ನವದೆಹಲಿ:ದೇಶದಲ್ಲಿ ಕರೊನಾ ಅಟ್ಟಹಾಸ ಹಾಗೂ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಕೃಷಿ ಕ್ಷೇತ್ರ ದಾಖಲೆ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿದೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿರುವ ಭೂಪ್ರದೇಶದ ಪ್ರಮಾಣ ಈವರೆಗಿನ ಸರ್ವಕಾಲಿಕ ದಾಖಲೆಯಾಗಿದ್ದು, ಬಿತ್ತನೆ ಪ್ರದೇಶ ವೃದ್ಧಿಸಿರುವುದರಿಂದ 2020-21ರಲ್ಲಿ ಫಸಲು ದಾಖಲೆ ಪ್ರಮಾಣಕ್ಕೇರುವ ನಿರೀಕ್ಷೆ ಇದೆ.
ಸರ್ಕಾರದ ಅಂಕಿಅಂಶದ ಪ್ರಕಾರ, ಆಗಸ್ಟ್ 28ರವರೆಗೆ 1,082 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಕಳೆದ ವರ್ಷ ಈ ಪ್ರಮಾಣ 1,010 ಲಕ್ಷ ಹೆಕ್ಟೇರ್ ಇತ್ತು. ಅಂದರೆ ಈ ಬಾರಿಯ ಬಿತ್ತನೆ ಶೇಕಡ 7ರಷ್ಟು ಹೆಚ್ಚಳವಾಗಿದೆ. 2016ರಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ 1,075 ಲಕ್ಷ ಹೆಕ್ಟೇರ್ ಆಗಿದ್ದು, ಇದು ಈ ಹಿಂದಿನ ದಾಖಲೆ ಯಾಗಿತ್ತು. ಕಳೆದ ಐದು ವರ್ಷಗಳಲ್ಲಿ ದೇಶದ ಸರಾಸರಿ ಬಿತ್ತನೆ ಪ್ರದೇಶದ ಪ್ರಮಾಣ 1,066 ಲಕ್ಷ ಹೆಕ್ಟೇರ್ ಆಗಿದೆ.
ಯಾವ್ಯಾವ ಬೆಳೆ?:ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭತ್ತದ ಬಿತ್ತನೆ 35 ಲಕ್ಷ ಹೆಕ್ಟೇರ್​ಗಳಷ್ಟು ಏರಿಕೆ ಕಂಡಿದೆ. ತೆಲಂಗಾಣ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಭತ್ತ ಬಿತ್ತನೆ ಪ್ರಮಾಣ ಅಧಿಕವಾಗಿ ಏರಿಕೆ ಕಂಡಿದೆ. ಎಣ್ಣೆಕಾಳುಗಳು, ಧಾನ್ಯಗಳು ಮತ್ತು ಬೇಳೆಕಾಳು ಗಳ ಬಿತ್ತನೆ ಕಾರ್ಯ ಈಗಾಗಲೇ ಪೂರ್ಣಗೊಂಡಿವೆ. ಇವು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಪ್ರದೇಶ ಹೊಂದಿವೆ ಎಂದು ವರದಿಯಿಂದ ತಿಳಿದುಬಂದಿದೆ.
ಲಾಕ್​ಡೌನ್ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಲಾದ ವಿನಾಯಿತಿ ಯಿಂದ ರೈತರಿಗೆ ಬೇಸಾಯ ಕಾರ್ಯ ಮುಂದುವರಿಸಲು ಸಹಾಯವಾಗಿದೆ. 2020-21ರಲ್ಲಿ ಆಹಾರ ಧಾನ್ಯಗಳ ಇಳುವರಿ ಸುಮಾರು 30 ಕೋಟಿ ಟನ್​ಗಳನ್ನೂ ದಾಟುವ ನಿರೀಕ್ಷೆ ಇದೆ
| ನರೇಂದ್ರ ಸಿಂಗ್ ತೋಮರ್,ಕೇಂದ್ರ ಕೃಷಿ ಸಚಿವ
https://www.vijayavani.net/centre-annonced-unlock-4-guidelines/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seventeen =
Remember me
