ಹೈದರಾಬಾದ್​:ಸೈಬರಾಬಾದ್​ ಪೊಲೀಸರು ಅನುಸರಿಸುತ್ತಿರುವ ಹೊಸ ನಡೆಯು ಇತರರಿಗೆ ಖಂಡಿತವಾಗಿ ಮಾದರಿಯಾಗಲಿದೆ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತೃತೀಯ ಲಿಂಗಿ ಸಮುದಾಯದ ಬೆನ್ನಿಗೆ ನಿಲ್ಲಲು ಮುಂದಾಗಿರುವ ಸೈಬರಾಬಾದ್​ ಪೊಲೀಸರು ಅವರಿಗಾಗಿ ಪ್ರತ್ಯೇಕ ಕೊಠಡಿಯನ್ನು ತೆರೆದು ಸಮಸ್ಯೆಗಳನ್ನು ಬಗೆಹರಿಸುವ ಪೂರ್ವ ತಯಾರಿಯಲ್ಲಿದ್ದಾರೆ.
ತೃತೀಯ ಲಿಂಗಿ ಸಮುದಾಯದ ಸುಮಾರು 150 ಮಂದಿಯೊಂದಿಗೆ ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಸಿ ಸಜ್ಜನರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಚರ್ಚೆಯಲ್ಲಿ ಈ ವಿಶೇಷವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೈಬರಾಬಾದ್​ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ಅಳವಡಿಸಲು ತೀರ್ಮಾನಿಸಿರುವುದಾಗಿ ಆಯುಕ್ತರು ಘೋಷಿಸಿದರು.
ಇದನ್ನೂ ಓದಿರಿ:ಮದುವೆ ದಿನವೇ ನಾಪತ್ತೆಯಾದ ವಧು! ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದ ವರ!
ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯದ ಸಮಸ್ಯೆಗಳು ಮತ್ತು ಅವರ ಮೇಲಿನ ಕಾಳಜಿ ಬಗ್ಗೆ ಅರಿತುಕೊಳ್ಳುವುದು ಸೇರಿದಂತೆ ಅವರ ಸಮಸ್ಯೆಗೆ ಸಾಧ್ಯವಾಗುವ ಪರಿಹಾರಗಳನ್ನು ಹುಡುಕುವುದು ಈ ವಿಶೇಷ ಹೆಜ್ಜೆ ಮೂಲ ಉದ್ದೇಶವಾಗಿದೆ. ಸಾಮಾಜಿಕ ಕಾರ್ಯಕರ್ತೆ ಸುನಿತಾ ಕೃಷ್ಣನ್​ ಮನವಿ ಮೇರೆಗೆ ಈ ವಿನೂತನ ಪ್ರಯತ್ನಕ್ಕೆ ಸೈಬರಬಾದ್​ ಪೊಲೀಸರು ಕೈಹಾಕಿದ್ದಾರೆ.
ಇದೀಗ ಸೈಬರಬಾದ್​ ಪೊಲೀಸರ ನಡೆಗೆ ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಎಲ್ಲ ಪೊಲೀಸರು ಈ ವ್ಯವಸ್ಥೆಯನ್ನು ಅನುಸರಿಸಿದರೆ ತೃತೀಯ ಲಿಂಗಿಗಳ ಮೇಲಿನ ದೌರ್ಜನ್ಯ ಮತ್ತು ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ ಎಂಬುದು ಎಲ್ಲರ ಮಾತಾಗಿದೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

‘ಸಜ್ಜನರ’ ಕೆಲಸ ಎಂದರೆ ಇದು.. ಬಾಂಗ್ಲಾ ಟು ಹೈದರಾಬಾದ್​, ಆ ರಾತ್ರಿ ಏನಾಯ್ತು?

ಬಿಜೆಪಿ ಶಾಸಕನಿಗೆ ಖಡಕ್​ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್..!

ಎಲೆಕ್ಟ್ರಾನಿಕ್ಸ್​ ಚಿಪ್​ ಅಳವಡಿಸಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್ಸ್​ ಸೀಜ್! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
