ಬೆಂಗಳೂರು :ಕರೊನಾ ಉಲ್ಬಣದ ಹಿನ್ನೆಲೆಯಲ್ಲಿ ರೆಮ್​ಡೆಸಿವಿರ್ ಚುಚ್ಚುಮದ್ದು ಮತ್ತು ಆಕ್ಸಿಜನ್ ಸಿಲಿಂಡರ್​ಗಳನ್ನು ಪೂರೈಸುವ ಸೋಗಿನಲ್ಲಿ ಜನರಿಗೆ ವಂಚನೆ ಮಾಡುತ್ತಿರುವ ಸೈಬರ್​ ಕಳ್ಳರು ಇದೀಗ ಬ್ಲ್ಯಾಕ್ ಫಂಗಸ್​ ಔಷಧದತ್ತಲೂ ಮುಖ ಮಾಡಿದ್ದಾರೆ. ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಯಲ್ಲಿ ಬಳಸಲಾಗುವ ಮತ್ತು ಸಾಕಷ್ಟು ಪೂರೈಕೆ ಇಲ್ಲದ ಔಷಧಿಯೊಂದನ್ನು ಪೂರೈಸುವುದಾಗಿ ಹೇಳಿ ಖದೀಮನೊಬ್ಬ ಸುಮಾರು 8 ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿರುವ ಪ್ರಸಂಗ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿವಾಸಿಯಾದ ಗೋವಿಂದರಾಜು ಎಂಬುವರಿಂದ ಈ ಬಗ್ಗೆ ಸೈಬರ್ ಸೆಲ್ ಪೊಲೀಸರಿಗೆ ದೂರು ಬಂದಿದೆ. ಗೋವಿಂದರಾಜು ಅವರ ಮಗನಿಗೆ ಕರೊನಾ ಸೋಂಕು ತಗುಲಿದ್ದು, ತದನಂತರ ಬ್ಲ್ಯಾಕ್ ಫಂಗಸ್​ ಸೋಂಕು ತಗುಲಿತು. ಅದಕ್ಕಾಗಿ ವೈದ್ಯರು ಆ್ಯಂಫೋಟೆರಿಸಿನ್ ಬಿ ಎಂಬ ಔಷಧಿಯ ಅಗತ್ಯವಿದ್ದು, ಆಸ್ಪತ್ರೆಯಲ್ಲಿ ಸ್ಟಾಕ್ ಇಲ್ಲದ ಕಾರಣ ಹೊರಗಿಂದ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಇದನ್ನೂ ಓದಿ:ಅರ್ಧದಷ್ಟು ಭಾರತೀಯರು ಮಾಸ್ಕ್​ ತೊಡುತ್ತಿಲ್ಲ ! ಶೇ.7 ಜನ ಸರಿಯಾಗಿ ತೊಡುತ್ತಿದ್ದಾರೆ !
ಅದಕ್ಕಾಗಿ ಕುಟುಂಬದವರು ಜಾಲತಾಣದಲ್ಲೂ ಬೇಡಿಕೆಯಿಟ್ಟು ಎಲ್ಲೆಡೆ ವಿಚಾರಿಸುತ್ತಿರುವಾಗ, ಅಶೋಕ್ ಎಂಬ ವ್ಯಕ್ತಿ ಮೆಡಿಕಲ್ ರೆಪ್ರೆಸೆಂಟಿಟೀವ್ ಆಗಿ ಅವರ ಸೊಸೆಯನ್ನು ಸಂಪರ್ಕಿಸಿದ. ಔಷಧಿಗಾಗಿ 7.9 ಲಕ್ಷ ರೂ. ವರ್ಗಾಯಿಸಿದ ತಕ್ಷಣ ಔಷಧಿ ಕೊರಿಯರ್ ಮೂಲಕ ಕಳುಹಿಸುವುದಾಗಿ ಭರವಸೆ ನೀಡಿದ. ಅದರಂತೆ ಆನ್​​ಲೈನ್​ ಮೂಲಕ ಹಣ ವ​ರ್ಗಾಯಿಸಿದ ನಂತರ ಆತನ ಫೋನ್ ಸ್ವಿಚ್​ ಆಫ್ ಆಗಿದ್ದು, ಆಗಿನಿಂದ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)
ಕರೊನಾ ನಿಯಮ ಗಾಳಿಗೆ ತೂರಿ ಅಂದರ್​ ಬಾಹರ್ ! 27 ಜನರ ಬಂಧನ

ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
