ಕೊಚ್ಚಿ:ದೇಶದ ಗಮನಸೆಳೆದ ಚಿನ್ನ ಕಳ್ಳಸಾಗಣೆ ಕೇಸ್​ಗೆ ಸಂಬಂಧಿಸಿ ಅಮಾನತುಗೊಂಡ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಔಪಚಾರಿಕವಾಗಿ ಬಂಧಿಸಿದ್ದಾಗಿ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈಗಾಗಲೇ ಜೈಲಿನಲ್ಲಿದ್ದ ಎಂ.ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಅಲ್ಲೇ ಬಂಧಿಸಿರುವ ದಾಖಲೆಯೊಂದಿಗೆ ಅವರ ಹೇಳಿಕೆಗಳನ್ನು ದಾಖಲಿಸಿದರು.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಶಂಕರ್ ಅವರನ್ನು ಬಂಧಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಬಂಧನದ ದಾಖಲೆಗಳೊಂದಿಗೆ ಕೋರ್ಟ್​ನಲ್ಲಿ ಅವರನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಕೇಳಿಕೊಳ್ಳಲಿದ್ದಾರೆ. ಪಿಎಂಎಲ್​ಎ ಕೇಸ್​ಗಳಿಗೆ ಸಂಬಂಧಪಟ್ಟು ಬಂಧನ ದಾಖಲಿಸಿಕೊಳ್ಳುವುದಕ್ಕೆ ವಿಶೇಷ ಕೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಗೆ ನಿನ್ನೆ ಅನುಮತಿ ನೀಡಿತ್ತು.
ಇದನ್ನೂ ಓದಿ:ಶಿಕ್ಷಣದಲ್ಲಿ ಸುಧಾರಣೆಗೆ ಸರ್ಕಾರಿ ಶಾಲೆಗಳ‌ ದತ್ತು ಸ್ವೀಕಾರ ನೆರವು, ಸಿಎಂ ಬಿಎಸ್ ವೈ ಆಶಾಭಾವ
ಚಿನ್ನ ಕಳ್ಳಸಾಗಣೆ ಕೇಸ್​ಗೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಇದುವರೆಗೆ 15 ಆರೋಪಿಗಳನ್ನು ಬಂಧಿಸಿದೆ. ಇವರ ಪೈಕಿ ಸ್ವಪ್ನಾ ಸುರೇಶ್, ಸರಿತಾ ಪಿಎಸ್​, ಸಂದೀಪ್ ನಾಯರ್ ಪ್ರಮುಖರು. (ಏಜೆನ್ಸೀಸ್)
ಸರ್ಕಾರಿ ನೌಕರರು ಸ್ಟ್ರೈಕ್ ಮಾಡಿದ್ರೆ ಸೆರೆವಾಸ ಗ್ಯಾರೆಂಟಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
