ನವದೆಹಲಿ:ಕರೊನಾವೈರಸ್ ಸೋಂಕಿನಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯೋರ್ವ ಶನಿವಾರ ಸಾವನ್ನಪ್ಪಿದ್ದಾರೆ.ಈ ಮೂಲಕ ದೇಶದ ಅತಿದೊಡ್ಡ ಅರೆಸೈನಿಕ ಪಡೆಯಲ್ಲಿ ಒಟ್ಟು ಸಾವುಗಳ ಸಂಖ್ಯೆ ಎಂಟಕ್ಕೇರಿದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕರ್ತಾಪುರ್ ಕಾರಿಡಾರ್ ಮರು ಆರಂಭಕ್ಕೆ ಸಿದ್ಧತೆ: ಪಾಕಿಸ್ತಾನದ್ದು ತೋರಿಕೆ ಸದ್ಭಾವನೆ ಎಂದ ಕೇಂದ್ರ
ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಆರ್‌ಪಿಎಫ್ ಕೇಂದ್ರ ಕಚೇರಿಯ ಆಡಳಿತ ವಿಭಾಗದಲ್ಲಿ 43 ವರ್ಷದ, ಬಿಹಾರ ಮೂಲದ ಕಾನ್‌ಸ್ಟೆಬಲ್ ನನ್ನು ಚಾಲಕನನ್ನಾಗಿ ನೇಮಿಸಲಾಗಿತ್ತು. ಅವರಿಗೆ ದೀರ್ಘಕಾಲದ ಮೂತ್ರಪಿಂಡ ಸಮಸ್ಯೆ ಮತ್ತು ಅಧಿಕ ಒತ್ತಡ ಸಮಸ್ಯೆಯೂ ಇತ್ತು. ಶುಕ್ರವಾರ ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್ -19 ಸೋಂಕು ದೃಢಪಟ್ಟಿತು. ಅವರು ಇಂದು ನಗರದ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸಿಆರ್‌ಪಿಎಫ್ ತಿಳಿಸಿದೆ.
ಇದನ್ನೂ ಓದಿ:ಅತಿ ದೊಡ್ಡ ಕೊವಿಡ್​-19 ಕೇರ್​ ಸೆಂಟರ್​​ಗೆ ಅಮಿತ್​ ಷಾ, ಅರವಿಂದ್​ ಕೇಜ್ರಿವಾಲ್​ ಜಂಟಿ ಭೇಟಿ…
ಇತ್ತೀಚಿನ ಸಾವು ಪ್ರಕರಣದೊಂದಿಗೆ, ಐದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಸಿಆರ್​​​ಪಿಎಫ್, ಬಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಗಳಲ್ಲಿ ಸಾವಿನ ಸಂಖ್ಯೆ ಈಗ 24 ಕ್ಕೆ ಏರಿದೆ.ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈವರೆಗೆ 245 ಸಕ್ರಿಯ ಪ್ರಕರಣಗಳನ್ನು ಒಳಗೊಂಡಂತೆ 868 ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ.
ಇಲ್ಲಿಯವರೆಗೆ, ಬಿಎಸ್​​ಎಫ್​​ನ 618 ಕರೋನವೈರಸ್ ರೋಗಿಗಳು ಚಿಕಿತ್ಸೆಯ ನಂತರ ರೋಗದಿಂದ ಚೇತರಿಸಿಕೊಂಡಿದ್ದರೆ, ಐವರು ಸಾವನ್ನಪ್ಪಿದ ವರದಿಯಾಗಿದೆ.
ಇದನ್ನೂ ಓದಿ:ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಟ್​ ನಟ…?
3.25 ಲಕ್ಷ ಸಿಬ್ಬಂದಿ ಬಲದ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಪ್ರಸ್ತುತ 1,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳಿವೆ, ಈ ಐದು ಸಿಎಪಿಎಫ್‌ಗಳು ಮತ್ತು ಇತರ ಎರಡು ಕೇಂದ್ರ ಪಡೆಗಳಾದ ಎನ್‌ಎಸ್‌ಜಿ ಮತ್ತು ಎನ್‌ಡಿಆರ್‌ಎಫ್‌ನಲ್ಲಿ ಈವರೆಗೆ 3,300 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಬಿಎಸ್‌ಎಫ್‌ನಲ್ಲಿ 868 ಕ್ಕೂ ಹೆಚ್ಚು, ಸಿಐಎಸ್‌ಎಫ್‌ನಲ್ಲಿ 733, ಐಟಿಬಿಪಿಯಲ್ಲಿ 306, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯಲ್ಲಿ (ಎನ್‌ಡಿಆರ್‌ಎಫ್) 184, ಎಸ್‌ಎಸ್‌ಬಿಯಲ್ಲಿ 139 ಮತ್ತು ಎನ್​ಎಸ್​​ಜಿಯಲ್ಲಿ 70 ಕರೊನಾವೈರಸ್ ಪ್ರಕರಣಗಳಿವೆ.
ಇದನ್ನೂ ಓದಿ:ಚೆನ್ನೈಗೆ ಬಂದರು ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್!
ಅವರಲ್ಲಿ ಸುಮಾರು 2 ಸಾವಿರ ಭದ್ರತಾ ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಮತ್ತು ಸುಮಾರು 1,280 ಮಂದಿ ಮಾತ್ರ ದೇಶಾದ್ಯಂತ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಿಐಎಸ್ಎಫ್ ನಲ್ಲಿ ಏಳು, ಬಿಎಸ್ಎಫ್​​ನಲ್ಲಿ ಐದು ಮತ್ತು ಐಟಿಬಿಪಿ ಮತ್ತು ಎಸ್ಎಸ್​​​​​​​​ಬಿಯಲ್ಲಿ ತಲಾ ಎರಡು ಸಾವು ಪ್ರಕರಣಗಳು ವರದಿಯಾಗಿವೆ.
ಕೋವಿಡ್​ ಸೋಂಕಿತರ ಶವ ಸಾಗಿಸಲು ಅರ್ಥ್​ ಮೂವರ್ ಬಳಸಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
