕೇಶ್ವರ ಸಿಂಗ್ ಮನ್​ಹಾಸ್ ಅವರು ನಕ್ಸಲ್ ತಾತ್ಕಾಲಿಕ ಟೆಂಟ್ ಒಂದರಲ್ಲಿ ಕುಳಿತುಕೊಂಡಿದ್ದು ಕಂಡು ಬಂದಿತ್ತು.
ಯೋಧನನ್ನು ಒತ್ತೆಯಾಳಾಗಿಟ್ಟುಕೊಂಡಿರುವ ನಕ್ಸಲ್​ರು ಬಂಧನಕ್ಕೊಳಗಾಗಿರುವ ತಮ್ಮವರನ್ನು ಬಿಡುಗಡೆ ಮಾಡಬೇಕು. ನಂತರವೇ ನಾವು ಯೋಧನನ್ನು ಬಿಡುಗಡೆ ಮಾಡಲಿದ್ದೇವೆ. ಅಲ್ಲಿಯವರೆಗೂ ಯೋಧ ನಮ್ಮ ಬಳಿ ಸುರಕ್ಷಿತವಾಗಿರುತ್ತಾನೆ ಎಂದು ದಂಡಕಾರಣ್ಯ ಸ್ಪೇಷಲ್ ಜೂನಲ್ ಕಮಿಟಿಯ ವಿಕಲ್ಪ್ ಎನ್ನುವ ನಾಯಕ ಹೇಳಿದ್ದಾನೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
ಕಳೆದ ಶನಿವಾರ ಕೋಬ್ರಾ ಪಡೆ ಹಾಗೂ ನಕ್ಸಲ್​ರ ನಡುವೆ ಬಿಜಾಪುರ-ಸುಕ್ಮಾ ಜಿಲ್ಲೆಯ ಗಡಿಯ ಅರಣ್ಯದಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ 22 ಯೋಧರು ಹುತಾತ್ಮರಾಗಿ 10 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ನಕ್ಸಲ್​ರು ನಡೆಸಿದ್ದ ಅತಿ ದೊಡ್ಡ ದಾಳಿ ಇದಾಗಿತ್ತು.
ಮಾಸ್ಕ್​ ಸರಿಯಾಗಿ ಧರಿಸದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ: ಅಪ್ಪನನ್ನು ಬಿಟ್ಬಿಡಿ ಎಂದು ಮಗ ಗೋಗರೆದ್ರು ಬಿಡದ ಪೊಲೀಸರು!

ತಂಗಿಯ ಮೇಲೆ ಅಣ್ಣನಿಂದಲೇ ರೇಪ್: ನೋವು ಹೇಳಿಕೊಳ್ಳಲು ಅಜ್ಜಿ ಮನೆಗೆ ಹೋದವಳಿಗೆ ಮತ್ತೊಂದು ಶಾಕ್​!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:13 − three =
Remember me
