ನೋಯ್ಡಾ:ಪಾರ್ಸೆಲ್ ಡೆಲಿವರಿ ಮಾಡಲು ಹೋಗಿದ್ದ ಇ-ಕಾಮರ್ಸ್ ಕಂಪನಿಯ ಡೆಲಿವರಿ ಬಾಯ್​​ಗೆ ಯುವಕರಿಬ್ಬರು ಹಣ ನೀಡದೆ ಪಾರ್ಸೆಲ್​ನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಇದನ್ನೂ ಓದಿ:ಬೇರೆಯವರೊಂದಿಗೆ ಮಾತನಾಡಬೇಡವೆಂದ ಪತಿ: ಪತ್ನಿ ಮಾಡಿದ್ದಿಷ್ಟು..ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ರಾಜ್‌ಕುಮಾರ್ ಎಂಬ ಯುವಕ, ಆಗಸ್ಟ್ 21ರಂದು ಕಂಪನಿಯ ಕಚೇರಿಯಿಂದ ಪಾರ್ಸೆಲ್ ಸ್ವೀಕರಿಸಿದ್ದನು. ಅದರ ಮೇಲೆ ಗ್ರಾಹಕರ ಹೆಸರು ದೀಪಕ್ ಎಂದು ಬರೆಯಲಾಗಿತ್ತು. ಆ ಬಳಿಕ ಯುವಕನು ಆ ಪಾರ್ಸೆಲ್​ ತೆಗೆದುಕೊಂಡು ನಿಗದಿತ ಸ್ಥಳಕ್ಕೆ ಹೋಗಿ ಕರೆ ಮಾಡಿದ್ದಾನೆ.ಈ ವೇಳೆ ಆ ಕಡೆಯಿಂದ ಗ್ರಾಹಕನು ಪಾರ್ಸೆಲ್​ನ್ನು ಸೆಕ್ಟರ್ 81ರಲ್ಲಿರುವ ಕಂಪನಿಯ 3ನೇ ಗೇಟ್ ಬಳಿ ಬರುವಂತೆ ತಿಳಿಸಿದ್ದಾನೆ. ಡೆಲಿವರಿ ಬಾಯ್ ಅಲ್ಲಿಗೆ ತಲುಪಿದಾಗ, ಗ್ರಾಹಕನು ತನ್ನ ಸ್ನೇಹಿತನೊಂದಿಗೆ ತನ್ನ ಕಾರಿನಲ್ಲಿ ಮಧ್ಯಾಹ್ನ 1:30ರ ಸುಮಾರಿಗೆ ಅಲ್ಲಿಗೆ ಬಂದಿದ್ದಾನೆ. ನಂತರ ಗ್ರಾಹಕರು ಪಾರ್ಸೆಲ್​ನ್ನು ಕೈಯಲ್ಲಿ ತೆಗೆದುಕೊಂಡು ಕಾರಿನೊಳಗೆ ಕುಳಿತು ಪಾವತಿ ಮಾಡಲು ಪ್ರಾರಂಭಿಸಿ, ಹಣ ಪಾವತಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪತ್ನಿ, ಆಕೆಯ ಕುಟುಂಬಸ್ಥರ ಮೇ ಹಲ್ಲೆ ನಡೆಸಿ, 2ನೇ ಅಂತಸ್ತಿನಿಂದ ಜಿಗಿದ ಭೂಪ..ಆದರೆ ಡೆಲಿವರಿ ಬಾಯ್ ಹಣ ಪಾವತಿಯಾಗಿಲ್ಲ ಎಂದು ಹೇಳಿದಾಗ, ಕೂಡಲೇ ಕಾರಿನಲ್ಲಿದ್ದ ಗ್ರಾಹಕ ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ದಿಕ್ಕುತೋಚದ ಯುವಕ ಕೂಡಲೇ ಸಮೀಪದ ಪೊಲೀಸ್​ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
