ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿರುವ ಆಮ್​ ಆದ್ಮಿ ಪಾರ್ಟಿ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರುವ ಸನಿಹದಲ್ಲಿ ಬಂದು ನಿಂತಿದೆ.
ಭಾರಿ ವಿಜಯೋತ್ಸವ ಆಚರಣೆ ನಡುವೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್​ ಅಭ್ಯರ್ಥಿ ಅಮಾನತುಲ್ಲಾ ಖಾನ್​ ತಮ್ಮ ಕ್ಷೇತ್ರದ ಓಕ್ಲಾ ಮತದಾರರು ಬಿಜೆಪಿಗೆ ಶಾಕ್​ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೆಸರು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಅಮಾನತುಲ್ಲಾ ಖಾನ್​ ಬಿಜೆಬಿ ಅಭ್ಯರ್ಥಿ ಬ್ರಹಮ್​ ಸಿಂಗ್​ ಎದುರು ಬರೋಬ್ಬರಿ 70 ಸಾವಿರ ಮತಗಳ ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ ಪೌರತ್ವ ತಿದ್ದುಪಡಿ ವಿರುದ್ಧ ಕಳೆದ ಒಂದೂವರೆ ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿರುವ ಶಾಹೀನ್​ ಬಾಘ್​ ಏರಿಯಾ ಇದೇ ಓಕ್ಲಾ ವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಇದು ಕೂಡ ಚುನಾವಣಾ ಫಲಿತಾಂಶದಲ್ಲಿ ಪ್ರಭಾವ ಬೀರಿದೆ ಎಂಬುದು ಮತಗಳ ಅಂತರದಿಂದ ತಿಳಿದುಬರುತ್ತಿದೆ.
ಇತ್ತೀಚೆಗೆ ನಡೆದ ದೆಹಲಿ ಚುನಾವಣಾ ಸಮಾವೇಶವೊಂದರಲ್ಲಿ ಅಮಿತ್​ ಷಾ ಮಾತನಾಡಿ, ಮತಯಂತ್ರದ ಬಟನ್​ ಅನ್ನು ಕೋಪದಿಂದಲೇ ಒತ್ತಿ. ಏಕೆಂದರೆ ಅದರ ಶಾಕ್​ ಶಾಹೀನ್​ ಬಾಘ್​ನಲ್ಲಿರುವ ಪ್ರತಿಭಟನಾಕಾರರ ಅನುಭವಕ್ಕೆ ಬರಬೇಕೆಂದು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು.
ಇದೀಗ್ ಅಮಿತ್​ ಷಾ ಹಿಂದಿನ ಹೇಳಿಕೆಯನ್ನು ಮರು ನೆನಪಿಸಿ, ಖಾನ್​ ತಿರುಗೇಟು ನೀಡಿದ್ದಾರೆ. ಸದ್ಯದ ದೆಹಲಿ ಟ್ರೆಂಡ್​ ಪ್ರಕಾರ ಆಪ್​ 63 ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡರೆ, ಬಿಜೆಪಿ 7 ಹಾಗೂ ಕಾಂಗ್ರೆಸ್​ 0 ಮೂಲಕ ಅಸ್ತಿತ್ವವನ್ನೇ ಕಳೆದುಕೊಂಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
