ನವದೆಹಲಿ:ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಮಾಣ ಶೇಕಡ 400 ಏರಿಕೆಯಾಗಿದೆ. ಈ ಪೈಕಿ ಬಹುತೇಕ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದವು ಎಂದು ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೖೆಮ್್ಸ ರೆಕಾರ್ಡ್ ಬ್ಯೂರೋ (ಎನ್​ಸಿಆರ್​ಬಿ) ಡೇಟಾ ಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ 2020ರಲ್ಲಿ ದಾಖಲಾಗಿರುವ 842 ಆನ್​ಲೈನ್ ಅಪರಾಧ ಕೇಸ್​ಗಳ ಪೈಕಿ 738 ಕೇಸ್​ಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿರುವಂಥದ್ದಾಗಿವೆ. 2019ರಲ್ಲಿ ಮಕ್ಕಳ ವಿರುದ್ಧ ಆಗಿರುವ ಸೈಬರ್ ಅಪರಾಧಗಳ ಸಂಖ್ಯೆ 164, 2018ರಲ್ಲಿ ಇದು 117 ಮತ್ತು 2017ರಲ್ಲಿ ಇದು 79 ಇತ್ತು. 2020ರ ದತ್ತಾಂಶ ಸಣ್ಣ ಪ್ರಮಾಣದ್ದೆಂಬಂತೆ ಭಾಸವಾದರೂ 2019ಕ್ಕೆ ಹೋಲಿಸಿದರೆ ಹೆಚ್ಚಾಗಿರುವ ಪ್ರಮಾಣ ಎಚ್ಚರಿಕೆ ನೀಡುವಂಥದ್ದು. ಯುನಿಸೆಫ್​ನ 2020ರ ವರದಿ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 25 ವರ್ಷ ಮತ್ತು ಅದರೊಳಗಿನವರ ಪೈಕಿ ಶೇಕಡ 13 ಜನರಿಗೆ ಇಂಟರ್​ನೆಟ್ ಸೌಲಭ್ಯ ಮನೆಯಲ್ಲೇ ಸಿಕ್ಕಿದೆ. ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಶಾಲೆ ಹೋಗುವ ಮಕ್ಕಳ (3-17ರ ವಯೋಮಾನ) ಪೈಕಿ ಶೇಕಡ 14 ಮಕ್ಕಳಿಗೆ ಮನೆಯಲ್ಲೇ ಇಂಟರ್​ನೆಟ್ ಸೌಲಭ್ಯ ಲಭ್ಯವಿದೆ.
ಮಕ್ಕಳಿಗೆ ಇಂಟರ್​ನೆಟ್:ಯುನಿಸೆಫ್​ನ 2020ರ ವರದಿಯ ಪ್ರಕಾರ ಕೋವಿಡ್ ಸಂಕಷ್ಟದ ಅವಧಿಯಲ್ಲಿ ಭಾರತದ 16 ರಾಜ್ಯಗಳ 37.6 ದಶಲಕ್ಷ ಮಕ್ಕಳಿಗೆ ಆನ್​ಲೈನ್ ಕ್ಲಾಸ್​ರೂಮ್ ರೇಡಿಯೋ ಕಾರ್ಯಕ್ರಮ ಸೇರಿ ದೂರ ಶಿಕ್ಷಣ ಉಪಕ್ರಮದ ಪ್ರಯೋಜನ ಸಿಕ್ಕಿದೆ. ಆದಾಗ್ಯೂ, ದೇಶದಲ್ಲಿ ಎಷ್ಟು ಮಕ್ಕ ಳಿಗೆ ಇಂಟರ್​ನೆಟ್ ಸೌಲಭ್ಯ ಸಿಕ್ಕಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಒಂದು ನಿರ್ಧಾರಕ್ಕೆ ಬರಬಹುದಾದ ರೀತಿಯ ನಿರ್ಣಾಯಕ ಡೇಟಾ ಲಭ್ಯವಿಲ್ಲ.
ಮಾರ್ಗದರ್ಶನದ ಅಗತ್ಯ:ಇಂಟರ್​ನೆಟ್ ಬಳಕೆ ವಿಚಾರದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಆದರೆ ಸಮಾಜದಲ್ಲಿ ಈ ತಿಳಿವಳಿಕೆ ನೀಡಬೇಕಾದವರಿಗೆ ಈ ಬಗ್ಗೆ ಅರಿವಿನ ಕೊರತೆ ಇದೆ. ಇಂಟರ್​ನೆಟ್ ಜಗತ್ತಿನಲ್ಲಿ ಮಕ್ಕಳು ಎದುರಿಸುವ, ಎದುರಿಸಬೇಕಾಗುವ ಅಪಾಯಗಳನ್ನು ವಿವರಿಸಬೇಕು. ಇದಕ್ಕಾಗಿ ಒಂದು ಸಾಮಾನ್ಯ ಕೈಪಿಡಿಯ ಕೊರತೆ ಇದೆ. ಈ ಕುರಿತ ಮಾಹಿತಿಗಳು ಹರಿದು ಹಂಚಿ ಹೋಗಿವೆ. ಅವುಗಳನ್ನು ಕ್ರೋಡೀಕರಿಸಿ ಪಾಲಕರಿಗೆ, ಶಿಕ್ಷಣ ನೀಡುವವರಿಗೆ, ಮಕ್ಕಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಆತಂಕದಲ್ಲಿ ಮಕ್ಕಳ ಯೋಗಕ್ಷೇಮ:ಲಾಕ್​ಡೌನ್ ಮತ್ತು ಶಾಲೆಗಳು ಮುಚ್ಚಿದ ಪರಿಣಾಮ ಸಮಾಜದಲ್ಲಿ ಬೆರೆಯುವ ಅವಕಾಶ ಸಿಗದೆ ಮಕ್ಕಳ ಮಾನಸಿಕ, ಸಾಮಾಜಿಕ ಯೋಗಕ್ಷೇಮವು ಆತಂಕದಲ್ಲಿದೆ. ಇದು ಮಕ್ಕಳಲ್ಲಿ ಒಂಟಿತನ, ಭಾವನೆಗಳ ವೈಪರೀತ್ಯ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಇದರ ಪರಿಣಾಮ ಮಕ್ಕಳು ಅನಿವಾರ್ಯವಾಗಿ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಂಟರ್​ನೆಟ್ ಬಳಕೆ ಹೆಚ್ಚಿಸಿದ್ದಾರೆ. ಇದು ಮಕ್ಕಳನ್ನು ಗೊತ್ತಿಲ್ಲದೆಯೇ ಲೈಂಗಿಕ ಶೋಷಣೆಯ ಬಲೆಗೆ ಬೀಳುವಂತೆ ಮಾಡಿರಬಹುದು. ಇದಕ್ಕೇ ಕಳೆದ ವರ್ಷ ಸೈಬರ್ ಕ್ರೖೆಂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಚೈಲ್ಡ್ ರೈಟ್ಸ್ ಆಂಡ್ ಯು(ಕ್ರೖೆ) ಸಂಸ್ಥೆಯ ಸಿಇಒ ಪೂಜಾ ಮರ್ವಾಹ ಹೇಳಿದ್ದಾರೆ.
ಮಕ್ಕಳ ಡಿಜಿಟಲ್ ಹಕ್ಕುಗಳು:ಸದ್ಯದ ಪರಿಸ್ಥಿತಿಯಲ್ಲಿ ಡಿಜಿಟಲ್ ಲೋಕದಲ್ಲಿ ಮಕ್ಕಳ ಡಿಜಿಟಲ್ ಹಕ್ಕುಗಳ ಸಂರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಇಂಟರ್​ನೆಟ್ ಆಡಳಿತ ನೀತಿ ಮತ್ತು ಮಕ್ಕಳ ರಕ್ಷಣೆ ವಿಚಾರಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಬೇಕಾಗಿದೆ. ಶಾಸನಾತ್ಮಕ ಮತ್ತು ನೀತಿ ನಿಯಮಗಳ ನಡುವೆ ಇರುವ ಅಂತರವನ್ನು ಸರಿದೂಗಿಸುವುದು ಇಂದಿನ ಅವಶ್ಯಕತೆಯಾಗಿದೆ. ಸೈಬರ್ ಬುಲ್ಲಿಯಿಂಗ್, ಸೆಕ್ಸ್​ಟಿಂಗ್ ಮುಂತಾದವುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಮರ್ವಾಹ ಪ್ರತಿಪಾದಿಸಿದ್ದಾರೆ.
ಮಕ್ಕಳ ಮೇಲಿನ ದೌರ್ಜನ್ಯ:ಭಾರತದಲ್ಲಿ ಕಳೆದ ವರ್ಷ ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ 1,28,531 ಇತ್ತು. 2019ರಲ್ಲಿ ಇದು 1,48,185 ಇತ್ತು. ಪ್ರತಿನಿತ್ಯ 400ಕ್ಕೂ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ ನಡೆದಿದೆ. ಅಪರಾಧ ಪ್ರಕರಣದಲ್ಲಿ ಇಳಿಕೆಯಾದರೂ, ಆನ್​ಲೈನ್ ಅಪರಾಧ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಬೆಡ್​ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..
ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − two =
Remember me
