ನವದೆಹಲಿ:ದಕ್ಷಿಣ ದೆಹಲಿಯ ಲೋಧಿ ಕಾಲನಿಯ ಸಿಜಿಒ ಕಾಂಪ್ಲೆಕ್ಸ್​​ನಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್’ಪಿಎಫ್)ಯ ಚಾಲಕನೊಬ್ಬನಿಗೆ ಕೋವಿಡ್- 19 ಸೋಂಕು ಇರುವುದು ಪತ್ತೆಯಾಗಿದ್ದು, ಈ ಪ್ರಧಾನ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಇಲ್ಲಿ ಕಾರ್ಯನಿರ್ವಹಿಸುವವರೆಲ್ಲರಿಗೂ ಮನೆಯಿಂದಲೇ ಕೆಲಸ ಮಾಡಬೇಕೆಂದು ಆದೇಶ ಹೊರಡಿಸಲಾಗುತ್ತದೆ. ಅಗತ್ಯ ಕೆಲಸವಿದ್ದಾಗ ಸಂಪರ್ಕಕ್ಕೆ ಸಿಗಬೇಕೆಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಲಾಗುತ್ತದೆ.ದೆಹಲಿಯಲ್ಲಿರುವ ಸಿಆರ್​ಪಿಎಫ್’ನ ಒಟ್ಟಾರೆ 150 ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್-19 ಕಾಯಿಲೆಗೆ ಒಳಗಾಗಿದ್ದು, 31ನೇ ಬಟಾಲಿಯನ್​​ವೊಂದರಲ್ಲಿಯೇ 135 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ನಾಳೆಯಿಂದ ಮನೆಗೆಲಸದವರು ಕೆಲಸಕ್ಕೆ ಹೋಗಬಹುದು…
31ನೇ ಬಟಾಲಿಯನ್​​ನ 480 ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದ್ದು, 22 ಸಿಬ್ಬಂದಿಯ ಫಲಿತಾಂಶ ಬರಬೇಕಿದೆ.ಪ್ರತ್ಯೇಕ ಪ್ರಕರಣವೊಂದರಲ್ಲಿ 80 ಸಿಬ್ಬಂದಿಯಿರುವ 246ನೇ ಬಟಾಲಿಯನ್​​​ನ ಭಾಗವಾಗಿರುವ ಸಿಆರ್​ಪಿಎಫ್ ಕಂಪನಿಯಲ್ಲಿ ಒಬ್ಬನಲ್ಲಿ ಸೋಂಕು ಕಂಡು ಬಂದಿದ್ದು, ಎಲ್ಲರನ್ನೂ ಕ್ವಾರಂಟೈನ್​​ನಲ್ಲಿಡಲಾಗಿದೆ.
ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಆರ್​ಪಿಎಫ್ ಸಿಬ್ಬಂದಿಯನ್ನು ಅವರವರ ಮನೆಗಳಿಗೆ ಕರೆದೊಯ್ಯುತ್ತಿದ್ದ ಚಾಲಕನಲ್ಲಿ ಮೂರು ದಿನಗಳ ಹಿಂದೆ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದದ್ದರಿಂದ ಅವರನ್ನು ಕ್ವಾರಂಟೈನ್​ನಲ್ಲಿಡಲಾಗಿತ್ತು. ಶನಿವಾರ ಸಂಜೆ ಫಲಿತಾಂಶ ಬಂದಿದ್ದು, ಅವರು ಸಿಆರ್​ಪಿಎಫ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ಅವರ ಸಂಪರ್ಕದಲ್ಲಿದ್ದವರನ್ನೂ ದಿಗ್ಬಂಧನದಲ್ಲಿಡಲಾಗಿದೆ.
ಇದನ್ನೂ ಓದಿ:ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ
ಸಿಆರ್​ಪಿಎಫ್ ಹೊರತುಪಡಿಸಿ ಗಡಿ ಭದ್ರತಾ ಪಡೆಗೂ ಕರೊನಾ ಬಿಸಿ ತಗುಲಿದ್ದು, ದೇಶಾದ್ಯಂತ ಬಿಎಸ್​ಎಫ್​​ನ ಲ್ಲಿ ಅಂದಾಜು 17 ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ದೆಹಲಿಯ ಜಾಮಾ ಮಸೀದಿ ಮತ್ತು ಚಾಂದಿನಿ ಮಹಲ್​​ಗೆ ನಿಯೋಜನೆಗೊಂಡ 126 ನೇ ಹಾಗೂ 178 ನೇ ಬಟಾಲಿಯನ್​ನ 7 ಸಿಬ್ಬಂದಿಗೆ ಕರೊನಾ ಪಾಜಿಟಿವ್ ಇರುವುದು ಶುಕ್ರವಾರ ಪತ್ತೆಯಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್- 19 ಗೆ ಬಿಎಸ್​ಎಫ್​​ನ 15 ಜನ ಸಿಬ್ಬಂದಿ ತುತ್ತಾದಂತಾಗಿದೆ. (ಏಜೆನ್ಸೀಸ್)
ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಿದ… ಮುಂದೆ ಏನಾಯಿತು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
