ಆಧುನಿಕ ತಂತ್ರಜ್ಞಾನದ ಕೊರತೆ ಅಥವಾ ಮುದ್ರಣದ ಭಾರೀ ವೆಚ್ಚ ತಪ್ಪಿಸುವ ಸಲುವಾಗಿ ಇಂದಿಗೂ ವಿಶ್ವದಲ್ಲಿರುವ ಅನೇಕ ದೇಶಗಳು ನೋಟುಗಳನ್ನು ಇತರ ದೇಶಗಳಲ್ಲಿ ಮುದ್ರಿಸುತ್ತವೆ. ಅನೇಕ ದೇಶಗಳು ನೋಟುಗಳನ್ನು ವಿಶೇಷವಾಗಿ ಚೀನಾದಲ್ಲಿಯೇ ಮುದ್ರಿಸುತ್ತಿದ್ದು, ಆ ದೇಶಗಳ ಪಟ್ಟಿ ಬಹಳ ಉದ್ದವಾಗಿದೆ. ಥೈಲ್ಯಾಂಡ್, ನೇಪಾಳ, ಶ್ರೀಲಂಕಾ, ಪೋಲೆಂಡ್ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳು ಚೀನಾದಲ್ಲಿ ತಮ್ಮ ದೇಶದ ನೋಟುಗಳನ್ನು ಮುದ್ರಿಸುತ್ತವೆ. ಈ ಕಾರಣಕ್ಕೂ ಚೀನಾದ ಜಾಗತಿಕ ಆರ್ಥಿಕತೆ ದೊಡ್ಡ ಮಟ್ಟದಲ್ಲಿದೆ. ಜತೆಗೆ ಇತರ ದೇಶಗಳ ಆರ್ಥಿಕ ನೀತಿಯಲ್ಲಿ ಚೀನಾದ ಪ್ರಾಬಲ್ಯ ಮತ್ತು ಪ್ರಭಾವ ಹಂತ ಹಂತವಾಗಿ ಹೆಚ್ಚುತ್ತಿದೆ. ಹಾಗೆಯೇ ಚೀನಾ ಈ ರೀತಿ ನೋಟುಗಳನ್ನು ಮುದ್ರಿಸುವ ಮೂಲಕ ಸಾಕಷ್ಟು ಹಣ ಗಳಿಸಿದೆ.
ಹಗಲಿರುಳು ಶ್ರಮಿಸುತ್ತಿರುವ ಕೆಲಸಗಾರರು:‘ಚೀನಾ ಬ್ಯಾಂಕ್‌ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್’ ಅನೇಕ ದೇಶಗಳಿಗೆ ನೋಟುಗಳನ್ನು ಮುದ್ರಿಸಿ ಕೊಡಲು ಹಗಲಿರುಳು ಕೆಲಸ ಮಾಡುತ್ತಿದೆ. ಇಲ್ಲಿ ಮನಿ ಪ್ರಿಂಟಿಂಗ್ ಪ್ಲಾಂಟ್‌ಗಳು ಸಹ ಸಮಯಕ್ಕೆ ತಕ್ಕಂತೆ ದೊಡ್ಡ ಕರೆನ್ಸಿ ಆರ್ಡರ್‌ಗಳನ್ನು ಪೂರೈಸಲು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಬೇರೆ ದೇಶಗಳ ಕರೆನ್ಸಿ ನೋಟುಗಳನ್ನು ಮುದ್ರಿಸುವ ಒಪ್ಪಂದ ಹೆಚ್ಚಾಗುತ್ತಿದ್ದು, ಮುದ್ರಣ ಕಾರ್ಯ ಹಗಲಿರುಳು ನಡೆಯುತ್ತಿದೆ. ಪ್ಲಾಂಟ್‌ಗಳಲ್ಲಿ ಕೆಲಸದ ಕೊರತೆಯೇ ಇಲ್ಲ. ಉದ್ಯೋಗಿಗಳಂತೂ ಹಲವಾರು ಪಾಳಿಗಳಲ್ಲಿ ಕೆಲಸ ಮಾಡಬೇಕಾಗಿದೆ. ಅಂದಹಾಗೆ ಈ ಮುದ್ರಣ ಯೋಜನೆ ಯುವಾನ್ ಪ್ರಾಂತ್ಯದಲ್ಲಿದೆ. ಅದರಲ್ಲೂ ಒನ್ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಪ್ರಾಜೆಕ್ಟ್ ಹೊಂದಿರುವ ಹಲವು ದೇಶಗಳು ನೋಟುಗಳನ್ನು ಮುದ್ರಿಸಲು ಚೀನಾದ ಮುಂದೆ ಸರದಿಯಲ್ಲಿ ನಿಂತಿವೆ. 2013 ರಲ್ಲಿ, ಬೀಜಿಂಗ್‌ನಲ್ಲಿ ಈ ಒನ್ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಪ್ರಾರಂಭವಾಯಿತು.
ವಿಶ್ವದ ಅತಿದೊಡ್ಡ ಮುದ್ರಣಾಲಯ:‘ಚೀನಾ ಬ್ಯಾಂಕ್‌ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್’ ಮುದ್ರಣಾಲಯವು ಬೀಜಿಂಗ್‌ನ ಕ್ಸಿಚೆಂಗ್ ಜಿಲ್ಲೆಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದು 18,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಈ ಮುದ್ರಣಾಲಯವು ಚೀನಾ ಸರ್ಕಾರದ ಒಡೆತನದಲ್ಲಿದ್ದು, ಮುದ್ರಣಕ್ಕಾಗಿ 10 ಘಟಕಗಳಿವೆ. ಇದು ವಿಶ್ವದ ಅತಿದೊಡ್ಡ ಮುದ್ರಣಾಲಯ ಎಂದು ಹೇಳಲಾಗುತ್ತದೆ. ಯುಎಸ್ ಕೂಡ ನೋಟುಗಳನ್ನು ಮುದ್ರಿಸುವ ಮುದ್ರಣಾಲಯ ಹೊಂದಿದ್ದು, ಅಮೆರಿಕದ ಬ್ಯೂರೋ ಆಫ್ ಎನ್’ಗ್ರೇವಿಂಗ್ ಆಂಡ್ ಪ್ರಿಂಟಿಂಗ್ ಕಂಪನಿಯು ಪ್ರಸ್ತುತ 2,000 ಉದ್ಯೋಗಿಗಳನ್ನು ಹೊಂದಿದೆ ಎನ್ನಲಾಗಿದೆ.
ಹೆಚ್ಚುತ್ತಿದೆ ಆನ್‌ಲೈನ್ ವಹಿವಾಟು:ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಹಣಕಾಸಿನ ವಹಿವಾಟು ಹೆಚ್ಚಾಗಿದ್ದು, ಹಣಕಾಸಿನ ವಹಿವಾಟನ್ನು ಸುಲಭಗೊಳಿಸಲು ಅನೇಕ ದೇಶಗಳು ಸಣ್ಣ ಹಣಕಾಸು ಸಂಸ್ಥೆಗಳಿಗೆ ಹಣ ವರ್ಗಾವಣೆ ಆಯ್ಕೆ ನೀಡಿವೆ. QR ಕೋಡ್ ಆಧಾರದ ಮೇಲೆ ಯಾವುದೇ ವ್ಯವಹಾರವನ್ನು ಸುಲಭವಾಗಿ ಸರಳಿಕರಿಸುವುದರಿಂದ ಚೀನಾದಲ್ಲಿ ನೋಟುಗಳನ್ನು ಮುದ್ರಿಸುವ ಒಪ್ಪಂದವನ್ನು ಹಲವು ದೇಶಗಳು ಸಹ ಕಡಿತಗೊಳಿಸಿರುವುದನ್ನು ನಾವಿಲ್ಲಿ ಗಮನಿಸಬಹುದು.
ಮಕ್ಕಳಲ್ಲಿ ದಿಢೀರನೆ ಕಾಣಿಸಿಕೊಂಡ ವಿಚಿತ್ರ ಕಾಯಿಲೆ; ತುಮಕೂರು ಪೋಷಕರಲ್ಲಿ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 10 =
Remember me
