ಕೊಲ್ಕತಾ :ಪಶ್ಚಿಮ ಬಂಗಾಳದ ಬುರ್ದ್​ವಾನ್ ನಗರದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು 7 ವರ್ಷದ ಮಗುವೊಂದು ಸಾವಪ್ಪಿರುವ ಘಟನೆ ವರದಿಯಾಗಿದೆ. ನಗರದ ಸುಭಾಸ್​ಪಾಳ್ಯ ಪ್ರದೇಶದ ಆಟದ ಮೈದಾನವೊಂದರಲ್ಲಿ ಸಂಭವಿಸಿರುವ ಈ ಘಟನೆಯಲ್ಲಿ ಮತ್ತೊಬ್ಬ 9 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ.
ಇಂದು ಬೆಳಿಗ್ಗೆ 11 ಗಂಟೆಗೆ ಮೃತ ಬಾಲಕ ಶೇಖ್ ಅಫ್ರೋಜ್ ಮತ್ತು ಗಾಯಗೊಂಡಿರುವ ಶೇಖ್ ಇಬ್ರಾಹಿಮ್ ಇಬ್ಬರೂ ತಮ್ಮ ಮನೆಯ ಬಳಿಯ ಮೈದಾನದಲ್ಲಿ ಆಟವಾಡುತ್ತಿದ್ದರು. ದಿಡೀರಾಗಿ ಅಲ್ಲಿ ಬಿದ್ದಿದ್ದ ಕಚ್ಚಾ ಬಾಂಬ್ ತುಂಬಿದ ಪ್ಯಾಕೆಟ್​ ಒಂದರ ಸಂಪರ್ಕಕ್ಕೆ ಬಂದಾಗ ಸ್ಫೋಟ ಸಂಭವಿಸಿತು ಎಂದು ಬುರ್ದ್​ವಾನ್ ಇನ್ಸ್​ಪೆಕ್ಟರ್ ಪಿಂಟು ಸಹ ಹೇಳಿದ್ದಾರೆ.
ಇದನ್ನೂ ಓದಿ:8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ
ಅಕ್ಕಪಕ್ಕದವರು ಸ್ಥಳಕ್ಕೆ ತಲುಪಿ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಅಫ್ರೋಜ್ ಆಸ್ಪತ್ರೆ ತಲುಪುವ ಮುಂಚೆಯೇ ಸಾವಪ್ಪಿದ್ದು, ಗಾಯಗೊಂಡಿದ್ದ ಇಬ್ರಾಹಿಂಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಂಬ್ ಪಡೆಯ ಸಹಾಯದೊಂದಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚುನಾವಣೆಯ ಎದುರಿಗಿರುವಾಗ ಈ ಘಟನೆ ಸಂಭವಿಸಿರುವುದು ಸ್ಥಳೀಯರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.(ಏಜೆನ್ಸೀಸ್)
ಖೇಲಾ ಶೇಷ್ ಹೋಬೆ ! “ದೀದಿ, ನಿಮ್ಮ ಆಟ ಮುಗಿಯಲಿದೆ” ಎಂದ ಮೋದಿ

ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − twelve =
Remember me
