|ಶ್ರೀ ಎಂ
ಭಾರತವು ಜ್ಞಾನ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಭೂಮಿಯಾಗಿದೆ. ಇಡೀ ಜಗತ್ತಿಗೆ ಮಾನವೀಯತೆ ಮತ್ತು ಶಾಂತಿಯ ಹಾದಿ ತೋರಿಸಿದೆ. ‘ವಸುಧೈವ ಕುಟುಂಬಕಂ’ ಇದರ ಜೀವಾಳವಾಗಿದೆ. ವೇದ ಕಾಲದಿಂದಲೂ ನಮ್ಮ ಪವಿತ್ರ ನೆಲ ಆಕ್ರಮಣಕೋರರಿಂದ ಅನೇಕಾನೇಕ ದಾಳಿಗಳನ್ನು ಎದುರಿಸಿದೆ. ಆದರೆ ನಮ್ಮ ಶ್ರೀಮಂತ ಕಲೆ ಮತ್ತು ಸಂಸ್ಕೃತಿ, ಧರ್ಮ ಮತ್ತು ವಿವೇಕ, ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಇತ್ಯಾದಿ ಎಲ್ಲ ಪ್ರಾಚೀನ ಸಂಪತ್ತುಗಳು ಶತ ಶತಮಾನಗಳಿಂದ ಸಾಧು ಸಂತರ ಪೋಷಣೆಯಿಂದ ಉಳಿದು ಬಂದಿವೆ. ಸಣ್ಣ ವಯಸ್ಸಿನಿಂದಲೂ ನಾನು ‘ಸತ್ಯ’, ‘ಚಿರಂತನತೆ’ ಮತ್ತು ಆಧ್ಯಾತ್ಮಿಕತೆಯ ಶಕ್ತಿಯ ಹುಡುಕಾಟದಲ್ಲಿದ್ದೇನೆ. ನಾನು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದವನಾದರೂ ಯಾವುದೋ ದೈವಿಕ ಮಧ್ಯಪ್ರವೇಶದಿಂದಾಗಿ ನನ್ನ ಪುನರ್​ಜನ್ಮವಾದಂತಾಗಿ 18 ವರ್ಷದವನಿದ್ದಾಗ ನನ್ನನ್ನು ಹಿಮಾಲಯಕ್ಕೆ ಕರೆದೊಯ್ದಿತು. ಸತ್ಯ ಮತ್ತು ಜ್ಞಾನೋದಯಕ್ಕಾಗಿ ಹಿಮಾಲಯವನ್ನು ನನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡೆ. ಪವಿತ್ರ ಕೇದಾರನಾಥ ಧಾಮಕ್ಕೆ ಹಲವು ಬಾರಿ ಭೇಟಿ ನೀಡಿದೆ. ಗಂಗೋತ್ರಿಯಿಂದ ರಾಮೇಶ್ವರದವರೆಗೆ, ದ್ವಾರಕಾದಿಂದ ಗಯಾ ವರೆಗೆ ಹಲವು ಪ್ರಮುಖ ಹಿಂದು ಮಂದಿರ ಮತ್ತು ದೇವಾಲಯಗಳನ್ನು ಮರಾಠಾ ರಾಣಿ ದೇವಿ ಅಹಲ್ಯಾಬಾಯಿ ಹೋಳ್ಕರ್ ಪುನರುಜ್ಜೀವನಗೊಳಿಸಿದ ಕಥೆಗಳು ನನಗೆ ಆಗಲೇ ಗೊತ್ತಾಗಿದ್ದು. ಅಹಲ್ಯಾಬಾಯಿ ಪುನರುಜ್ಜೀವನಗೊಳಿಸಿದ ದೇವಸ್ಥಾನಗಳಲ್ಲಿ ಕೇದಾರನಾಥ ಧಾಮ, ಶ್ರೀ ಓಂಕಾರೇಶ್ವರ, ಕಾಶಿ ವಿಶ್ವನಾಥ, ಜಗನ್ನಾಥ ಪುರಿ ಮತ್ತು ಸೋಮನಾಥ ಮೊದಲಾದವು ಸೇರಿವೆ. ಆಧ್ಯಾತ್ಮಿಕ ದಾಹದಿಂದ ನಾನು ದೇಶದ ಉದ್ದಗಲ ಅನೇಕ ಸ್ಥಳಗಳಿಗೆ ಭೇಟಿ ನೀಡಿದೆ. ಮಹಾನ್ ಮರಾಠಾ ರಾಣಿ ಪುನರುಜ್ಜೀವನಗೊಳಿಸಿದ ಹಾಗೂ ಮರುನಿರ್ವಣ ಮಾಡಿದ ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟೆ.
ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಆಧ್ಯಾತ್ಮಿಕ ಶಕ್ತಿಯ ಹೊಸ ಆಯಾಮಗಳ ಪರಿಚಯವಾಯಿತು. ಅಹಲ್ಯಾಬಾಯಿ ಹೋಳ್ಕರ್ ಅವರ ಮಹಾನ್ ಪರಂಪರೆಯನ್ನು ಯಾರು ಮುಂದುವರಿಸುತ್ತಾರೆ ಎಂದು ಕಾಶಿಯಲ್ಲಿದ್ದಾಗ ನಾನು ಚಿಂತಿಸುತ್ತಿದ್ದೆ. ನಮ್ಮ ಪ್ರಾಚೀನ ಪರಂಪರೆ ನಶಿಸುತ್ತಿರುವುದನ್ನು ಕಂಡು ಚಿಂತೆಯಾಗುತ್ತಿತ್ತು. ಈಗ, ಪುನರುಜ್ಜೀವನಗೊಂಡ ಕಾಶಿಯ ಬಾಬಾ ವಿಶ್ವನಾಥ ಧಾಮವನ್ನು ಲೋಕಾರ್ಪಣೆಗೊಳಿಸುವುದನ್ನು ಕಂಡಾಗ ನನ್ನ ಅಂತರಾತ್ಮಕ್ಕೆ ಶಾಂತಿ ದೊರಕಿದೆ. ಮಹಾನ್ ‘ಸನಾತನ ಧರ್ಮ’ ಉಳಿಸಿ, ಸಂರಕ್ಷಿಸಿ ಮುಂದಕ್ಕೆ ಕೊಂಡೊಯ್ಯಲು ನಿಜವಾದ ಮಣ್ಣಿನ ಮಗನೊಬ್ಬ ಇದ್ದಾನಲ್ಲ ಎಂದು ಮನಸ್ಸಿಗೆ ಸಮಾಧಾನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಆ ನಾಯಕ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತ ದೇಶ ಮೋದಿ ನಾಯಕತ್ವದಲ್ಲಿ ಭೌತಿಕ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಸಾಧಿಸುವತ್ತ ಮುನ್ನಡೆಯುತ್ತಿದೆ. ಶ್ರೀ ಕಾಶಿ ವಿಶ್ವನಾಥ ಧಾಮದಿಂದ ಗಂಗಾ ಮಾತೆಯ ದೃಶ್ಯ ಕಾಣಲು ಸಾಧ್ಯವೆಂಬ ಆಲೋಚನೆಯೇ ನನ್ನನ್ನು ರೋಮಾಂಚನಗೊಳಿಸುತ್ತಿದೆ. ಹಲವು ಸವಾಲುಗಳು ಎದುರಾದರೂ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಹಿಂದುತ್ವವನ್ನು ಉಳಿಸಿ, ಮರುನಿರ್ವಿುಸಿ ಪ್ರಬಲ ನೆಲೆಗಟ್ಟು ಇಡಲು ಅಹಲ್ಯಾಬಾಯಿ ಹೋಳ್ಕರ್ ಎಲ್ಲ ಪ್ರಯತ್ನಗಳನ್ನು ನಡೆಸಿದರು. ನರೇಂದ್ರ ಮೋದಿಯವರೂ ಆಕೆಯ ಹೆಜ್ಜೆಜಾಡುಗಳಲ್ಲಿ ಸಾಗುತ್ತಿದ್ದಾರೆ. ಕೇದಾರನಾಥ ಧಾಮದ ಪುನರ್​ನಿರ್ವಣ ಮತ್ತು ಆದಿ ಶಂಕರಾಚಾರ್ಯರ ‘ಸಮಾಧಿ ಸ್ಥಳ’ದ ಮರುನಿರ್ವಣ ಪ್ರಕ್ರಿಯೆಯನ್ನು ಕಣ್ಣಾರೆ ಕಂಡಿರುವ ಅನುಭವದ ಆಧಾರದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ.
ಅಯೋಧ್ಯೆ ವಿವಾದ ಪರಿಹಾರ:ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣ ವಿಚಾರ ಇಷ್ಟು ಸುಗಮವಾಗಿ ಸೌಹಾರ್ದಯುತವಾಗಿ ಪರಿಹಾರವಾಗುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕೆಲಸ ನಡೆಯುತ್ತಿದೆ. ಅದರ ಶ್ರೇಯಸ್ಸು ಕೂಡ ಮೋದಿಯವರಿಗೆ ಸಲ್ಲಬೇಕು. ವಿದೇಶಗಳಲ್ಲಿ ಕೂಡ ಹಲವು ಆಧ್ಯಾತ್ಮಿಕ ಮತ್ತು ಧಾರ್ವಿುಕ ಕೇಂದ್ರಗಳನ್ನು ಸ್ಥಾಪಿಸಲು ಮೋದಿ ಕಾರಣಕರ್ತರಾಗಿದ್ದಾರೆ.
ಯೋಗಕ್ಕೆ ಮನ್ನಣೆ:ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿಸಿರುವುದು ಮೋದಿಯವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಇಂದು ಯೋಗ ಜಗತ್ತಿನಾದ್ಯಂತ ಒಂದು ಜೀವನ ವಿಧಾನವಾಗಿದೆ. ಆಧುನಿಕ ವಿಜ್ಞಾನವೂ ಯೋಗದ ಪ್ರಯೋಜನಗಳನ್ನು ಮಾನ್ಯ ಮಾಡಿದೆ. ನಾನು ಹತ್ತನೇ ವಯಸ್ಸಿನಿಂದಲೂ ಯೋಗ ಮಾಡುತ್ತಿದ್ದು ದೈಹಿಕ ಹಾಗೂ ಮಾನಸಿಕ ಸದೃಢನಾಗಿದ್ದೇನೆ. ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಿಸುವಲ್ಲಿ ಮೋದಿ ಮಾಡಿದ ಪ್ರಯತ್ನಗಳಿಗೆ ದೇಶ ಸದಾ ಋಣಿಯಾಗಿರುತ್ತದೆ. ಭಾರತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಯ ಸಂಕ್ರಮಣ ಕಾಲದಲ್ಲಿದೆ.
ಬ್ರೆಜಿಲ್​ನ ಜೊನಾಸ್ ಮೆಸೆಟ್ಟಿ, ರಿಯೋ ಡಿ ಜನೈರೋ ಸಮೀಪ ವೇದಾಂತ ಮತ್ತು ಭಗವದ್ಗೀತೆ ಬಗ್ಗೆ ಪಾಠ ಮಾಡುವ ವಿಚಾರವನ್ನು ಪ್ರಧಾನಿ ಮೋದಿ ಮಾಸಿಕ ರೇಡಿಯೊ ಭಾಷಣ ‘ಮನ್ ಕೀ ಬಾತ್’ ನಲ್ಲಿ ಉಲ್ಲೇಖಿಸಿದ್ದಾರೆ. ಜಾಗತಿಕ ಶಾಂತಿ ಮತ್ತು ಭಾರತೀಯ ಮೌಲ್ಯಗಳನ್ನು ಪಸರಿಸುವಲ್ಲಿ ಪಾತ್ರ ವಹಿಸುವಂತೆ ಅವರು ಅನಿವಾಸಿ ಭಾರತೀಯರಿಗೆ ಕರೆ ನೀಡಿದ್ದಾರೆ.
ಹಲವು ಸವಾಲುಗಳು ಹಾಗೂ ಕಷ್ಟಗಳ ನಡುವೆಯೂ ಮೋದಿ ಆರಂಭಿಸಿದ ಹಲವು ಉಪಕ್ರಮಗಳು ಭಾರತೀಯರ ಜನಜೀವನದ ಮೇಲೆ ಬೀರಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮ ಅಪಾರವಾದುದು. ಸೂಕ್ತ ಶೌಚಗೃಹ ಸೌಲಭ್ಯ, ಸ್ವಚ್ಛ ಭಾರತ ಅಭಿಯಾನ, ಉಜ್ವಲಾ ಯೋಜನೆ, ಬೇಟಿ ಬಚಾವೋ-ಬೇಟಿ ಪಡಾವೋ, ನಮಾಮಿ ಗಂಗೆ ಮುಂತಾದವು ಅಂಥ ಕೆಲವು ಉಲ್ಲೇಖಾರ್ಹ ಯೋಜನೆಗಳಾಗಿವೆ. ಈ ಕಾರ್ಯಕ್ರಮಗಳ ಮಹಾ ಯಶಸ್ಸು ಭಾರತೀಯ ನಾಗರಿಕರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಪುನರುಜ್ಜೀವನದಲ್ಲಿ ದೊಡ್ಡ ಪಾತ್ರ ವಹಿಸುವುದರಲ್ಲಿ ಸಂದೇಹವಿಲ್ಲ.
(ಲೇಖಕರು ಆಧ್ಯಾತ್ಮಿಕ ಗುರು ಮತ್ತು ಚಿಂತಕರು)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
