ಲಖನೌ:ರೈಲು ಹರಿದು ಯುವಕನ ದೇಹ ಎರಡು ಭಾಗವಾಗಿರುವ ಘಟನೆ ಉತ್ತರ ಪ್ರದೇಶದ ಶಹಜನ್​ಪುರದಲ್ಲಿ ನಡೆದಿದೆ. ಕಾಳುಗಳು ತುಂಡರಿಸಿ ಬಿದ್ದರೂ ಎಚ್ಚರವಿದ್ದ ಯುವಕ ಇದರಲ್ಲಿ ಯಾರದ್ದೂ ತಪ್ಪಿಲ್ಲವೆಂದು ಹೇಳುತ್ತಲೇ ಪ್ರಾಣ ಬಿಟ್ಟಿದ್ದಾಗಿ ಹೇಳಲಾಗಿದೆ.
ಇದನ್ನೂ ಓದಿ:81ರ ವೃದ್ಧೆಗೆ 46 ವರ್ಷದ ವ್ಯಕ್ತಿಯ ಜತೆ ಮದುವೆ! ಮದುವೆಯಾದರೂ ಒಂದಾಗಲಿಲ್ಲ ಈ ಜೋಡಿ
19 ವರ್ಷದ ಹರ್ಷವರ್ಧನ್​ ಸೋಮವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ತನ್ನ ತಾಯಿಯ ಬಳಿ ಹಣ ಪಡೆದು ಮನೆಯಿಂದ ಹೊರನಡೆದಿದ್ದಾನೆ. ಅದಾದ ನಂತರ ರೈಲು ಹಳಿಯತ್ತ ಬಂದು ಕುಳಿತ ಆತ ರೈಲಿಗಾಗಿ ಕಾದಿದ್ದಾನೆ. ರೈಲು ಇನ್ನೇನು ಹತ್ತಿರ ಬಂತು ಎನ್ನುವಷ್ಟರಲ್ಲಿ ಹಳಿಯ ಮೇಲೆ ಹಾರಿದ್ದಾನೆ. ಇದರಿಂದಾಗಿ ಯುವಕನ ದೇಹ ಎರಡು ತುಂಡಾಗಿದೆ.
ಎರಡು ಕಾಲುಗಳು ದೇಹದಿಂದ ಬೇರೆಯಾಗಿದ್ದು ಹಳಿಯ ಬಳಿ ಬಿದ್ದಿದೆ. ಕಾಲಿನ ಮೇಲ್ಭಾಗ ರೈಲು ಹೊಡೆದ ಹೊಡೆತಕ್ಕೆ ಹತ್ತಿರದ ಚರಂಡಿಗೆ ಹಾರಿ ಬಿದ್ದಿದೆ. ಅಷ್ಟಾದರೂ ಯುವಕನ ಪ್ರಾಣ ಹೋಗಿಲ್ಲ. ಸುಮಾರಷ್ಟು ಹೊತ್ತು ಆತ ಚರಂಡಿಯಲ್ಲೇ ನರಳಿದ್ದಾನೆ. ಅಷ್ಟರಲ್ಲಿ ಸ್ಥಳೀಯರು ಆತನನ್ನು ಗಮನಿಸಿದ್ದು, ಚರಂಡಿಯಿಂದ ಎಳೆದು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗೆಲ್ಲ ಆತ ಇದರಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಪದೇ ಪದೆ ಹೇಳಿದ್ದಾನೆ.
ಇದನ್ನೂ ಓದಿ:VIDEO| ನಡುರಸ್ತೆಯಲ್ಲಿ ಕರುವಿನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ವ್ಯಕ್ತಿ
ಸುಮಾರು 12-13 ತಾಸುಗಳ ಕಾಲ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಹೆಚ್ಚು ರಕ್ತಸ್ತ್ರಾವ ಆಗಿದ್ದರಿಂದಾಗಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಯುವಕನ ಈ ನಿರ್ಧಾರಕ್ಕೆ ಕಾರಣವೇನೆಂಬುದು ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್​)
ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
