ಚೆನ್ನೈ:ಐಪಿಎಲ್ 2024 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ಒಂದೆರಡು ಸೋಲು ಕಂಡರೂ ಹಿಂದೆ ಸರಿಯದೆ ಆಕ್ರಮಣಕಾರಿಯಾಗಿ ಮುನ್ನಡೆಯುತ್ತಿದೆ. ಪ್ರಶಸ್ತಿಗಾಗಿ ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿದಿರುವ ಈ ಹಳದಿ ಪಡೆ ಒಗ್ಗಟ್ಟಾಗಿ ತನ್ನ ಬಲವನ್ನು ತೋರುತ್ತಿದೆ. ಆರನೇ ಬಾರಿಗೆ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿ ತಂಡ ಮುನ್ನುಗ್ಗುತ್ತಿದೆ.
ಇದನ್ನೂ ಓದಿ:ಸ್ಟಾರ್ ಹೀರೋ ಜೊತೆ ಆರ್​ಆರ್​ಆರ್​ ನಿರ್ಮಾಪಕ ಭಿನ್ನಾಭಿಪ್ರಾಯ… ಆ ದೊಡ್ಡ ಪ್ರಾಜೆಕ್ಟ್ ಗೆ ಬ್ರೇಕ್!
ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಫಾರ್ಮ್‌ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ. ಈ ಭಾನುವಾರ(ಏ.14) ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ನಿಗದಿಯಾಗಿದೆ.
ಇನ್ನು ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕ್ರೇಜ್‌ ಬಗ್ಗೆ ಹೇಳಬೇಕಾಗಿಲ್ಲ. ತಮಿಳು ಅಭಿಮಾನಿಗಳು ಅವರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮಾಸ್ ಹೀರೋ ಮಟ್ಟದಲ್ಲಿ ಆರಾಧಿಸುತ್ತಿದ್ದಾರೆ.
ಈಗ ಮತ್ತೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿ ಎಂಎಸ್ ಧೋನಿ ವೀಕ್ಷಿಸಲು ಬ್ಲಾಕ್‌ನಲ್ಲಿ ಐಪಿಎಲ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಈ ಟಿಕೆಟ್‌ಗಳ ಮೌಲ್ಯ 64ಸಾವಿರ ರೂ. ಆಗಿದೆ. ಅವರ ಮಗಳ ಶಾಲಾ ಶುಲ್ಕಕ್ಕೆ ಬಚ್ಚಿಟ್ಟ ಹಣವನ್ನು ಶಾಲಾ ಶುಲ್ಕ ಕಟ್ಟಲು ಇನ್ನೂ ಸ್ವಲ್ಪ ಸಮಯವಿದ್ದು, ಅಷ್ಟರಲ್ಲಿ ಹೇಗಾದರೂ ಮಾಡಿ ಹಣ ಹೊಂದಿಸಬಹುದು ಎಂದು ಪಂದ್ಯ ವೀಕ್ಷಣೆಗೆ ಮುಂದಾಗಿದ್ದಾರೆ.
ಧೋನಿ ಆಟವನ್ನು ನೋಡಲು ಟಿಕೆಟ್‌ಗಾಗಿ 64ಸಾವಿರ ರೂಪಾಯಿ ವ್ಯಯಿಸಿರುವುದಾಗಿ ತಮಿಳುನಾಡಿನ ಅಭಿಮಾನಿಯೊಬ್ಬರು ಹೇಳಿದ್ದಾರೆ. ಸ್ಪೋರ್ಟ್ಸ್ ವಾಕ್ ಚೆನ್ನೈ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆತ ಇದನ್ನು ಬಹಿರಂಗಪಡಿಸಿದ್ದಾರೆ. ತನಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರೆಲ್ಲರೂ ಧೋನಿಯನ್ನು ನೋಡಲು ಬಯಸಿದ್ದರು, ಹಾಗಾಗಿ ಬ್ಲಾಕ್‌ನಲ್ಲಿ ಎಲ್ಲರಿಗೂ ಟಿಕೆಟ್ ಖರೀದಿಸಿದ್ದೇನೆ ಎಂದು ವಿವರಿಸಿದರು. ಇನ್ನೂ ಒಬ್ಬ ಹೆಣ್ಣು ಮಗಳ ಶಾಲಾ ಶುಲ್ಕ ಕಟ್ಟಬೇಕಿದೆ ಎಂದರು.
ರೈಲು ಪ್ರಯಾಣಿಕರಿಗೆ ಎಚ್ಚರಿಕೆ.. ಕಾಯ್ದಿರಿಸುವಿಕೆ ಸೇವೆಗಳಿಗೆ ಬ್ರೇಕ್!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × four =
Remember me
