ನವದೆಹಲಿ :ಕರೊನಾ ಲಸಿಕೆಗಳು, ಆಕ್ಸಿಜನ್ ಮತ್ತು ಆಕ್ಸಿಜನ್ ಪೂರೈಕೆಯ ಉಪಕರಣಗಳ ಮೇಲೆ ಆಮದು ಶುಲ್ಕ(ಕಸ್ಟಮ್ಸ್ ಡ್ಯೂಟಿ) ಮತ್ತು ಆರೋಗ್ಯ ಕರ(ಹೆಲ್ತ್​ ಸೆಸ್)ಗಳ ವಿನಾಯಿತಿ ನೀಡಿ ಭಾರತ ಸರ್ಕಾರ ಆದೇಶ ಹೊರಡಿಸಿದೆ. ದೇಶವು ಕರೊನಾ ಎರಡನೇ ಅಲೆಯ ಆಘಾತಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸರ್ಕಾರ ಈ ಘೋಷಣೆ ಮಾಡಿದೆ.
ತಕ್ಷಣವೇ ಜಾರಿಗೆ ಬರಲಿರುವ ಈ ವಿನಾಯಿತಿಯು ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಲಸಿಕೆಗಳು ಮತ್ತು ವೈದ್ಯಕೀಯ ಉಪಯೋಗದ ಆಮ್ಲಜನಕದ ಜೊತೆಗೆ, ಕರೊನಾ ಸೋಂಕಿತ ಅಥವಾ ಇತರೆ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಬಳಸಲಾಗುವ ಜನರೇಟರ್ಸ್​, ಸ್ಟೋರೇಜ್ ಟ್ಯಾಂಕ್ಸ್, ಫಿಲ್ಲಿಂಗ್ ಸಿಸ್ಟಮ್ಸ್​ ಮತ್ತು ಕಾನ್ಸಂಟ್ರೇಟರ್​ಗಳಂತಹ ಉಪಕರಣಗಳಿಗೂ ಈ ವಿನಾಯಿತಿ ಅನ್ವಯಿಸಲಿದೆ.
ಇದನ್ನೂ ಓದಿ:25 ಹೊಸ ರೆಮ್​ಡೆಸಿವಿರ್ ಉತ್ಪಾದನಾ ಘಟಕಗಳು ; ದಿನಕ್ಕೆ 3 ಲಕ್ಷ ವಯಲ್ ಗುರಿ !
ಈ ನಿಟ್ಟಿನಲ್ಲಿ ಕಸ್ಟಮ್ಸ್​ ಕ್ಲಿಯರೆನ್ಸ್​ನ ವಿಚಾರಗಳನ್ನು ನಿರ್ವಹಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ಕೂಡ ಸರ್ಕಾರ ನೇಮಕ ಮಾಡಿದೆ. ಈ ನಿರ್ಧಾರದಿಂದ ಈ ಉಪಕರಣಗಳು ಸುಲಭವಾಗಿ ಲಭ್ಯವಾಗುವುದರೊಂದಿಗೆ ಅವುಗಳ ಬೆಲೆಗಳೂ ಅಗ್ಗವಾಗಲಿದೆ ಎಂದು ಸರ್ಕಾರ ಹೇಳಿದೆ.
ಹಾಲಿ ಲಭ್ಯವಿರುವ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎಂಬ ಎರಡು ಕರೊನಾ ಲಸಿಕೆಗಳು ಭಾರತದಲ್ಲೇ ಉತ್ಪಾದನೆಯಾಗುತ್ತಿವೆ. ಇದೀಗ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗೆ ಪರವಾನಗಿ ಸಿಕ್ಕಿದ್ದು, ಹೈದರಾಬಾದ್​ನ ವಿರ್ಚೌವ್ ಬಯೋಟೆಕ್ ಕಂಪೆನಿ ಉತ್ಪಾದಿಸುವ ಯೋಜನೆ ಹೊಂದಿದೆ.(ಏಜೆನ್ಸೀಸ್)
ಆಕ್ಸಿಜನ್ ಕೊರತೆ : ಖಾಸಗಿ ಆಸ್ಪತ್ರೆಯಲ್ಲಿ 6 ರೋಗಿಗಳ ಸಾವು

‘ಮೇನಲ್ಲಿ ಪೀಕ್​ ತಲುಪಲಿದೆ, ಅದಕ್ಕೆ ಸಿದ್ಧತೆ ಏನು ?’ – ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
