ಕೊಟ್ಟಾಯಂ:ಸೈಬರ್​ ದಾಳಿಯಿಂದ ಮನನೊಂದು ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಮೃತ ಯುವತಿಯ ಮಾಜಿ ಬಾಯ್​ಫ್ರೆಂಡ್​ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತ ಯುವತಿಯನ್ನು ಅಥಿರಾ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಬಾಯ್​ಫ್ರೆಂಡ್​ ಅರುಣ್​ ವಿದ್ಯಾಧರಣ್​ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಅಥಿರಾ ಕೊತ್ತನಲ್ಲೂರಿನ ನಿವಾಸಿ. ಸೋಮವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದರು.
ಇದನ್ನೂ ಓದಿ:ಭಾರತದಲ್ಲಿ ಸರಾಸರಿ ವೇತನ 50 ಸಾವಿರ ರೂ.!; ಜಾಗತಿಕ ಪಟ್ಟಿಯಲ್ಲಿ 65ನೇ ಸ್ಥಾನ

ಅಥಿರಾ ಮಣಿಪುರದಲ್ಲಿರುವ ಕೇರಳ ಮೂಲದ ಐಎಎಸ್​ ಅಧಿಕಾರಿ ಅವರ ಅತ್ತಿಗೆ. ಕೊಟ್ಟಾಯಂನ ಖಾಸಗಿ ಸಂಸ್ಥೆಯಲ್ಲಿ ವೆಬ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದರು. ಅಥಿರಾ ಅವರ ಸ್ನೇಹಿತನಾಗಿದ್ದ ಅರುಣ್ ವಿದ್ಯಾಧರನ್ ಫೇಸ್​ಬುಕ್ ಮೂಲಕ ಆಕೆಯ ವಿರುದ್ಧ ಸೈಬರ್ ದಾಳಿ ನಡೆಸಿದ್ದ.
ಇತ್ತೀಚೆಗಷ್ಟೇ ಆಥಿರಾ, ಅರುಣ್​ ಜತೆಗಿನ ಸ್ನೇಹವನ್ನು ತ್ಯಜಿಸಿದ್ದರು. ಅಥಿರಾಗೆ ಮದುವೆ ಪ್ರಸ್ತಾಪಗಳು ಬರುತ್ತಿವೆ ಎಂಬುದನ್ನು ತಿಳಿದುಕೊಂಡ ಅರುಣ್, ಸಾಮಾಜಿಕ ಜಾಲತಾಣ ಮೂಲಕ ಅಥಿರಾಳನ್ನು ನಿರಂತರವಾಗಿ ನಿಂದಿಸಿದ್ದಾನೆ. ಅಲ್ಲದೆ, ಫೇಸ್​ಬುಕ್​ನಲ್ಲಿ ಆಕೆಯ ಚಿತ್ರಗಳನ್ನೂ ಪೋಸ್ಟ್​ ಮಾಡಿ ಮಾನಹಾನಿಕರವಾದ ಅಶ್ಲೀಲ ಬರಹಗಳನ್ನು ಬರೆದಿದ್ದ.
ಇದನ್ನೂ ಓದಿ:ಅಮೆರಿಕ ಕಂಪನಿಗಳ ಮೇಲೆ ಚೀನಾ ಪ್ರಹಾರ
ಇದು ಅಥಿರಾಳ ಗಮನಕ್ಕೆ ಬಂದು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅರುಣ್ ವಿದ್ಯಾಧರನ್ ಸದ್ಯ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಅನುಷ್ಠಾನದ ಸವಾಲು: ಚುನಾವಣೆ ಪ್ರಣಾಳಿಕೆ, ಕಾದಿದೆ ಹೊಣೆಗಾರಿಕೆ

ಚಿಕ್ಕಬಳ್ಳಾಪುರದಲ್ಲಿ ತ್ರಿಕೋನ ಹಣಾಹಣಿ; ಜಿಲ್ಲೆಯಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ಡಾ.ಕೆ.ಸುಧಾಕರ್; ಕಾಂಗ್ರೆಸ್-ಜೆಡಿಎಸ್ ಪ್ರಬಲ ಪೈಪೋಟಿ

ಅಂಬರೀಷ್ ಮೃತಪಟ್ಟಾಗ ರಮ್ಯಾ ಏಕೆ ಬಂದಿರಲಿಲ್ಲ?; ಕಾರಣ ತಿಳಿಸಿದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
