ತಂದೆ-ತಾಯಿ ತಮ್ಮ ಮಕ್ಕಳಿಗೆ ಎಲ್ಲ ವಿಚಾರಗಳಲ್ಲೂ ಸಲಹೆ ಕೊಡುತ್ತಿರುತ್ತಾರೆ. ಮಕ್ಕಳು ಎಷ್ಟು ಕೇಳುತ್ತಾರೋ..ಬಿಡುತ್ತಾರೋ ಆದರೆ ಒಳ್ಳೆಯ, ಬುದ್ಧಿ ಮಾತಿನ ಸಲಹೆಗಳನ್ನು ಅಪ್ಪ-ಅಮ್ಮ ಕೊಡುತ್ತಿರುತ್ತಾರೆ.ಹಾಗೇ ಇಲ್ಲೋರ್ವ ಅಪ್ಪ ತನ್ನ ಮಗಳಿಗೆ ಅದ್ಭುತ ಸಲಹೆ ನೀಡಿದ್ದಾರೆ. ಮಗಳು ಬರ್ತ್​ ಡೇ ದಿನ ಅಳುವುದನ್ನು ನೋಡಿದ ಅಪ್ಪ ನೀಡಿದ ಸಲಹೆ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ರೂಪಶ್ರೀ ಎಂಬ ಯುವತಿ ತನ್ನ ತಂದೆ ಕಳಿಸಿದ ಮೆಸೇಜ್​ನ ಸ್ಕ್ರೀನ್​ಶಾಟ್​​ನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.  ರೂಪಶ್ರೀ ಅಪ್ಪ ಕಳಿಸಿದ ಮೆಸೇಜ್​ ಹೀಗಿದೆ..
ವಿಶ್​ ಯು ಹ್ಯಾಪಿ ಬರ್ತ್​ ಡೇ ಮಗಳೇ..ಇಂದು ಬೆಳಗ್ಗೆ ನೀನು ಅಳುತ್ತಿರುವುದನ್ನು ನಾನು ನೋಡಿದೆ. ಆದರೆ ನೀನು ನಿನ್ನ ಸ್ನೇಹಕ್ಕೆ, ನಿನ್ನ ಜತೆಗೆ ಇರಲು ಯೋಗ್ಯತೆ ಇಲ್ಲದವರಿಗಾಗಿ ಅಳುವುದನ್ನು ನಿಲ್ಲಿಸಬೇಕು. ನಿನಗೀಗ 21 ವರ್ಷ. ಇನ್ನಾದರೂ ನಿನ್ನ ಬೆಲೆಯನ್ನು ನೀನು ಅರಿತುಕೊಳ್ಳಬೇಕು.
ನಮ್ಮ ಜೀವನದಲ್ಲಿ ಜನರು ಬರುತ್ತಾರೆ…ಹೋಗುತ್ತಾರೆ. ಆದರೆ ನೀನು ಎಂದಿಗೂ ಬದಲಾಗಬಾರದು. ನಿನ್ನನ್ನು ನೀನು ಮೊದಲ ಸ್ಥಾನದಲ್ಲಿ ಇಟ್ಟುಕೊಳ್ಳಬೇಕು ಎಂದು ಅಮೂಲ್ಯ ಸಂದೇಶ ಕಳಿಸಿದ ಅಪ್ಪ, ಜತೆಗೆ ಒಂದು ಲಘು ಹಾಸ್ಯವನ್ನೂ ಮಾಡಿದ್ದಾರೆ.
ಜನರಿಗಾಗಿ ಅಳುವುದಕ್ಕಿಂತ ಬಿರ್ಯಾನಿಗಾಗಿ ಕಣ್ಣೀರು ಹಾಕುವುದು ಎಷ್ಟೋ ಪಾಲು ಒಳ್ಳೆಯದು..ನಾವಂತೂ ಇದನ್ನು ಒಪ್ಪುತ್ತೇವೆ ಎಂದು ಬರೆದಿದ್ದಾರೆ.  ಹಾಗೇ..ನೀನು ನಿನ್ನು ಡಯಟ್​ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಇತ್ತೀಚೆಗೆ ನೀನು ಆನೆಮರಿಯಂತೆ ಬೆಳೆಯುತ್ತಿರುವೆ ಎಂದೂ ಮಗಳ ಕಾಲೆಳೆದಿದ್ದಾರೆ.
ನಿನ್ನ ಮನಸಿನ ಶಾಂತಿಗಾಗಿ ಪ್ರತಿದಿನ ಹನುಮಾನ್​ ಚಾಲೀಸಾ ಓದು. ಮುಂದೆ ಯಾವಾಗಲಾದರೂ ಯಾರಾದರೂ ನಿನ್ನ ಕಣ್ಣಲ್ಲಿ ನೀರು ಹಾಕಿಸಲು ಯತ್ನಿಸಿದರೆ ಅವನ ಬೆನ್ನೆಲುಬನ್ನು ಎರಡು ಭಾಗಗಳಲ್ಲಿ ಮುರಿದುಹಾಕು…ನಮ್ಮ ಆಸ್ಪತ್ರೆಗೇ ಕರೆದುಕೊಂಡು ಬಾ ಎಂದು ಭಾವನಾತ್ಮಕವಾಗಿ..ಅಷ್ಟೇ ಹಾಸ್ಯಾತ್ಮಕವಾಗಿ ಬರೆದಿದ್ದಾರೆ. ಜತೆಗೆ ಹ್ಯಾಪಿಬರ್ತ್​ ಡೇ ಸಂದೇಶವನ್ನೂ ತಿಳಿಸಿದ್ದಾರೆ.
ಆ ಸ್ಕ್ರೀನ್​ಶಾಟ್​ ಹಂಚಿಕೊಂಡ ಮಗಳು, ನಾನು ನನ್ನ ತಂದೆ-ತಾಯಿಗೆ ಅರ್ಹಳಾದವಳು ಅಲ್ಲ ಎಂದು ಕ್ಯಾಪ್ಷನ್ ಬರೆದಿದ್ದಾಳೆ.
ಟ್ವೀಟ್​ ಸಿಕ್ಕಾಪಟೆ ವೈರಲ್​ ಆಗಿದೆ. ಇದೊಂದು ಭಾವನಾತ್ಮಕ ಸಂದೇಶ..ಕಣ್ಣಲ್ಲಿ ನೀರು ಬಂತು ಎಂದು ಅನೇಕರು ಕಾಮೆಂಟ್ ಬರೆದಿದ್ದಾರೆ. (ಏಜೆನ್ಸೀಸ್​)
https://twitter.com/jstalittleextra/status/1305929319550574592?s=20
ಗಂಡ-ಮಗನನ್ನು ಬದುಕಿಸಲು ಪ್ರಾಣತೆಗೆದ ಹಾವನ್ನು ತಂದು ಪೂಜಿಸಿದಳು: ಮುಂದೇನಾಯ್ತು ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + 1 =
Remember me
