ಹೈದರಾಬಾದ್:ಆಘಾತಕಾರಿ ಘಟನೆಯೊಂದರಲ್ಲಿ ಸೀಲ್​ ಮಾಡಿದ ಬಿಯರ್​ ಬಾಟಲಿಯಲ್ಲಿ ಫಂಗಸ್​ ಕಂಡು ಬಂದಿರರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಿಯರ್​ ಬಾಟಲಿಯಲ್ಲಿ ಫಂಗಸ್​ ಕಾಣಿಸಿಕೊಳ್ಳಲು ರಾಜ್ಯ ಕಾಂಗ್ರೆಸ್​ ಸರ್ಕಾರವೇ ಕಾರಣ ಎಂದು ವ್ಯಕ್ತಿ ದೂಷಿಸಿದ್ದು, ಇದರ ವಿಡಿಯೋ ಸಖತ್​ ಸೌಂಡ್​ ಮಾಡುತ್ತಿದೆ.
ಹನುಮಕೊಂಡದಲ್ಲಿ ವ್ಯಕ್ತಿಯೊಬ್ಬರು ಜುಲೈ 30ರಂದು ಸರ್ಕಾರಿ ಸ್ವಾಮ್ಯದ ಬಾರೊಂದಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರು ಕಿಂಗ್​ಫಿಶರ್​ ಬಿಯರ್​ಅನ್ನು ಖರೀದಿಸಿದ್ದಾರೆ. ಬಿಯರ್​ ಓಪನ್​ ಮಾಡುವುದಕ್ಕೂ ಮುನ್ನ ಅವರು ಬಾಟಲ್​ಅನ್ನು ಪರಿಶೀಲಿಸಿದ್ದು, ಈ ವೇಳೆ ಅವರು ಬಾಟಲ್​ನ ಕೆಲಭಾಗದಲ್ಲಿ ಫಂಗಸ್​ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ಬಾರ್​ ಮಾಲೀಕರ ಬಳಿ ತೆರಳಿದ ವ್ಯಕ್ರಿಯು ಬದಲಿ ನೀಡುವಂತೆ ಆಗ್ರಹಿಸಿದ್ದಾರೆ.
బీర్ బాటిల్‌లో ఫంగస్.. వైన్ షాపు ముందు ఆందోళనహనుమకొండ – బీర్ బాటిల్‌లో ఫంగస్ రావడంతో ఆందోళన చెందిన కస్టమర్ఇది గవర్నమెంట్ నిర్లక్ష్యమంటూ వైన్ షాప్ ముందు కస్టమర్ ఆందోళన.pic.twitter.com/GI8TuS9qql
ಇದನ್ನೂ ಓದಿ:ಬಾಯ್​ಫ್ರೆಂಡ್​ ಕೈ ಹಿಡಿದಿದ್ದಕ್ಕೆ ರಂಪ ಮಾಡಿದವ್ರು, ಯಾರೋ ರೇಗಿಸಿದಾಗ ಮಾತ್ರ ಸುಮ್ಮನಿದ್ರು; ಬೆಂಗಳೂರು ಪೊಲೀಸರ ವಿರುದ್ಧ ಮಹಿಳೆ ಗಂಭೀರ ಆರೋಪ
ಬಿಯರ್​ಅನ್ನು ವಾಪಸ್​ ಪಡೆದ ಬಾರ್​ ಮಾಲೀಕ ಬದಲಿ ನೀಡಲು ನಿರಾಕರಿಸಿದ್ದಾನೆ. ಈ ವೇಳೆ ಬಾರ್​ನಲ್ಲಿದ್ದ ಇತರರು ಹಾಗೂ ಸ್ಥಳೀಯರು ಗಲಾಟೆ ಮಾಡಿದ್ದು, ಕೂಡಲೇ ಬಾರ್​ನ ಮಾಲೀಕ ಕ್ಷಮೆಯಾಚಿಸಿ ಬದಲಿ ಬಿಯರ್​ ನೀಡಲು ಒಪ್ಪಿಕೊಂಡಿದ್ದಾನೆ. ಜನರ ಜೀವಕ್ಕೆ ಅಪಾಯವಿದ್ದು, ಇದನ್ನು ಕುಡಿದು ಜನರು ಸಾಯಬೇಕೇ ಎಂದು ಪ್ರಶ್ನಿಸಿದ್ದಾರೆ. ಬಳಿಕ ಈ ಘಟನೆಗೆ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಮುಖ್ಯ ಕಾರಣ ಎಂದು ಆರೋಪಿಸಿದ ವ್ಯಕ್ತಿಯು, ಕಾಂಗ್ರೆಸ್ ಇಷ್ಟೊಂದು ಬೇಜವಾಬ್ದಾರಿಯಿಂದ ಹೇಗೆ ನಡೆದುಕೊಳ್ಳು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ತೆಲಂಗಾಣದ ರಾಜ್ಯ ಸರ್ಕಾರಿ ಸ್ವಾಮ್ಯದ ವೈನ್ ಶಾಪ್‌ಗಳಲ್ಲಿ ನೀಡಲಾಗುತ್ತಿರುವ ಮದ್ಯದ ಗುಣಮಟ್ಟದ ಬಗ್ಗೆ ಈ ಘಟನೆ ಆತಂಕ ಮೂಡಿಸಿದೆ. ರಾಜ್ಯದ ಜನರಿಗೆ ನೀಡುತ್ತಿರುವ ಮದ್ಯದ ಗುಣಮಟ್ಟವನ್ನು ಪರಿಶೀಲಿಸಲು ರಾಜ್ಯ ಕಾಂಗ್ರೆಸ್​ ಸರ್ಕಾರವು ತೆಲಂಗಾಣ ರಾಜ್ಯ ಪಾನೀಯಗಳ ಕಾರ್ಪೊರೇಷನ್ ಲಿಮಿಟೆಡ್ (TSBCL) ವೈನ್ ಶಾಪ್‌ಗಳನ್ನು ನಡೆಸುತ್ತಿದೆ. ಆದರೆ, ಈ ಘಟನೆಯು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + four =
Remember me
