ಅಮೇಥಿ:ಪತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ಸಹೋದರನ ಮೇಲೆ ಮಾರಣಾಂತಿಕ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಮಾರುಕಟ್ಟೆಯಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾರಣಾಂತಿಕ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದ್ದು, ಗಾಯಗೊಂಡವರನ್ನು ಗೀತಾದೇವಿ ಹಾಗೂ ಆಕೆಯ ಸಹೋದರ ಅತುಲ್ ಎಂದು ಗುರುತಿಸಲಾಗಿದೆ. ಇನ್ನು, ಗುಂಡು ಹಾರಿಸಿದವನನ್ನು ಶಿವನಾರಾಯಣ ಎಂದು ಗುರುತಿಸಲಾಗಿದ್ದು, ಆರೋಪಿಯ ಪತ್ನಿ ಮತ್ತು ಆಕೆಯ ಸಹೋದರನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.ಇದನ್ನೂ ಓದಿ:ಚಾರ್ಜಿಂಗ್ ವೇಳೆ ಸ್ಕೂಟರ್ ಬ್ಯಾಟರಿ ಸ್ಫೋಟ: ಮನೆ ಸುಟ್ಟು ಕರಕಲು, ನಾಲ್ವರು ಪವಾಡ ಸದೃಶ ಪಾರುಅಮೇಠಿ ಜಿಲ್ಲೆಯ ದೀಕ್ಷೋಲಿ ಗ್ರಾಮದ ನಿವಾಸಿಯಾಗಿರುವ ಸಿಆರ್‌ಪಿಎಫ್ ಯೋಧ ಶಿವನಾರಾಯಣ್ ಕೌಟುಂಬಿಕ ಸಮಸ್ಯೆಗಳಿಂದಾಗಿ ಪತ್ನಿಯೊಂದಿಗೆ ಹಲವು ವರ್ಷಗಳಿಂದ ಜಗಳವಾಡುತ್ತಿದ್ದಾರೆ. ವಿವಾದದ ಕಾರಣ, ಆತನ ಪತ್ನಿ ಸುಲ್ತಾನ್‌ಪುರ ಜಿಲ್ಲೆಯ ದುಬೆ ಕಾ ಪೂರ್ವಾ ಗ್ರಾಮದ ತಾಯಿಯ ಮನೆಗೆ ತೆರಳಿ ಅಲ್ಲಿಯೇ ವಾಸವಾಗಿದ್ದಳು. ಗೀತಾ ತನ್ನ ಸಹೋದರ ಅತುಲ್​ನೊಂದಿಗೆ ಇಂದು ಮುಸಾಫಿರ್ಖಾನಾ ಬಜಾರ್‌ಗೆ ಭೇಟಿ ನೀಡಿದ್ದರು.ಈ ವೇಳೆ ಸಿಆರ್‌ಪಿಎಫ್ ಯೋಧ ಶಿವನಾರಾಯಣ್, ತನ್ನ ಮಗನೊಂದಿಗೆ ಮಾರ್ಕೆಟ್​ ತಲುಪಿದ್ದು ಸ್ಥಳದಲ್ಲೇ ಪತ್ನಿ ಹಾಗೂ ಆಕೆಯ ಸಹೋದರನ ಮೇಲೆ ಸ್ಥಳದಲ್ಲೇ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಘಟನೆ ನಂತರ ಆರೋಪಿ ಮತ್ತು ಆತನ ಮಗ ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸರು, ಘಟನೆ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 2 =
Remember me
