ನವದೆಹಲಿ:ಸಾಮಾಜಿಕ ಜಾಲತಾಣಕ್ಕೆ ಇರುವ ಶಕ್ತಿ ಅಪರಿಮಿತ ಎಂಬುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ತಿಳಿದಿದೆ. ಒಂದು ವಿಷಯವನ್ನು ಸಹಸ್ರಾರು ಸಂಖ್ಯೆಯ ಜನರಿಗೆ ಶರವೇಗದಲ್ಲಿ ತಲುಪಿಸುವ ಮೂಲಕ ವೈರಲ್​ ಆಗಿ, ಜನರಿಂದ ವ್ಯಾಪಕ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ.
ಇದನ್ನೂ ಓದಿ:ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ರೈಲು ಹಳಿಗಳ ಬಳಿ ಮೇಲ್ಸೇತುವೆ
ಅದರಲ್ಲೂ ರೀಲ್ಸ್​ ವಿಡಿಯೋಗಳು ನೆಟ್ಟಿಗರ ಗಮನವನ್ನು ಬಹಳ ವೇಗವಾಗಿ ಸೆಳೆಯುತ್ತಿದ್ದು, ಈ ಪೈಕಿ ಪುಟ್ಟ ಪೋರಿಯೊಬ್ಬಳು ರಜನಿಕಾಂತ್​ ನಟನೆಯ ಜೈಲರ್​ ಚಿತ್ರದ ಕಾವಾಲಾ ಹಾಡಿಗೆ ಡ್ಯಾನ್ಸ್​ ಮಾಡಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರೀಲ್ಸ್​ನಲ್ಲಿ ನಟಿ ತಮನ್ನಾ ಭಾಟಿಯಾ ಹಾಕಿದ ಮಸ್ತ್​ ಸ್ಟೆಪ್ಸ್​ಗಳನ್ನೇ ಈಕೆಯೂ ಮುದ್ದು ಮುದ್ದಾಗಿ ಮಾಡಿರುವುದು ಅನೇಕ ನೆಟ್ಟಿಗರ ಗಮನವನ್ನು ಸೆಳೆದಿದೆ.

A post shared by Aruna Srikanth Vyda (@cutiepie_riva)
ಕಾವಾಲಾ ಹಾಡು ಬಿಡುಗಡೆಗೊಂಡ ಮೊದಲ ದಿನದಿಂದಲೂ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವರು ಈ ಸಾಂಗ್​ಗೆ ರೀಲ್ಸ್​ ಮಾಡಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮುಖೇನ ಹಾಡನ್ನು ಮತ್ತಷ್ಟು ಟ್ರೆಂಡ್​ ಮಾಡಿದರು. ಇದೀಗ ಈ ಸಾಲಿಗೆ ಪುಟ್ಟ ಪೋರಿ ವಿಡಿಯೋ ಕೂಡ ಸೇರ್ಪಡೆಗೊಂಡಿದ್ದು, ನೆಟ್ಟಿಗರು ಕಮೆಂಟ್​ ಮಾಡಿ ಬಾಲಕಿಯ ಡ್ಯಾನ್ಸ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಈ ದಿನಾಂಕದಂದು ಒಟಿಟಿಯಲ್ಲಿ ರಿಲೀಸ್​ ಆಗಲಿದೆ ಬ್ಲಾಕ್​​ಬಸ್ಟರ್​ ‘ಬೇಬಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
