ಹೈದರಾಬಾದ್​:ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳು ಬಹಿರಂಗವಾಗಿದ್ದು, ಪಾಲಕರು ಮತ್ತು ಪ್ರಿಯಕರನ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.
ತೆಲಂಗಾಣದ ಮೈಲಾರ್ದೇವ್​ಪಲ್ಲಿ ಮೂಲದ ಲಿಜಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಯ ತಂದೆ ಪರಮೇಶ್ವರ್​ ಒಡಿಶಾ ಮೂಲದವರು. 20 ವರ್ಷಗಳ ಹಿಂದೆ ತೆಲಂಗಾಣಕ್ಕೆ ಬಂದು ಲಕ್ಷ್ಮಿಗುಡ ಎಂಬಲ್ಲಿ ನೆಲೆಸಿದ್ದಾರೆ. ಇದೇ ಏರಿಯಾದಲ್ಲಿ ಅಕ್ರಮ್​ ಅಲಿಯಾಸ್​ ಅಪ್ಸರ್​ (20) ಎಂಬಾತನು ಸಹ ವಾಸವಿದ್ದಾನೆ.
ಇದನ್ನೂ ಓದಿರಿ:ದೇವಸ್ಥಾನದ ಬಾವಿಗೆ‌ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: ತೆಕ್ಕಟ್ಟೆ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ದುರಂತ
ಅಪ್ಸರ್​ ಮತ್ತು ಲಿಜಾ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಒಂದೇ ಏರಿಯಾದವರಾಗಿದ್ದರಿಂದ ಇಬ್ಬರ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇಬ್ಬರ ವಿಚಾರ ಲಿಜಾ ಕುಟುಂಬಕ್ಕೆ ತಿಳಿದು ಅಪ್ಸರ್​ಗೆ ಎಚ್ಚರಿಕೆಯನ್ನು ನೀಡಲಾಗಿತ್ತು.
ಹೀಗಿದ್ದರೂ ಇಬ್ಬರ ನಡುವೆ ಪ್ರೀತಿ ಮುಂದುವರಿದಾಗಿ ಲಿಜಾ ಕುಟುಂಬದವರು ಆಕೆಯ ತಲೆಯ ಕೂದಲನ್ನು ಕತ್ತರಿಸಿದ್ದರು. ಹೊರಗೆ ಹೋಗದಂತೆ ತಡೆಯಲು ಹೀಗೆ ಮಾಡಿದ್ದರು. ಇದರಿಂದ ಆಕೆ ಖಿನ್ನತೆಗೂ ಒಳಗಾಗಿದ್ದಳು. ಇತ್ತ ಅಪ್ಸರ್​ ಸಹ ಕರೆ ಮಾಡಿ ಕಿರುಕುಳ ನೀಡಲು ಆರಂಭಿಸಿದ.
ಮಹಿಳಾ ದಿನಾಚರಣೆಯಂದು ಸುಮಾರು 1 ಗಂಟೆಗಳ ಕಾಲ ಬಾಯ್​ಫ್ರೆಂಡ್​ ಜತೆ ಮಾತನಾಡಿದ ಲಿಜಾ, ಆ ಬೆನ್ನಲ್ಲೇ ತನ್ನ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತಪಟ್ಟ ಬಳಿಕವೂ ಅಪ್ಸರ್​ 135 ಬಾರಿ ಕರೆ ಮಾಡಿದ್ದಾನೆ.
ಇದನ್ನೂ ಓದಿರಿ:4 ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬೆಂಗಳೂರಿಗೆ ಬಂದವಳ ಭಯಾನಕ ಕತೆ ಇದು!
ಮಗಳು ಆತ್ಮಹತ್ಯೆ ಸುದ್ದಿ ತಿಳಿದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಅತ್ತ ಮೊಬೈಲ್​ ಫೋನ್​ ನೋಡಿದ ಪಾಲಕರಿಗೆ ಅಪ್ಸರ್​ ಕರೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಕುಟುಂಬದ ಅಪ್ಸರ್​ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮೈಲಾರ್ದೇವ್​ಪಲ್ಲಿ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.(ಏಜೆನ್ಸೀಸ್​)
ಗೊತ್ತಿಲ್ಲದೆ ಇಬ್ಬರು ಪ್ರೀತಿಸಿದ್ದು ಒಬ್ಬಳನ್ನೆ: ಗೊತ್ತಾಗ್ತಿದ್ದಂತೆ ಸೋದರಸಂಬಂಧಿಗಳಿಬ್ಬರ ದುರಂತ ಸಾವು!

ಉದ್ಯೋಗ ಕೌಶಲ ಕಲಿಯದಿದ್ದರೆ ನಿಷ್ಫಲ!

ಕಿಕ್​ಗಾಗಿ ಸೇದ್ತೀರಾ? ಸಿಕ್ ಆಗ್ತೀರಿ ಹುಷಾರ್!; ಇಂದು ನೋ ಸ್ಮೋಕಿಂಗ್ ಡೇ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − two =
Remember me
